ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ನೀನು ಕಾನೂನಿಗಿಂತ ದೊಡ್ಡವನಲ್ಲ..! ಪೆಲೋಸಿ ವಾರ್ನಿಂಗ್ ಹೆಂಗಿತ್ತು ಗೊತ್ತಾ..?

|
Google Oneindia Kannada News

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮ ರಾಷ್ಟ್ರದ ಮೌಲ್ಯಗಳನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಅದು ಟ್ರಂಪ್ ಆಗಿರಬಹುದು, ಇನ್ನೊಬ್ಬರೇ ಆಗಿರಬಹುದು. ಟ್ರಂಪ್ ನೀನು ಕಾನೂನಿಗಿಂತ ದೊಡ್ಡವನಲ್ಲ ಎಂದು ಅಮೆರಿಕ ಹೌಸ್ ಆಫ್ ಕಾಂಗ್ರೆಸ್ ಸ್ಪೀಕರ್ ಗುಡುಗಿದ್ದಾರೆ. ಟ್ರಂಪ್‌ಗೆ ಮನೆ ದಾರಿ ತೋರಿಸಲು ಸಜ್ಜಾಗಿದ್ದಾರೆ. ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಟ್ರಂಪ್‌ನ ಓಡಿಸಲು ಅಮೆರಿಕ ಸಂಸದರು ನಿರ್ಣಯ ಕೈಗೊಂಡಿದ್ದಾರೆ. ಆದರೆ ಅಮೆರಿಕ ಸಂಸತ್ತು ಇಷ್ಟು ಧೈರ್ಯ ಮಾಡುವುದರ ಹಿಂದೆ ಒರ್ವ ಮಹಿಳೆ ಬಲ ಅಡಗಿದೆ.ಆ ಧೈರ್ಯವಂತ ಮಹಿಳೆ ಹೆಸರೇ ನ್ಯಾನ್ಸಿ ಪೆಲೋಸಿ.

ಅಮೆರಿಕದ ಹೌಸ್ ಆಫ್ ಕಾಂಗ್ರೆಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಟ್ರಂಪ್ ವಿರುದ್ಧ ಪ್ರತಿ ಕ್ಷಣವೂ ಸಮರ ಸಾರಿದ ಧೀರೆ. ಟ್ರಂಪ್ ಅಮೆರಿಕದ ಪ್ರಜಾಪ್ರಭುತ್ವಕ್ಕೆ ಮಾಡುತ್ತಿದ್ದ ಘಾಸಿ ಬಗ್ಗೆ ಧ್ವನಿ ಎತ್ತಿದ ಮೊದಲಿಗರಲ್ಲಿ ನ್ಯಾನ್ಸಿ ಪೆಲೋಸಿ ಕೂಡ ಒಬ್ಬರು. ಈಗ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಅಂದರೆ ಇಂಪೀಚ್‌ಮೆಂಟ್ (Impeachment) ಸಕ್ಸಸ್ ಆಗಲು ಇದೇ ಪೆಲೋಸಿ ಕಾರಣ.

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

ಹಂತ ಹಂತದಲ್ಲೂ ಹೋರಾಟ..!

ಹಂತ ಹಂತದಲ್ಲೂ ಹೋರಾಟ..!

