ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ಯಗ್ರಹದಲ್ಲಿ ಜೀವಿಗಳ ಅಸ್ತಿತ್ವ ಪತ್ತೆ: ನಾಸಾದಿಂದ ವಿಶಿಷ್ಟ ಯೋಜನೆ

|
Google Oneindia Kannada News

ವಾಷಿಂಗ್ಟನ್, ಜೂನ್ 28: ಅನ್ಯ ಗ್ರಹಗಳಲ್ಲಿ ಜೀವಿಗಳ ಅಸ್ತಿತ್ವದ ಪತ್ತೆಗಾಗಿ ನಿರಂತರ ಸಂಶೋಧನೆಗಳನ್ನು ನಡೆಸುತ್ತಿರುವ ಅಮೆರಿದಕ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಂದು ಮಹತ್ವದ ಸಾಹಸಕ್ಕೆ ಕೈ ಹಾಕಿದೆ.

ಶನಿಯ ಚಂದ್ರ ಟೈಟಾನ್ ಮೇಲ್ಮೈ ಮೇಲೆ ಹಾರುವ ರೋಬೋಟ್‌ಅನ್ನು ಇಳಿಸಲು ನಾಸಾ ಯೋಜನೆ ರೂಪಿಸಿದೆ.

ಮಂಗಳ ಗ್ರಹದಲ್ಲೂ 'ಫೇಮಸ್' ಆಗಬೇಕೇ? ನಾಸಾದಲ್ಲಿ ಹೆಸರು ನಮೂದಿಸಿ ಮಂಗಳ ಗ್ರಹದಲ್ಲೂ 'ಫೇಮಸ್' ಆಗಬೇಕೇ? ನಾಸಾದಲ್ಲಿ ಹೆಸರು ನಮೂದಿಸಿ

ಈ ಯೋಜನೆಯಲ್ಲಿ 'ಡ್ರ್ಯಾಗನ್ ಫ್ಲೈ' ಮೊದಲ ಪ್ರಯತ್ನವಾಗಲಿದೆ. ನಾಸಾದ ಕಾರು ಗಾತ್ರದ ಈ ಡ್ರೋನ್, ಸಾವಯವ ಕಣಗಳನ್ನು ಗ್ರಹಿಸುವ ಸಾಮರ್ಥ್ಯವುಳ್ಳ ಸಾಧನಗಳನ್ನು ತನ್ನೊಂದಿಗೆ ಕೊಂಡೊಯ್ಯಲಿದೆ. 2026ರಲ್ಲಿ ಈ ಡ್ರೋನ್‌ಅನ್ನು ಉಡಾವಣೆ ಮಾಡಲು ಉದ್ದೇಶಿಸಲಾಗಿದ್ದು, ಅದು ನಿಗದಿತ ಗುರಿಯನ್ನು 2034ರಲ್ಲಿ ತಲುಪುವ ನಿರೀಕ್ಷೆಯಿದೆ. ಬಳಿಕ ಅದು ನೂರಾರು ಮೈಲು ದೂರದವರೆಗೂ ವಿವಿಧ ಸ್ಥಳಗಳಿಗೆ ಹಾರಲಿದೆ.

