• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಹಿಂಸಾಚಾರ: ಟ್ರಂಪ್ ಅಡಗಿ ಕುಳಿತಿದ್ದಕ್ಕೆ ಚೀನಾ ಲೇವಡಿ

|

ವಾಷಿಂಗ್ಟನ್, ಜೂನ್ 1: ಅಮೆರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿದೆ.ಇನ್ನೊಂದೆಡೆ ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಚಳುವಳಿಯನ್ನು ಈ ಹಿಂಸಾಚಾರಕ್ಕೆ ಚೀನಾ ಹೋಲಿಸುತ್ತಿದೆ. ಹಾಗೆಯೇ ಭಾನುವಾರ ಶ್ವೇತಭವನದ ಮುಂದೆ ಪ್ರತಿಭಟನೆ ನಡೆಯುವಾಗಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಕರ್‌ನಲ್ಲಿ ಅಡಗಿ ಕುಳಿತಿದ್ದರ ಬಗ್ಗೆ ಚೀನಾ ಲೇವಡಿ ಮಾಡಿದೆ.

   ಜನಗಳಿಗೆ ಇಷ್ಟು ಅವಮಾನ ಮಾಡಿದ್ದೀರಲ್ಲಾ , ನಿಮ್ಮನ್ನು ಅವರು ಸುಮ್ಮನೆ ಬಿಡೋದಿಲ್ಲ ಮೋದಿಯವರೇ | Oneindia Kannada

   ಅಷ್ಟೇ ಅಲ್ಲದೆ ಸತ್ಯವನ್ನು ಕೂಡ ಮರೆಮಾಚಬೇಡಿ ಎಲ್ಲರಿಗೂ ಸತ್ಯ ತಿಳಿದಿದೆ ಎಂದು ಚೀನಾ ಹೇಳಿದೆ.ಭಾನುವಾರ ವೈಟ್ ಹೌಸ್ ಮುಂದೆಯೂ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಚೀನಾ ಫಾರಿನ್ ಮಿನಿಸ್ಟ್ರಿ ಸ್ಪೋಕ್ಸ್ಪರ್ಸನ್ ಹುಆ ಚುನಿಂಗ್ 'ನನಗೆ ಉಸಿರಾಡಲು ಕಷ್ಟವಾಗುತ್ತಿದೆ' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

   ಅಮೇರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ: 40 ಸಿಟಿಗಳಲ್ಲಿ ಕರ್ಫ್ಯೂ ಜಾರಿ.!

   ಪರಿಣಾಮ, 11 ಮೆಟ್ರೋಪಾಲಿಟನ್ ಪೊಲೀಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳೂ ಸೇರಿದಂತೆ 60 ಸೀಕ್ರೆಟ್ ಸರ್ವೀಸ್ ಸಿಬ್ಬಂದಿ ಗಾಯಗೊಂಡರು. ವೈಟ್ ಹೌಸ್ ಮುಂದೆ ಪ್ರತಿಭಟನೆ ನಡೆದ ಸಂದರ್ಭದಲ್ಲಿ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಲ್ಪ ಸಮಯದವರೆಗೆ ವೈಟ್ ಹೌಸ್ ನ ಅಂಡರ್ ಗ್ರೌಂಡ್ ಬಂಕರ್ ನಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಹಾಂಗ್‌ಕಾಂಗ್‌ನಲ್ಲಿನ ಪ್ರಜಾಪ್ರಭುತ್ವ ಪರ ಚಳವಳಿ ಹಾಗೂ ಅಮೆರಿಕ ಹಿಂಸಾಚಾರವನ್ನು ತುಲನೆ ಮಾಡಿದ್ದಾರೆ.