ಪ್ರತಿ ಹಂತದಲ್ಲೂ ಟ್ರಂಪ್ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಗಟ್ಟಿಗಿತ್ತಿ ಪೆಲೋಸಿ. ಇದೀಗ ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ತಿಂಗಳ ಹಿಂದೆ ಕೂಡ ಅಮೆರಿಕದ ಹೌಸ್ ಆಫ್ ಕಾಂಗ್ರೆಸ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆದು, ಅದಕ್ಕೆ ಅನುಮೋದನೆ ಸಿಕ್ಕಿತ್ತು. ಆಗಲೂ ಪೆಲೋಸಿ ಪಾತ್ರ ಮಹತ್ವದ್ದಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಅಷ್ಟು ಪ್ರಭಾವಶಾಲಿ ಮಹಿಳೆ ನ್ಯಾನ್ಸಿ ಪೆಲೋಸಿ. ಹೀಗೆ ಪೆಲೋಸಿ ಹವಾ ಹೇಗಿದೆ ಎಂದರೆ, ಖುದ್ದು ರಿಪಬ್ಲಿಕನ್ ಸದಸ್ಯರು ಕೂಡ ಪೆಲೋಸಿ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ. ಕೆಲವು ಟ್ರಂಪ್ ಬೆಂಬಲಿಗರು ಕೂಡ ಪೆಲೋಸಿ ಮಾತಿನಿಂದ ಬದಲಾದ ಉದಾಹರಣೆಗೆ ನಿನ್ನೆಯ ವಾಗ್ದಂಡನೆ ಪ್ರಕ್ರಿಯೆ ಸಾಕ್ಷಿಯಾಗಿತ್ತು.

ಟ್ರಂಪ್‌ಗೆ ಬೈಡನ್‌ಗಿಂತ ದೊಡ್ಡ ಶತ್ರು..!

ಟ್ರಂಪ್‌ಗೆ ಬೈಡನ್‌ಗಿಂತ ದೊಡ್ಡ ಶತ್ರು..!

ಅಮೆರಿಕದಲ್ಲಿ ಟ್ರಂಪ್‌ಗೆ ಬೈಡನ್‌ಗಿಂತಲೂ ದೊಡ್ಡ ಶತ್ರು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಇಬ್ಬರ ಜಗಳ ಒಂದು ಸಮಯದಲ್ಲಿ ತಾರಕಕ್ಕೆ ಏರಿತ್ತು. ಸ್ಪೀಕರ್ ನ್ಯಾನ್ಸಿ ಪೆಲೋಸಿ ಧೈರ್ಯವಂತ ಹೆಣ್ಣುಮಗಳು. ನ್ಯಾನ್ಸಿಗೆ ಟ್ರಂಪ್ ಕಂಡರೆ ಆಗೋದೆ ಇಲ್ಲ. ಟ್ರಂಪ್ ಮಾಡುತ್ತಿದ್ದ ಎಡವಟ್ಟು ಹಾಗೂ ಅದರಿಂದ ಅಮೆರಿಕ ಎದುರಿಸಿದ ಸಮಸ್ಯೆ ಕಂಡು ಕೆಂಡವಾಗಿದ್ದು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಹೀಗಾಗಿ ಟ್ರಂಪ್ ವಿರುದ್ಧ ಕೆಲ ತಿಂಗಳ ಹಿಂದೆ ಮೊದಲ ಬಾರಿ ಹಕ್ಕುಚ್ಯುತಿ ಮಂಡಿಸಿದ್ದರು ಪೆಲೋಸಿ. ಇದೀಗ 2ನೇ ಬಾರಿಗೆ ಟ್ರಂಪ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ದೊಡ್ಡ ಗೆಲುವನ್ನು ದಾಖಲಿಸಿದ್ದಾರೆ ನ್ಯಾನ್ಸಿ ಪೆಲೋಸಿ.

'ಪ್ರಚೋದನೆ'ಗೆ ತಕ್ಕ ಪ್ರತಿಕ್ರಿಯೆ..! ಪ್ರಚೋದಕ ಟ್ರಂಪ್‌ಗೆ ಶಾಕ್..!'ಪ್ರಚೋದನೆ'ಗೆ ತಕ್ಕ ಪ್ರತಿಕ್ರಿಯೆ..! ಪ್ರಚೋದಕ ಟ್ರಂಪ್‌ಗೆ ಶಾಕ್..!

ಸೋತರೂ ಗೆದ್ದಿದ್ದ ಪೆಲೋಸಿ..!

ಸೋತರೂ ಗೆದ್ದಿದ್ದ ಪೆಲೋಸಿ..!

