ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಕಮಲಾ ಜೊತೆ ಜೋ ಬೈಡನ್ ಅಧ್ಯಕ್ಷೀಯ ಪ್ರಮಾಣ

|
Google Oneindia Kannada News

ಇನ್ನೂ ಒಂದೇ ದಿನ ಬಾಕಿ ಅಷ್ಟೇ, ಬಹುತೇಕ ಭಾರತೀಯರ ಕನಸು ನೆರವೇರಲಿದೆ. ಒಂದು ಕಾಲದಲ್ಲಿ ನಮ್ಮ ನೆಲವನ್ನು ಆಳಿದ್ದವರ ದೇಶದಲ್ಲಿ ಭಾರತೀಯರೇ ಉಪಾಧ್ಯಕ್ಷರಾಗುತ್ತಿದ್ದಾರೆ. ಹೌದು, ಜನವರಿ 20ರಂದು ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವರು.

ಇದೇ ವೇಳೆಗೆ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅಮೆರಿಕದ 49ನೇ ಉಪಾಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರುವರು. ಈ ಮೂಲಕ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಏರಿದ ಮೊಟ್ಟಮೊದಲ ಭಾರತೀಯ ಮಹಿಳೆಯಾಗಲಿದ್ದಾರೆ ಕಮಲಾ ಹ್ಯಾರಿಸ್. ಆದರೆ ನಾವು, ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ ಈ ಬಾರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ.

ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್

ಒಂದು ಕಡೆ ಟ್ರಂಪ್ ಹಾಗೂ ಮತ್ತೊಂದು ಕಡೆ ಟ್ರಂಪ್ ಬೆಂಬಲಿಗರು ಹಲ್ಲು ಮಸೆದು ಜಗಳಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಮೆರಿಕದ ಸೇನೆ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಹಿಂಸೆ ನಡೆಯದಂತೆ ಸೇನೆ ಅಲರ್ಟ್ ಆಗಿದೆ. ಇನ್ನು ಸೂಕ್ಷ್ಮ ಪ್ರದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಸೈನಿಕರನ್ನು ನಿಯೋಜಿಸಲಾಗಿದೆ. ಹಾಗಾದರೆ ಕಾರ್ಯಕ್ರಮದ ಝಲಕ್ ಹೇಗಿರಲಿದೆ ಅನ್ನೋದನ್ನ ಶಾರ್ಟ್ ಆಗಿ ಮುಂದೆ ತಿಳಿಯೋಣ.

ಸ್ಟಾರ್‌ಗಳ ದಂಡು ಹರಿದುಬರಲಿದೆ..!

ಸ್ಟಾರ್‌ಗಳ ದಂಡು ಹರಿದುಬರಲಿದೆ..!

ಬೈಡನ್ ಎಲ್ಲರೊಂದಿಗೂ ಸ್ನೇಹಪೂರ್ವಕ ನಡೆಯಿಂದ ವರ್ತಿಸಿದ್ದಾರೆ. ಹೀಗಾಗಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರನ್ನ ಕಂಡರೆ ಬಹುತೇಕರಿಗೆ ಪ್ರೀತಿ. ಇದೇ ಕಾರಣಕ್ಕೆ ಬೈಡನ್ ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಹರಿದು ಬರಲಿದೆ. 'ಕಾಸ್ಟ್ ಅವೇ' 'ಫಾರೆಸ್ಟ್ ಗಂಪ್' 'ಬ್ರಿಡ್ಜ್ ಆಫ್ ಸ್ಪೈ' ರೀತಿಯ ಅತ್ಯುತ್ತಮ ಚಿತ್ರ ಕೊಟ್ಟಿರುವ ಹಾಲಿವುಡ್ ಸ್ಟಾರ್ ಟಾಮ್ ಹ್ಯಾಂಕ್ಸ್ ಕೂಡ ಹಾಜರಾಗುತ್ತಾರೆ. ಅಲ್ಲದೆ ಅಮೆರಿಕದ ದಂತಕಥೆ ಲೇಡಿ ಗಾಗಾ ಹಾಗೂ ನಟಿ ಜೆನ್ನಿಫರ್ ಲೋಪೆಜ್ ಸೇರಿದಂತೆ ಕವಯತ್ರಿ ಅಮಂಡಾ ಗೋರ್ಮನ್ ಸ್ಟೇಜ್ ಹತ್ತಿ ರಂಜಿಸಲಿದ್ದಾರಂತೆ. ಬೈಡನ್ ಪದಗ್ರಹಣ ಕಾರ್ಯಕ್ರಮ ಉಸ್ತುವಾರಿ ಸಮಿತಿ ಇದನ್ನು ಸ್ಪಷ್ಟಪಡಿಸಿದೆ.

