ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 'ಭಾರತದ ಪಿತಾಮಹ' ಎಂದ ಡೊನಾಲ್ಡ್ ಟ್ರಂಪ್

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 24: 'ನನಗೆ ನೆನಪಿದೆ. ಭಾರತ ಮೊದಲು ಹರಿದು ಹಂಚಿಹೋಗಿತ್ತು. ದೇಶದಲ್ಲಿ ತುಂಬಾ ಒಡಕುಗಳು, ಜಗಳಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಒಬ್ಬ ತಂದೆ ಮಾಡುವಂತೆ ಎಲ್ಲವನ್ನೂ ಒಂದುಗೂಡಿಸಿದರು. ಬಹುಶಃ ಅವರು ಭಾರತದ ಪಿತಾಮಹನಂತೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

ಮೋದಿ ಅವರೊಂದಿಗೆ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ಮೋದಿ ಅವರನ್ನು ಶ್ಲಾಘಿಸಿದರು.

ಪಾಕಿಸ್ತಾನದ ಮೇಲೆ ನಂಬಿಕೆ ಇದೆ: ಡೊನಾಲ್ಡ್ ಟ್ರಂಪ್ಪಾಕಿಸ್ತಾನದ ಮೇಲೆ ನಂಬಿಕೆ ಇದೆ: ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಮತ್ತು ಇಮ್ರಾನ್ ಖಾನ್ ಒಬ್ಬರನ್ನೊಬ್ಬರು ಅರಿತುಕೊಂಡಾಗ ಜತೆಯಾಗಿ ಮಾತುಕತೆ ನಡೆಸುತ್ತಾರೆ ಎಂದು ನಾನು ನಂಬಿದ್ದೇನೆ. ಆ ಸಭೆಯಿಂದ ಸಾಕಷ್ಟು ಒಳ್ಳೆಯ ಸಂಗತಿಗಳು ಹೊರಬರಲಿವೆ ಎಂದು ಟ್ರಂಪ್ ಹೇಳಿದರು.

Narendra Modi Is Like Father Of India Donald Trump

ಮೋದಿ ಅವರೊಂದಿಗಿನ ವೈಯಕ್ತಿಕ ಬಾಂಧವ್ಯ ಬಹಳ ಚೆನ್ನಾಗಿದೆ. ಭಾರತದೊಂದಿಗೆ ಶೀಘ್ರದಲ್ಲಿಯೇ ನಾವು ವ್ಯಾಪಾರ ಒಪ್ಪಂದ ಮಾಡಲಿದ್ದೇವೆ ಎಂದು ತಿಳಿಸಿದರು.

ಪಾಕಿಸ್ತಾನ ಮತ್ತು ಭಯೋತ್ಪಾದನೆ ಕುರಿತು ಸೋಮವಾರ ನೀಡಿದ ತಮ್ಮ ಹೇಳಿಕೆಗಳ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಎರಡೂ ದೇಶಗಳ ನಡುವೆ ಮಾತುಕತೆ ನಡೆಯುವ ಅಗತ್ಯವಿದೆ ಎಂದರು. ಪಾಕಿಸ್ತಾನಕ್ಕೆ ಸಂದೇಶವನ್ನು ನಾನು ರವಾನಿಸುವುದಲ್ಲ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಾರೆ. ಮತ್ತು ಅವರು ಅದನ್ನು ಸ್ಪಷ್ಟ ಹಾಗೂ ಜೋರಾಗಿ ನೀಡುತ್ತಾರೆ. ಬಹಳ ದೊಡ್ಡದಾದ ಸಂದೇಶ ಅದಾಗಲಿದ್ದು, ಅವರು ಸನ್ನಿವೇಶವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

ಪಾಕಿಸ್ತಾನದ ಭಯೋತ್ಪಾದನೆ ಕುರಿತ ಪ್ರಶ್ನೆಗೆ ಅವರು, ಅದನ್ನು ಪ್ರಧಾನಿ ಮೋದಿ ಅವರು ನೋಡಿಕೊಳ್ಳುತ್ತಾರೆ ಎಂದರು.

ಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿ

ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಸ್ಥಾನ ಎಂಬ ಭಾರತದ ವಾದಕ್ಕೆ ಸಹಮತವಿದೆಯೇ ಎಂದು ಕೇಳಿದ ಪ್ರಶ್ನೆಗೆ ಅವರು, 'ನೀವು ಪಾಕಿಸ್ತಾನದ ಹೆಸರು ಪ್ರಸ್ತಾಪಿಸುತ್ತೀರಿ. ಆದರೆ ಭಯೋತ್ಪಾದನೆ ವಿಚಾರದಲ್ಲಿ ಇರಾನ್ ಮೊದಲ ಸ್ಥಾನದಲ್ಲಿದೆ. ನೀವು ಭಯೋತ್ಪಾದನಾ ದೇಶಗಳನ್ನು ತೆಗೆದುಕೊಂಡರೆ ಅದು ಸುದೀರ್ಘ ಸಮಯದಿಂದ ನಂ.1ನ ಸ್ಥಾನದಲ್ಲಿದೆ' ಎಂದು ಹೇಳಿದರು.

ಡೊನಾಲ್ಡ್ ಟ್ರಂಪ್ ಅವರು ನನ್ನ ಒಳ್ಳೆಯ ಸ್ನೇಹಿತ ಮಾತ್ರವಲ್ಲ, ಭಾರತಕ್ಕೂ ಉತ್ತಮ ಸ್ನೇಹಿತ ಎಂದು ನರೇಂದ್ರ ಮೋದಿ ಹೇಳಿದರು. ಗೆಳೆತನವು ಮೌಲ್ಯಗಳ ಹಂಚಿಕೆ ಆಧಾರದಲ್ಲಿ ನಡೆಯುತ್ತದೆ ಎಂದರು.

English summary
US President Donald Trump said that, PM Narendra Modi brought all together, like a father would. Maybe he is the Father of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X