ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನ್ಯೂಯಾರ್ಕ್ ರಾಜ್ಯದ ಸೂಪರ್‌ ಮಾರ್ಕೆಟ್‌ನಲ್ಲಿ ಶೂಟೌಟ್

|
Google Oneindia Kannada News

ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ನ ಬಫಲೋದಲ್ಲಿನ ಸೂಪರ್‌ಮಾರ್ಕೆಟ್‌ನಲ್ಲಿ ಇಂದು ಅನೇಕ ಜನರ ಮೇಲೆ ಶೂಟೌಟ್ ನಡೆದಿದೆ. ಗುಂಡು ಹಾರಿಸಿದ ನಂತರ ಶಂಕಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಬಂದ ಅಪ್ಡೇಟ್ ಪ್ರಕಾರ, ಈ ದುರ್ಘಟನೆಯಲ್ಲಿ 10 ಮಂದಿ ನಾಗರೀಕರು ಮೃತಪಟ್ಟಿರುವುದು ದೃಢಪಟ್ಟಿದೆ. ಓರ್ವ ಪೊಲೀಸ್ ಅಧಿಕಾರಿ ಕೂಡಾ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಟಾಪ್ಸ್ ಫ್ರೆಂಡ್ಲಿ ಮಾರ್ಕೆಟ್‌ನಲ್ಲಿ ಗುಂಡು ಹಾರಿಸಿದ ಮತ್ತು ಗಾಯಗೊಂಡ ಜನರ ಸಂಖ್ಯೆಯ ವಿವರಗಳು ತಕ್ಷಣವೇ ಲಭ್ಯವಿಲ್ಲ. ಜನನಿಬಿಡ ಸೂಪರ್‌ಮಾರ್ಕೆಟ್‌ ಇದಾಗಿದ್ದು, ಅನೇಕ ಮಂದಿಗೆ ಗಾಯಗಳಾಗಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವರದಿಗಳು ಬಂದಿವೆ. ಆದರೆ, ಅಧಿಕೃತ ಹೇಳಿಕೆ ಇನ್ನೂ ಪ್ರಕಟವಾಗಿಲ್ಲ.

ವ್ಯಕ್ತಿಯೊಬ್ಬ ರೈಫಲ್‌ನೊಂದಿಗೆ ಸೂಪರ್‌ಮಾರ್ಕೆಟ್‌ಗೆ ಪ್ರವೇಶಿಸಿ ಗುಂಡು ಹಾರಿಸಿದ ಎಂದು ಎಪಿ ಸುದ್ದಿ ಸಂಸ್ಥೆಗೆ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದು, ತಮ್ಮ ಹೆಸರು ವಿವರ ಪ್ರಕಟಿಸದಂತೆ ಕೋರಿದ್ದಾರೆ.

Police described the incident at a Buffalo supermarket as a mass shooting

ಆ ವ್ಯಕ್ತಿ ಶೂಟಿಂಗ್ ಅನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದಿರಬಹುದು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಶಂಕಿತ ವ್ಯಕ್ತಿಯು ಮಿಲಿಟರಿ ಶೈಲಿಯ ಬಟ್ಟೆ ಮತ್ತು ದೇಹದ ರಕ್ಷಾಕವಚವನ್ನು ಧರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ಟ್ವಿಟ್ಟರ್‌ನಲ್ಲಿ ಶೂಟಿಂಗ್ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಸೂಪರ್‌ಮಾರ್ಕೆಟ್‌ ಪ್ರಧಾನವಾಗಿ ಕಪ್ಪು ಜನಾಂಗದವರು ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದೆ.(AP, Reuters)

English summary
The Buffalo police department has not confirmed the number of people dead or injured in the attack at a supermarket in New York state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X