   ಅಮೆರಿಕದ 40 ನಗರಗಳಲ್ಲಿ ಪ್ರತಿಭಟನೆ

   ಅಮೆರಿಕದ 40 ನಗರಗಳಲ್ಲಿ ಪ್ರತಿಭಟನೆ

   ದೇಶದ 40 ಕ್ಕೂ ಹೆಚ್ಚು ನಗರಗಳಲ್ಲಿ ಹಿಂಸಾಚಾರ ಉಲ್ಬಣಗೊಂಡಿದ್ದು, ಈವರೆಗೆ 1,500ಕ್ಕೂ ಹೆಚ್ಚು ಜನರನ್ನು ಪೊಲೀಸರ ಬಂಸಿದ್ದಾರೆ. ಉದ್ರಿಕ್ತ ಕಪ್ಪುಜನರು ನಡೆಸಿದ ದಾಂಧಲೆಯಿಂದಾಗಿ ಲಕ್ಷಾಂತರ ಡಾಲರ್ ಆಸ್ತಿಪಾಸಿಗೆ ನಷ್ಟವಾಗಿದ್ದು, ಕೆಲವು ಪ್ರದೇಶಗಳು ಹೊತ್ತಿ ಉರಿದಿವೆ. ಗಲಭೆಯಲ್ಲಿ ನೂರಾರು ಕಾರುಗಳು ಧಗಧಗಿಸಿದೆ.

   ಕಪ್ಪು ಜನಾಂಗದ ವ್ಯಕ್ತಿ ಹತ್ಯೆ

   ಕಪ್ಪು ಜನಾಂಗದ ವ್ಯಕ್ತಿ ಹತ್ಯೆ

   ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಕಪ್ಪುಜನಾಂಗದ ಜಾರ್ಜ್ ಫೈಯ್ಡ್ ಎಂಬಾನನ್ನು ಬಂಧಿಸಿದ ಪೊಲೀಸ್‍ಅಧಿಕಾರಿ ಆತನ ಕುತ್ತಿಗೆಯನ್ನು ಮಂಡಿಗಳ ಮಧ್ಯೆ ಎಂಟು ನಿಮಿಷಗಳ ಕಾಲ ಅದುಮಿಟ್ಟಿಟ್ಟರು.

   ಉಸಿರುಗಟ್ಟಿ ಜಾರ್ಜ್ ಮೃತಪಟ್ಟ ನಂತರ ಮಿನ್ನೆಸೋಟಾದಲ್ಲಿ ಆರಂಭವಾದ ಕಪ್ಪುಜನರ ಪ್ರತಿಭಟನೆ ಅಮೆರಿಕ 17 ರಾಜ್ಯಗಳಲ್ಲಿ ವ್ಯಾಪಿಸಿ ಭಾರೀ ಹಿಂಸಾಚಾರ ಮತ್ತು ಸಂಘರ್ಷಕ್ಕೆಕಾರಣವಾಗಿದೆ.

   ಕಪ್ಪು ಜನರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

   ಕಪ್ಪು ಜನರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

   ಕಪ್ಪುಜನರ ವಿವಿಧ ಸಂಘಟನೆಗಳು ಅನೇಕ ನಗರಗಳಲ್ಲಿ ಇಂದು ಪ್ರತಿಭಟನಾರ್ಯಾಲಿ ನಡೆಸಲಿದ್ದು, ಹಿಂಸಾಚಾರ ಮತ್ತಷ್ಟು ಭುಗಿಲೆಳುವ ಆತಂಕವಿದ್ದು, ಅಮೆರಿಕದ 50 ರಾಜ್ಯಗಳಲ್ಲಿ ತೀವ್ರಕಟ್ಟೆಚ್ಚರ ವಹಿಸಲಾಗಿದೆ. ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣರಾದ ಬಿಳಿಯ ಪೊಲೀಸರ ಅಟ್ಟಹಾಸದ ವಿರುದ್ಧ ಮಿನ್ನಿಯಾ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ.

   ದೂರು ದಾಖಲು

   ದೂರು ದಾಖಲು

   ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಬಲವಾಗಿ ಮಂಡಿಯೂರಿ ಕ್ರೌರ್ಯ ಮೆರೆದಿದ್ದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಫ್ಲಾಯ್ಡ್ ಕುಟುಂಬದ ವಕೀಲರು ಬಂಧನವನ್ನು ಸ್ವಾಗತಿಸಿದ್ದು, ಚೌಇನ್ ವಿರುದ್ಧ ಗಂಭೀರವಾದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಘಟನೆ ಸಂದರ್ಭದಲ್ಲಿ ಚೌವಿನ್ ಜೊತೆಗಿದ್ದ ಇತರರನ್ನೂ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

   English summary
   Chinese officials and state media have seized on news of the protests sweeping the US, comparing the widespread unrest to the pro-democracy movement in Hong Kong and accusing Washington of hypocrisy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more