ಕೆಳಮನೆಯಲ್ಲಿ ವಾಗ್ದಂಡನೆ ಗೆದ್ದರೂ, ಸೆನೆಟ್‌ನಲ್ಲಿ ಟ್ರಂಪ್‌ಗೆ ಗೆಲುವು ಸಿಕ್ಕಿತ್ತು. ಆದರೆ ಸೋತರೂ ಗೆದ್ದಿದ್ದು ನ್ಯಾನ್ಸಿ ಪೆಲೋಸಿ. ಹೀಗಾಗಿ ಟ್ರಂಪ್ ಹಾಗೂ ಪೆಲೋಸಿ ನಡುವೆ ದೊಡ್ಡ ಜಗಳವೇ ನಡೆಯುತ್ತಿತ್ತು. ಇದು ಸಹಜವಾಗಿ ಟ್ರಂಪ್ ಬೆಂಬಲಿಗರನ್ನ ಕೆರಳಿಸಿತ್ತು. ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಪೆಲೋಸಿ ಕಚೇರಿಯನ್ನೇ ಟ್ರಂಪ್ ಬೆಂಬಲಿಗ ಪಡೆ ಟಾರ್ಗೆಟ್ ಮಾಡಿತ್ತು. ಪೆಲೋಸಿ ಕಚೇರಿ ಕೊಠಡಿಗೆ ನುಗ್ಗಿದ ಕಿರಾತಕನೊಬ್ಬ ಸಿಗರೇಟ್ ಸೇದಿದ್ದೂ ಅಲ್ಲದೆ, ದಾಖಲೆಗಳನ್ನ ಚೆಲ್ಲಾಡಿ ಬಂದಿದ್ದಾನೆ. ಬಳಿಕ ಕಚೇರಿಗೆ ಇನ್ನಷ್ಟು ಜನ ನುಗ್ಗಿ, ಕಚೇರಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದರು.

ಎಡವಟ್ಟುಗಳ ಸರದಾರ ಟ್ರಂಪ್..!

ಎಡವಟ್ಟುಗಳ ಸರದಾರ ಟ್ರಂಪ್..!

ಟ್ರಂಪ್‌ಗೆ ಜಗತ್ತಿನಾದ್ಯಂತ ಬೆಂಬಲಿಗರು ಹಾಗೂ ವಿರೋಧಿಗಳು ಇದ್ದಾರೆ. ಆದರೆ ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಬಳಿಕ ಎಲ್ಲರೂ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರಲ್ಲೂ ಸ್ವತಃ ಅವರ ಸಹೋದ್ಯೋಗಿ ಹಾಗೂ ಅತ್ಯಾಪ್ತ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಟ್ರಂಪ್ ನೀವು ಸರಿಯಿಲ್ಲ ಎಂದಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಮೊದಲೇ ಟ್ರಂಪ್‌ಗೆ ಟ್ವಿಟ್ಟರ್ ಕೂಡ ಶಾಕ್ ಕೊಟ್ಟಿತ್ತು. ಆದರೆ ಇಷ್ಟು ಆದ ಬಳಿಕ ಸುಮ್ಮನಾಗದೆ ಮತ್ತೆ ಮೊಂಡಾಟ ಮುಂದುವರಿಸಿದ್ದ ಟ್ರಂಪ್ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಮತ್ತೊಂದು ಗಿಫ್ಟ್ ಎನ್ನುವಂತೆ ಹೌಸ್ ಆಫ್ ಕಾಂಗ್ರೆಸ್ ಟ್ರಂಪ್ ವಿರುದ್ಧದ ವಾಗ್ದಂಡನೆಗೆ ಅನುಮೋದನೆ ನೀಡಿದೆ. ಇದು ಸಹಜವಾಗಿ ಟ್ರಂಪ್ ಕೂತ ಖುರ್ಚಿಯ ಬುಡ ಅಲುಗಾಡಿಸಿದೆ.

English summary
US House Speaker Nancy Pelosi Warned Donald Trump After Impeachment Process. Nancy Pelosi Said That, No One Above Law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X