Nasa aims to send dragonfly drone to saturn moon titan search for life

ಶನಿ ಗ್ರಹದ ಚಂದ್ರ 'ಟೈಟಾನ್' ಬುಧ ಗ್ರಹಕ್ಕಿಂತಲೂ ಗಾತ್ರದಲ್ಲಿ ದೊಡ್ಡದಾಗಿದೆ. ಅಲ್ಲದೆ ಭೌಗೋಳಿಕವಾಗಿ ಭೂಮಿಯಂತೆಯೇ ವೈವಿಧ್ಯ ಹೊಂದಿದೆ. ಈ ಬೃಹತ್, ತಣ್ಣಗಿನ ಚಂದ್ರನಲ್ಲಿ ದಪ್ಪನೆಯ ಮೀಥೇನ್ ವಾತಾವರಣವಿದೆ. ಜತೆಗೆ ಹಿಮದ ಬೆಟ್ಟಗಳಿದ್ದು, ಭೂಮಿಯೆಡೆಗಿನ ಸೌರ ವ್ಯವಸ್ಥೆಯಲ್ಲಿನ ಮೇಲ್ಮೈ ಮಾತ್ರ ಗೋಚರಿಸುತ್ತದೆ. ನದಿಗಳು ಮತ್ತು ಸರೋವರಗಳು ದ್ರವ ಹೈಡ್ರೋಕಾರ್ಬನ್‌ಗಳಿಂದ ಕೂಡಿವೆ. ಇದರ ಮೇಲಿನ ನೀರು ಘನೀಕರಿಸಿದ್ದು, ಅದರ ಅಡಿ ಭಾಗದಲ್ಲಿ ಸಮುದ್ರದ ಹರಿವಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಕುಗ್ಗುತ್ತಿರುವ ಚಂದ್ರನಲ್ಲಿ ಕಂಪನ ಉಂಟಾಗುವ ಸಾಧ್ಯತೆ ಇದೆಯೆಂದ ವಿಜ್ಞಾನಿಗಳು, ನಾಸಾದಿಂದ ಸಾಕ್ಷ್ಯ ಕುಗ್ಗುತ್ತಿರುವ ಚಂದ್ರನಲ್ಲಿ ಕಂಪನ ಉಂಟಾಗುವ ಸಾಧ್ಯತೆ ಇದೆಯೆಂದ ವಿಜ್ಞಾನಿಗಳು, ನಾಸಾದಿಂದ ಸಾಕ್ಷ್ಯ

ಹೀಗಾಗಿ ಟೈಟಾನ್‌ನಲ್ಲಿ ಜೀವಿಗಳು ಉಗಮವಾಗಲು ಅವಶ್ಯವಿರುವ ಎಲ್ಲ ರೀತಿಯ ವಾತಾವರಣ ಮತ್ತು ಪರಿಸರ ವ್ಯವಸ್ಥೆ ಇದೆ ಎಂದು ನಾಸಾದ ಗ್ರಹ ವಿಜ್ಞಾನ ವಿಭಾಗದ ನಿರ್ದೇಶಕ ಲೋರಿ ಗ್ಲೇಜ್ ತಿಳಿಸಿದ್ದಾರೆ.

ಡ್ರ್ಯಾಗನ್ ಫ್ಲೈ ರೋಬೋಟ್, ಭೂಮಿಯ ಹುಟ್ಟಿನ ಆರಂಭದಲ್ಲಿ ನಡೆದ ಪ್ರಕ್ರಿಯೆಗಳನ್ನು ಪತ್ತೆಹಚ್ಚಲು ಮತ್ತು ಇಂದಿನ ಜೀವನದ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಲು ನೆರವಾಗಲಿದೆ.

ಮಂಗಳ ಗ್ರಹದ ರೋವರ್ ಅಪಾರ್ಚುನಿಟಿ ನೌಕೆಗೆ ಅಂತಿಮ ವಿದಾಯಮಂಗಳ ಗ್ರಹದ ರೋವರ್ ಅಪಾರ್ಚುನಿಟಿ ನೌಕೆಗೆ ಅಂತಿಮ ವಿದಾಯ

ಡ್ರ್ಯಾಗನ್‌ಫ್ಲೈ ತೀವ್ರ ಪ್ರಮಾಣದಲ್ಲಿ ಹೈಡ್ರೋಕಾರ್ಬನ್ ಮತ್ತು ಹಿಮದ ರಾಶಿಗಳು ಆವೃತವಾಗಿರುವ ಸ್ಥಳದಲ್ಲಿ ಇಳಿಯಲಿದೆ. ನಾಸಾದ ಮಾರ್ಸ್ ರೋವರ್‌ನಂತೆಯೇ ರೇಡಿಯೋಆಕ್ಟಿವ್ ಪ್ಲುಟೋನಿಯಮ್‌ನಿಂದ ತಾಪವನ್ನು ಪಡೆದು ಕಾರ್ಯನಿರ್ವಹಿಸಲಿದೆ. ಇದರ ಎಂಟು ರೋಟೊರ್ಸ್ ಯಾವುದೇ ಚಕ್ರದ ರೋಬೋಟ್‌ಗಿಂತಲೂ ಅಧಿಕ ಅಂತರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.

English summary
NASA aims to send flying robot Dragonfly on the surface of Saturn's moon Titan by 2026 to search for life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X