• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಹ್ಯಾಕಾಶ ನಡಿಗೆ: ನಾಸಾದ ಮಹಿಳಾ ಗಗನಯಾನಿಗಳಿಂದ ಇತಿಹಾಸ ಸೃಷ್ಟಿ

|

ವಾಷಿಂಗ್ಟನ್, ಅಕ್ಟೋಬರ್ 19: ವಿಜ್ಞಾನ ಲೋಕದ ಇತಿಹಾಸದಲ್ಲಿಯೇ ಮೊದಲ ಬಾರಿ ನಾಸಾದ ಇಬ್ಬರು ಗಗನಯಾನಿಗಳು ಸಂಪೂರ್ಣ ಮಹಿಳಾ ಬಾಹ್ಯಾಕಾಶ ನಡಿಗೆ ನಡೆಸುವ ಮೂಲಕ ದಾಖಲೆ ಬರೆದಿದ್ದಾರೆ.

ಅಮೆರಿಕದ ಗಗನಯಾನಿಗಳಾದ ಕ್ರಿಸ್ಟಿನಾ ಕೋಚ್ ಮತ್ತು ಜೆಸ್ಸಿಕಾ ಮೀರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಶುಕ್ರವಾರ ಬೆಳಗ್ಗೆ 7.38ರ ವೇಳೆಗೆ ಹಾಳಾಗಿದ್ದ ಬ್ಯಾಟರಿ ಚಾರ್ಜರ್ ಯುನಿಟ್ಅನ್ನು ಬದಲಿಸುವ ಕಾರ್ಯಕ್ಕಾಗಿ ಸ್ವತಂತ್ರವಾಗಿ ಬ್ಯಾಹಾಕಾಶ ನಡಿಗೆ ಮಾಡಿದ್ದಾರೆ.

ಚಂದ್ರಯಾನ 2: ಇಸ್ರೋಗೆ ಮತ್ತೊಮ್ಮೆ ಭರವಸೆ ನೀಡಿದ ನಾಸಾ

ಬಾಹ್ಯಾಕಾಶದಲ್ಲಿ ಪುರುಷರ ಸಂಗಡವಿಲ್ಲದೆ ಮಹಿಳೆಯರೇ ನಡೆದು ಸಾಗುವ ಯೋಜನೆಯು ಈ ಮೊದಲು ಉದ್ದೇಶಿಸಿದ್ದಕ್ಕಿಂತ ಏಳು ತಿಂಗಳ ಬಳಿಕ ನೆರವೇರಿದೆ. ಬಾಹ್ಯಾಕಾಶ ನಡಿಗೆಗೆ ಅಗತ್ಯವಾದ ಮಧ್ಯಮಗಾತ್ರದ ದಿರಿಸು ಒಂದು ಮಾತ್ರ ಲಭ್ಯವಿತ್ತು. ನಾಸಾ ಸಂಸ್ಥೆಯು ಈ ನಡಿಗೆಗೆ ಪೂರಕವಾಗಿ ಸಿದ್ಧಪಡಿಸಲಾದ ಮಧ್ಯಮಗಾತ್ರದ ಮತ್ತೊಂದು ಬಾಹ್ಯಾಕಾಶ ಉಡುಗೆಯನ್ನು ಅಕ್ಟೋಬರ್ ಆರಂಭದಲ್ಲಿ ಒದಗಿಸಿತ್ತು.

ಕೋಚ್ ಮತ್ತು ಮೀರ್ ನಡಿಗೆ

ಕೋಚ್ ಮತ್ತು ಮೀರ್ ನಡಿಗೆ

ಎಕ್ಸ್ಟ್ರಾ ವೆಹಿಕ್ಯುಲರ್ ಆಕ್ಟಿವಿಟಿ (ಇವಿಎ) ಎಂದು ಕರೆಯಲಾಗುವ ಬಾಹ್ಯಾಕಾಶ ನಡಿಗೆಯಲ್ಲಿ ಕೋಚ್ ಮೊದಲು ಹೆಜ್ಜೆ ಇರಿಸಿದರೆ, ಮೀರ್ ಅವರನ್ನು ಹಿಂಬಾಲಿಸಿದರು. ಆರಂಭದಲ್ಲಿ ಈ ನಡಿಗೆಯು 5.30 ಗಂಟೆಯವರೆಗೆ ಎಂದು ನಿಗದಿಪಡಿಸಲಾಗಿತ್ತು. ಆದರೆ ಇಬ್ಬರೂ ಮಹಿಳಾ ಗಗನಯಾನಿಗಳು ಪ್ರಮುಖ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಏಳು ಗಂಟೆಗೂ ಹೆಚ್ಚು ಅವಧಿಗೆ ನಡಿಗೆಯನ್ನು ವಿಸ್ತರಿಸಿದರು. ಇದರಿಂದ ಈ ಅವಧಿಯಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಚಟುವಟಿಕೆಗಳನ್ನು ಕೂಡ ಅವರು ಪೂರೈಸಿದರು.

