ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ; ಬಾಹ್ಯಾಕಾಶದಲ್ಲಿ ಅತಿಹೆಚ್ಚು ದಿನ ಇದ್ದು, ಭೂಮಿಗೆ ಬಂದ ಗಗನಯಾತ್ರಿ!

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 6; ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಒಂದು ವರ್ಷದ ಬಳಿಕ ಗಗನಯಾತ್ರಿಗಳು ಭೂಮಿಗೆ ಆಗಮಿಸಿರುವ ಸನ್ನಿವೇಶ ಗುರುವಾರ ವಿಜ್ಞಾನ ಪ್ರಿಯರಲ್ಲಿ ಸಂಚಲನ ಸೃಷ್ಠಿಸಿತು.

ಗುರುವಾರ ಈ ಕುರಿತು ರಾಷ್ಟ್ರೀಯ National Aeronautics and Space Administration (NASA) ಹರ್ಷ ವ್ಯಕ್ತಪಡಿಸಿದ್ದು, ಮೂವರು ಗಗನಯಾತ್ರಿಗಳನ್ನು ಕಜಕ್‌ಸ್ತಾನ್‌ದ ಹುಲ್ಲುಗಾವಲಿನಲ್ಲಿ ಭೂಮಿಗೆ ಸ್ವಾಗತಿಸಿದೆ. ಇದರಲ್ಲಿದ್ದ ನಾಸಾದ ಕ್ರಿಸ್ಟಿನಾ ಕೋಚ್ ಎಂಬ ಗಗನಯಾತ್ರಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್ ಹೆಸರಿನಲ್ಲಿದ್ದ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

Nasa Astronaut Christina Koch Back To Land From International Space Station

ಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾ

ಅತಿ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿದ್ದು ವಾಪಸ್ ಭೂಮಿಗೆ ಬಂದಿರುವ ಮಹಿಳಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಕ್ರಿಸ್ಟಿನಾ ಅವರನ್ನು ಭೂಮಿಗೆ ಸ್ವಾಗತಿಸಿದಾಗ ಅವರು ಅತೀವ ಸಂತಸ ವ್ಯಕ್ತಪಡಿಸಿ ನಗುತ್ತಿರುವ ದೃಶ್ಯವನ್ನು ಟ್ವೀಟ್ ಮಾಡಿರುವ ನಾಸಾ 'ಎಂತಹ ಅದ್ಭುತ ನಗು' ಎಂದು ಪ್ರಶಂಸಿದೆ. ಜಗತ್ತಿನಾದ್ಯಂತ ಶುಭಾಶಯಗಳು ಕ್ರಿಸ್ಟಿನಾ ಅವರಿಗೆ ಸಂದಿವೆ.

ಇದಕ್ಕೂ ಮುನ್ನ 2019 ರ ಡಿಸೆಂಬರ್ ನ 28 ರಲ್ಲಿ ನಾಸಾದ ಪೆಗ್ಗಿ ವಿಟ್ಸನ್ ಎಂಬುವವರು 289 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಾಪಸ್ ಭೂಮಿಗೆ ಬಂದಿದ್ದರು. 328 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಾಪಸ್ಸಾಗುವ ಮೂಲಕ ಈ ದಾಖಲೆಯನ್ನು ಮಿಚಿಗನ್ ಮೂಲದ 41 ವರ್ಷದ ಇಂಜಿನಿಯರ್ ಕ್ರಿಸ್ಟಿನಾ ಕೋಚ್ ಮುರಿದಿದ್ದಾರೆ. ಇವರ ಜೊತೆ ಗಗನಯಾತ್ರಿ ಜೆಸ್ಸಿಕಾ ಕೂಡ ವಾಪಸ್ಸಾಗಿದ್ದಾರೆ.

English summary
Nasa Astronaut Christina Koch Back To Land From Spacewalk. Astronaut Christina Koch Creates the History. She is the first Astronaut of More days spacewalk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X