ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಕರ ನಡಿಗೆ ಯೋಜನೆ ರದ್ದು

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 26: ಬಾಹ್ಯಾಕಾಶದಲ್ಲಿ ಮೊದಲ ಸಂಪೂರ್ಣ ಮಹಿಳಾ ಪಯಣದ ನಾಸಾದ ಮಹತ್ವಾಕಾಂಕ್ಷಿ ಯೋಜನೆಯ ಕನಸು ಭಗ್ನಗೊಂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾರ್ಚ್ 29ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಮೆರಿಕದ ಗಗನಯಾತ್ರಿಕರಾದ ಆನ್ನೆ ಮೆಕ್‌ಕ್ಲೈನ್ ಮತ್ತು ಕ್ರಿಸ್ಟೀನಾ ಕೋಚ್ ಮೊದಲ ಸಂಪೂರ್ಣ ಮಹಿಳಾ ಬಾಹ್ಯಾಕಾಶ ನಡಿಗೆ ಮಾಡಬೇಕಿತ್ತು. ಆದರೆ, ಈ ವಿಶಿಷ್ಟ ಗಳಿಗೆಯ ಕನಸಿಗೆ ವಿಘ್ನ ಎದುರಾಗಿದ್ದು, ಯೋಜನೆ ರದ್ದುಗೊಂಡಿದೆ.

ಮಂಗಳದ ಮೇಲೆ ಕಾಲಿರಿಸಲಿರುವ ಮೊದಲ ವ್ಯಕ್ತಿ ಮಹಿಳೆ : ನಾಸಾ ಮಂಗಳದ ಮೇಲೆ ಕಾಲಿರಿಸಲಿರುವ ಮೊದಲ ವ್ಯಕ್ತಿ ಮಹಿಳೆ : ನಾಸಾ

ಬಾಹ್ಯಾಕಾಶ ನಡಿಗೆಗೆಂದು ವಿನ್ಯಾಸ ಮಾಡುವ ವಿಶೇಷ ಉಡುಪಿನ ಕೊರತೆ ಎದುರಾಗಿರುವುದೇ ಈ ಯೋಜನೆ ರದ್ದುಗೊಳ್ಳಲು ಕಾರಣ. ಮಧ್ಯಮ ಗಾತ್ರದ ಒಂದೇ ಒಂದು ಉಡುಗೆ ಶುಕ್ರವಾರದ ವೇಳೆಗೆ ಲಭ್ಯವಿರಲಿದೆ. ಅದು ಕ್ರಿಸ್ಟೀನಾ ಕೋಚ್ ಅವರಿಗೆ ಹೊಂದಿಕೆಯಾಗುತ್ತದೆ. ಮೆಕ್‌ಕ್ಲೈನ್ ಅವರಿಗೆ ಸರಿಹೊಂದುವ ಬಾಹ್ಯಾಕಾಶ ಉಡುಗೆ ಲಭ್ಯವಾಗಿಲ್ಲ.

Nasa cancels first all female spacewalk, citing lack of spacesuit in right size

ಸೋವಿಯತ್‌ನ ಸ್ವೆಟ್ಲಾನಾ ಸವಿತ್ಸ್ಕಾಯ ಬಾಹ್ಯಾಕಾಶ ನಡಿಗೆ ಮಾಡಿದ ಮೊದಲ ಮಹಿಳೆಯಾಗಿದ್ದಾರೆ. ಇದುವರೆಗೂ ಬಾಹ್ಯಾಕಾಶ ನಿಲ್ದಾಣಕ್ಕೆ 500ಕ್ಕೂ ಅಧಿಕ ಮಂದಿ ತೆರಳಿದ್ದಾರೆ. ಆದರೆ ಅವರಲ್ಲಿ ಶೇ 11ರಷ್ಟು ಮಾತ್ರ ಮಹಿಳೆಯರಿದ್ದಾರೆ.

English summary
Nasa cancels its first ever all female spacewalk, because the agency doesn't have enough spacesuits that fit the austronauts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X