ಅವಕಾಶ ಹೆಚ್ಚಬಹುದು

ಅವಕಾಶ ಹೆಚ್ಚಬಹುದು

'ಇದು ಬಹಳ ಮಹತ್ವದ ಸಂಗತಿ ಎಂದು ನನಗನ್ನಿಸುತ್ತದೆ. ಏಕೆಂದರೆ ನಾವು ಮಾಡುತ್ತಿರುವುದು ಐತಿಹಾಸಿಕ ಸಾಧನೆ. ಈ ಹಿಂದೆ ಮಹಿಳೆಯರಿಗೆ ಯಾವ ಚಟುವಟಿಕೆಗಳಲ್ಲಿಯೂ ಆದ್ಯತೆ ಸಿಗುತ್ತಿರಲಿಲ್ಲ. ಎಲ್ಲಾ ರೀತಿಯ ಕೊಡುಗೆಗಳು ಒಪ್ಪಿತವಾಗುತ್ತಿರುವ ಮತ್ತು ಪ್ರತಿಯೊಬ್ಬರೂ ಅವರದೇ ಪಾತ್ರ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬಾಹ್ಯಾಕಾಶ ಯೋಜನೆಗೆ ನಮ್ಮಿಂದ ಕೊಡುಗೆ ಸಿಗುತ್ತಿರುವುದು ಅದ್ಭುತ ಅನುಭವ. ಈ ಯಶಸ್ಸು ಅವಕಾಶಗಳನ್ನು ಹೆಚ್ಚಿಸಲು ಕಾರಣವಾಗಬಹುದು' ಎಂದು ಕೋಚ್ ಹೇಳಿದ್ದಾರೆ.

ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್

14 ಮಹಿಳೆಯರು ಭಾಗಿ

14 ಮಹಿಳೆಯರು ಭಾಗಿ

ಇದುವರೆಗೂ 213 ಪುರುಷರು ಮತ್ತು 14 ಮಹಿಳೆಯರು ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಇದರಲ್ಲಿ ಮೊದಲು ಮಹಿಳೆ ಪಾಲ್ಗೊಂಡಿದ್ದು 1984ರಲ್ಲಿ. ರಷ್ಯಾದ (ಆಗಿನ ಯುಎಸ್‌ಎಸ್‌ಆರ್) ಸ್ವೆಟ್ಲನಾ ಸವಿಟ್ಸಕಾಯ ಸಲ್ಯುಟ್ 7 ಬಾಹ್ಯಾಕಾಶ ನಿಲ್ದಾಣದಿಂದ ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಈ ರೀತಿಯ ಚಟುವಟಿಕೆಗಳಲ್ಲಿ ಪ್ರತಿಬಾರಿಯೂ ಪುರುಷ ಗಗನಯಾನಿಗಳು ಕೂಡ ಜತೆಗಿರುತ್ತಿದ್ದರು.

ಕ್ರಿಸ್ಟಿನಾ ಕೋಚ್ 328 ದಿನ

ಕ್ರಿಸ್ಟಿನಾ ಕೋಚ್ 328 ದಿನ

40 ವರ್ಷದ ಕ್ರಿಸ್ಟಿನಾ ಕೋಚ್ ಅವರು ಫೆಬ್ರವರಿಯವರೆಗೂ ಐಎಸ್ಎಸ್‌ನಲ್ಲಿ ಇರಲಿದ್ದಾರೆ. ಇದರಿಂದ ಅವರು ಒಟ್ಟು 328 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿದಂತೆ ಆಗಲಿದೆ. ಗಗನಯಾನಿ ಸ್ಕಾಟ್ ಕೆಲ್ಲಿ 340 ದಿನ ಐಎಸ್ಎಸ್‌ನಲ್ಲಿದ್ದದ್ದು ಮಹಿಳೆಯೊಬ್ಬರ ಸುದೀರ್ಘಾವಧಿ ದಾಖಲೆಯಾಗಿದೆ. ಬಾಹ್ಯಾಕಾಶ ನಡಿಗೆಯು ಕೋಚ್ ಅವರ ದೇಹದ ಮೇಲೆ ಯಾವ ಪರಿಣಾಮಗಳನ್ನು ಬೀರಿದೆ ಎಂಬ ಮಾಹಿತಿಗಳನ್ನು ಕಲೆಹಾಕುವ ಕಾರ್ಯದಲ್ಲಿ ಸಂಶೋಧಕರು ನಿರತರಾಗಿದ್ದಾರೆ.

ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ

ಚಂದ್ರನ ಮೇಲೆ ಮಹಿಳೆ

ಚಂದ್ರನ ಮೇಲೆ ಮಹಿಳೆ

ಸ್ಪೇಸ್ ವಾಕ್‌ಗೂ ಮುನ್ನ ಅದರ ಬಗ್ಗೆ ವಿವರಣೆ ನೀಡಿದ ನಾಸಾದ ಆಡಳಿತಗಾರ ಜಿಮ್ ಬ್ರೈಡನ್ ಸ್ಟಿನ್ 2024ರಲ್ಲಿ ಸಂಸ್ಥೆಯು ಚಂದ್ರನಲ್ಲಿಗೆ ಅಪೋಲೋ ಯೋಜನೆಯಡಿ 'ಮುಂದಿನ ಪುರುಷ ಮತ್ತು ಮೊದಲ ಮಹಿಳೆ'ಯನ್ನು ಕಳುಹಿಸಲಿದೆ ಎಂದು ತಿಳಿಸಿದರು. 1969ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿರಿಸಿದ 55 ವರ್ಷಗಳ ಬಳಿಕ ಕೊನೆಗೂ ಮಹಿಳೆ ಚಂದ್ರನ ಮೇಲೆ ಕಾಲಿರಿಸುವ ಗಳಿಗೆ ಬರಲಿದೆ.

English summary
NASA's two astronauts Christina Koch and Jessica Meir have created history after successfully finishing first ever all-female spacewalk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more