ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆ ಮಾಡಲು ಭಾರತಕ್ಕೆ ಬನ್ನಿ: ಪ್ರಧಾನಿ ಮೋದಿ ಆಹ್ವಾನ

|
Google Oneindia Kannada News

Recommended Video

ಮೋದಿ ಮಾತು ಕೇಳಿ ಅಮೆರಿಕ್ಕನ್ನರು ಫುಲ್ ಖುಷ್ | Oneindia Kannada

ನ್ಯೂಯಾರ್ಕ್, ಸೆಪ್ಟೆಂಬರ್ 25: ಭಾರತದಲ್ಲಿ ಹೂಡಿಕೆ ಮಾಡಲು ಆಗಮಿಸುವಂತೆ ಜಾಗತಿಕ ಉದ್ಯಮ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.

ಭಾರತದಲ್ಲಿನ ಇತ್ತೀಚಿನ ಕಾರ್ಪೊರೇಟ್ ತೆರಿಗೆ ಕಡಿತ ಮಾಡುವ ಸರ್ಕಾರದ ನಿರ್ಧಾರವು ಹೂಡಿಕೆದಾರರಿಗೆ ಸುವರ್ಣಾವಕಾಶ ಸೃಷ್ಟಿಸಿದೆ ಎಂದಿರುವ ಮೋದಿ, ಉದ್ದಿಮೆಗಳಿಗೆ ಪೂರಕ ವಾತಾವರಣವನ್ನು ಸುಧಾರಿಸಲು ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಮೋದಿ 'ಭಾರತದ ಪಿತಾಮಹ' ಎಂದ ಡೊನಾಲ್ಡ್ ಟ್ರಂಪ್ಮೋದಿ 'ಭಾರತದ ಪಿತಾಮಹ' ಎಂದ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್‌ನಲ್ಲಿ ಬುಧವಾರ ನಡೆದ ಬ್ಲೂಮ್‌ಬರ್ಗ್ ಗ್ಲೋಬಲ್ ಬಿಜಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

 Narendra Modi Invites Global Business Community To Invest In India

'ನೀವು ಸಾಕಷ್ಟು ಅವಕಾಶವಿರುವ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ, ಭಾರತಕ್ಕೆ ಬನ್ನಿ. ಭಾರಿ ಮಾರುಕಟ್ಟೆಯಲ್ಲಿ ಸ್ಟಾರ್ಟ್‌ಅಪ್ಸ್ ಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ, ಭಾರತಕ್ಕೆ ಬನ್ನಿ. ಜಗತ್ತಿನ ಅತಿ ದೊಡ್ಡ ಮೂಲಸೌಕರ್ಯ ಪರಿಸರ ವ್ಯವಸ್ಥೆಯಲ್ಲಿ ನೀವು ಹೂಡಿಕೆ ಮಾಡಲು ಬಯಸಿದ್ದರೆ ಭಾರತಕ್ಕೆ ಬನ್ನಿ' ಎಂದು ಮೋದಿ ಜಾಗತಿಕ ಕಾರ್ಪೊರೇಟ್ ವಲಯಕ್ಕೆ ಆಹ್ವಾನ ನೀಡಿದರು.

ಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿ

ಭಾರತವು ಅಭಿವೃದ್ಧಿಯಾಗುತ್ತಿರುವ ಮೂಲಸೌಕರ್ಯಗಳ ಮೇಲೆ ಭಾರತವು ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆಗೆ 1 ಟ್ರಿಲಿಯನ್ ಡಾಲರ್ ಹೆಚ್ಚಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಗುರಿ ಹೊಂದಲಾಗಿದೆ. ಭಾರತದಲ್ಲಿ ಹೂಡಿಕೆ ಮಾಡಲು ಕಂಪೆನಿಗಳಿಗೆ ಉತ್ತೇಜನ ನೀಡಲು ಪ್ರಜಾಪ್ರಭುತ್ವ, ರಾಜಕೀಯ ಸ್ಥಿರತೆ, ನೀತಿಗಳು ಮತ್ತು ಸ್ವತಂತ್ರ ನ್ಯಾಯ ಖಚಿತತೆಯ ಹೂಡಿಕೆಗಳಿವೆ ಎಂದು ತಿಳಿಸಿದರು.

English summary
PM Naredra Modi on Wednesday in New York invited the Global Business Community to invest in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X