ತುರ್ತು ಪರಿಸ್ಥಿತಿ ಘೋಷಣೆ

ತುರ್ತು ಪರಿಸ್ಥಿತಿ ಘೋಷಣೆ

ಈಗಾಗ್ಲೇ ಕ್ಯಾಪಿಟಲ್ ಹಿಲ್ ಮೇಲೆ ಭೀಕರವಾದ ದಾಳಿ ನಡೆದಿದೆ. ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್‌ ಒಳಗೆ ನುಗ್ಗಿ ಹಿಂಸೆ ನಡೆಸಿದ್ದಾರೆ. ಜನವರಿ 6ರಂದು ಹಿಂಸಾಚಾರ ನಡೆದಿದ್ದು, ಜನವರಿ 20ರಂದು ಹಿಂಸಾಚಾರ ನಡೆದಿದ್ದ ಜಾಗದಲ್ಲೇ ಬೈಡನ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಭಾರಿ ಮುಂಜಾಗ್ರತೆ ಕೈಗೊಂಡಿರುವ ಅಮೆರಿಕ ಭದ್ರತಾ ಸಂಸ್ಥೆಗಳು, ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಿವೆ. ಅನಾಮಿಕರು ಕ್ಯಾಪಿಟಲ್ ಹಿಲ್ ಕಟ್ಟಡದ ಬಳಿ ಸುಳಿಯದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕ್ಯಾಪಿಟಲ್ ಹಿಲ್ ಕಟ್ಟಡ ಏಳು ಸುತ್ತಿನ ಕೋಟಿಯಾಗಿ ಬದಲಾಗಿದೆ.

ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್

ಕಿಟಕಿಗಳು ಲಾಕ್, ನಿಷೇಧಾಜ್ಞೆ ಜಾರಿ

ಕಿಟಕಿಗಳು ಲಾಕ್, ನಿಷೇಧಾಜ್ಞೆ ಜಾರಿ

ಅಮೆರಿಕದಲ್ಲೂ ಭಾರತದಲ್ಲಿ ಇರುವಂತೆ ರಾಜ್ಯಗಳ ಶಾಸನ ಸಭೆ ನಡೆಸಲು ವಿಧಾನಸಭಾ ಕಟ್ಟಡಗಳು ಇವೆ. ಜನವರಿ 6ರಂದು 'ಕ್ಯಾಪಿಟಲ್ ಹಿಲ್' ಮೇಲೆ ದಾಳಿ ಮಾಡಿದ್ದ ಟ್ರಂಪ್ ಬೆಂಬಲಿಗರು ಈಗ ವಿಧಾನಸಭಾ ಕಟ್ಟಡಗಳನ್ನು ಟಾರ್ಗೆಟ್ ಮಾಡಿರುವುದು ಎಫ್‌ಬಿಐ ಅಧಿಕಾರಿಗಳಿಗೆ ಕನ್ಫರ್ಮ್ ಆಗಿದೆ. ಅಮೆರಿಕದಲ್ಲಿರುವ 50 ವಿಧಾನಸಭೆ ಕಟ್ಟಡಗಳ ಸುತ್ತಲೂ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಕಿಟಕಿಗಳಿಗೆ ಹಲಗೆ ಬಡಿದು, ಗಾಜು ಒಡೆದು ಉದ್ರಿಕ್ತರು ಒಳಗೆ ನುಗ್ಗದಂತೆ ಕ್ರಮ ಕೈಗೊಳ್ಳಲಾಗಿದೆ. ಇದು ಟ್ರಂಪ್ ಬೆಂಬಲಿಗರಿಗೆ ಒಳಗೊಳಗೆ ಕಿಚ್ಚು ಹೊತ್ತುವಂತೆ ಮಾಡಿದೆ.

ಸಂಸದರ ಮನೆಗಳಿಗೆ ಭದ್ರತೆ..?

ಸಂಸದರ ಮನೆಗಳಿಗೆ ಭದ್ರತೆ..?

ಕ್ಯಾಪಿಟಲ್ ಕಟ್ಟಡಗಳ ಭದ್ರತೆ ಜೊತೆ ಸಂಸದರು ಹಾಗೂ ಅಮೆರಿಕದ ಶಾಸಕರ ಮನೆಗಳಿಗೆ ಭದ್ರತೆ ಕೊಡಲು ಸೂಚಿಸಲಾಗಿದೆ. ಅದರಲ್ಲೂ ಟ್ರಂಪ್ ವಿರೋಧ ಕಟ್ಟಿಕೊಂಡವರ ಮನೆಗೆ ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಏಕೆಂದರೆ ಈಗಾಗಲೇ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಮನೆ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿತ್ತು. ಇದೀಗ ಮತ್ತೆ ಟ್ರಂಪ್ ಬೆಂಬಲಿಗರು ಗನ್ ಹಿಡಿದು ಪ್ರತಿಭಟನೆ ನಡೆಸುವ ತಯಾರಿಯಲ್ಲಿದ್ದು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಡೆಮಾಕ್ರಟಿಕ್ ನಾಯಕರ ಮನೆಗಳು ಟಾರ್ಗೆಟ್ ಆಗುವ ಮುನ್ಸೂಚನೆ ಇದ್ದು, ಸೂಕ್ತ ಭದ್ರತೆ ನೀಡಲು ಅಮೆರಿಕ ಸೇನೆ ಮುಂದಾಗಿದೆ.

ಭಾರತೀಯರ ಅಮೆರಿಕ ಕನಸು ಮತ್ತಷ್ಟು ಸುಲಭ ಮಾಡಲಿರುವ ಬೈಡನ್..!ಭಾರತೀಯರ ಅಮೆರಿಕ ಕನಸು ಮತ್ತಷ್ಟು ಸುಲಭ ಮಾಡಲಿರುವ ಬೈಡನ್..!

English summary
Including Tom Hanks, the Hollywood stars and greatest singers will perform at swearing-in ceremony of Joe Biden on January 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X