ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವರು ಮಕ್ಕಳನ್ನು ಕೊಂದ ಆತನಿಗೆ ಯಾವ ಶಿಕ್ಷೆಯೂ ಕೊಡಬೇಡಿ ಎಂದ ತಾಯಿ

|
Google Oneindia Kannada News

ವಾಷಿಂಗ್ಟನ್, ಜೂನ್ 14: ತನ್ನ ಐವರು ಮಕ್ಕಳನ್ನು ಕೊಂದ ವ್ಯಕ್ತಿಗೆ ಅಮೆರಿಕದಲ್ಲಿ ಗುರುವಾರ ಮರಣದಂಡನೆ ವಿಧಿಸಲಾಗಿದೆ. "ಆ ಮಕ್ಕಳು ಆತನನ್ನು ತುಂಬ ಪ್ರೀತಿಸುತ್ತಿದ್ದರು. ಆದ್ದರಿಂದ ಅವನನ್ನು ಬಿಟ್ಟುಬಿಡಿ" ಎಂದು ಆ ವ್ಯಕ್ತಿಯ ಮಾಜಿ ಪತ್ನಿ ಮನವಿ ಮಾಡಿದರೂ ಕೋರ್ಟ್ ನಿಂದ ಈ ತೀರ್ಪು ನೀಡಲಾಗಿದೆ.

ಮೂವತ್ತೇಳು ವರ್ಷದ ತಿಮೋತಿಗೆ ಸ್ಕಿಜೋಫ್ರೇನಿಕ್. ಆದ್ದರಿಂದ ಆತನಿಗೆ ವಿಚಾರಣೆ ಎದುರಿಸಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿದ್ದರು. ಐದು ವರ್ಷಗಳ ಹಿಂದೆ ತನ್ನ ಒಂದರಿಂದ ಎಂಟು ವರ್ಷದ ಐವರು ಮಕ್ಕಳನ್ನು ಕೊಂದ ಆರೋಪವು ಜೋನ್ಸ್ ಮೇಲೆ ಕಳೆದ ವಾರ ನಿಗದಿ ಆಗಿತ್ತು.

ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜ್ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜ್ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

ಈ ಮಧ್ಯೆ, ಜೋನ್ಸ್ ನ ಮಾಜಿ ಪತ್ನಿ ಗುರುವಾರ ದಕ್ಷಿಣ ಕರೋಲಿನಾದ ಕೋರ್ಟ್ ನಲ್ಲಿ ಮನವಿಯೊಂದನ್ನು ಮುಂದಿಡುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದರು. ಜೋನ್ಸ್ ನನ್ನು ಬದುಕಲು ಬಿಡಿ ಎಂದು ಆಕೆ ಕೇಳಿಕೊಂಡರು.

My kids loved him, so spare him to live, mother of said in the court

"ಅವನು ನನ್ನ ಮಕ್ಕಳಿಗೆ ಯಾವ ರೀತಿಯಿಂದಲೂ ಕರುಣೆ ತೋರಿಸಲಿಲ್ಲ. ಆದರೆ ನನ್ನ ಮಕ್ಕಳು ಅವನನ್ನು ಪ್ರೀತಿಸಿದವು. ನನ್ನ ಮಕ್ಕಳ ಪರವಾಗಿ ನಾನು ಮಾತನಾಡಬೇಕು ಅಂದರೆ, ನನ್ನ ಪರವಾಗಿ ಅಲ್ಲ ಅಂದರೆ ಇದನ್ನು ನಾನು ಹೇಳಬೇಕು" ಎಂದು ಅಂಬರ್ ಕೈಜರ್ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.

ಕಂಪ್ಯೂಟರ್ ಎಂಜಿನಿಯರ್ ಆಗಿದ್ದ ಜೋನ್ಸ್ ತನಗಿಂತ ಹೆಚ್ಚು ದುಡಿಯುತ್ತಿದ್ದ ಎಂಬ ಕಾರಣಕ್ಕೆ ಮಕ್ಕಳನ್ನು ಆತನ ಸುಪರ್ದಿಗೆ ಒಪ್ಪಿಸಲು ನಿರ್ಧರಿಸಿದೆ ಎಂದು ಕೈಜರ್ ಹೇಳಿದ್ದಾರೆ.

ಆರು ವರ್ಷದ ಮಗನು ತನ್ನ ತಾಯಿ ಜತೆ ಸೇರಿ ನನ್ನನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾನೆ ಅನಿಸಿತು. ಆದ್ದರಿಂದ ಅವನ ಪ್ರಾಣ ಹೋಗುವ ತನಕ ಬಲವಂತವಾಗಿ ಅವನಿಂದ ವ್ಯಾಯಾಮ ಮಾಡಿಸಿದೆ. ಆ ನಂತರ ಇತರ ನಾಲ್ವರು ಮಕ್ಕಳನ್ನು ಕೊಂದೆ ಎಂದು ಜೋನ್ಸ್ ಒಪ್ಪಿಕೊಂಡಿದ್ದಾನೆ.

ಇನ್ನು ಆ ಮಕ್ಕಳ ಶವಗಳನ್ನು ಕಾರಿನಲ್ಲಿ ಹಾಕಿಕೊಂಡು ಒಂಬತ್ತು ದಿನಗಳ ಕಾಲ ಜೋನ್ಸ್ ಸುತ್ತಾಡಿದ್ದಾನೆ. ಆ ನಂತರ ಅಲಬಾಮದ ಬೆಟ್ಟದ ಬಳಿಯಲ್ಲಿ ಕಸದ ಚೀಲದಲ್ಲಿ ತುಂಬಿ, ಆ ಮಕ್ಕಳ ಶವಗಳನ್ನು ಬಿಸಾಡಿದ್ದಾನೆ. ಕಾರಿನಲ್ಲಿ ಕೊಳೆತ ಶವದ ವಾಸನೆ ಇದ್ದುದರಿಂದ ಜೋನ್ಸ್ ನನ್ನು ಸಂಚಾರ ಪೊಲೀಸರೊಬ್ಬರು ಬಂಧಿಸಿದ್ದರು.

English summary
My kids loved him, so spare him to live, mother of said in the court. Timoty Jones accused of killing his 5 kids. Court announced death sentence to him in South Carolina. Before that, his ex-wife requested to spare him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X