ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್‌ಮಸ್ ಮುಂಜಾನೆ ವಾಹನ ಸ್ಫೋಟ: ಭಯೋತ್ಪಾದನಾ ಕೃತ್ಯ ಶಂಕೆ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 26: ಅಮೆರಿಕದ ನಾಶ್ವಿಲ್ಲೆಯಲ್ಲಿ ಕ್ರಿಸ್‌ಮಸ್ ದಿನದ ಬೆಳಿಗ್ಗೆ ನಿಲ್ಲಿಸಲಾಗಿದ್ದ ವಾಹನವೊಂದು ಸ್ಫೋಟಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಇದು ಉದ್ದೇಶಪೂರ್ವಕ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ.

ನಾಶ್ವಿಲ್ಲೆ ಪಟ್ಟಣದ ಪ್ರವಾಸಿ ಪ್ರದೇಶದಲ್ಲಿ ಬೆಳಿಗ್ಗೆ 6ರ ವೇಳೆ ವಾಹನವನ್ನು ಕಂಡಾಗ ತುರ್ತು ಪ್ರತಿಕ್ರಿಯೆಯಾಗಿ ಗುಂಡು ಹಾರಿಸಲಾಯಿತು ಎಂದು ಪೊಲೀಸ್ ವಕ್ತಾರ ಡಾನ್ ಆರೊನ್ ತಿಳಿಸಿದ್ದಾರೆ. ಅನುಮಾನಾಸ್ಪದ ಅಂಶ ಏನಿತ್ತು ಎಂಬ ಬಗ್ಗೆ ಅವರು ವಿವರಣೆ ನೀಡಿಲ್ಲ.

ಹೈದರಾಬಾದ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯಹೈದರಾಬಾದ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯ

ಮೋಟಾರ್ ಹೋಮ್ ವಾಹನವನ್ನು ಗಮನಿಸಿದ ಬಗೆ ನೋಡಿ ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಲಾಯಿತು. ಆದರೆ ಬಾಂಬ್ ನಿಷ್ಕ್ರಿಯ ತಂಡ ಆಗಮಿಸುವ ಮೊದಲೇ ವಾಹನ ಸ್ಫೋಟಗೊಂಡಿತು ಎಂದು ಅವರು ಹೇಳಿದ್ದಾರೆ.

Motor Home Vehicle Exploded In Nashville On Christmas: An Intentional Act Says Police

'ಈ ಸ್ಫೋಟವು ಉದ್ದೇಶಪೂರ್ವಕ ಕೃತ್ಯ ಎನ್ನುವುದು ನಮ್ಮ ಅನಿಸಿಕೆ. ಇದು ಬಹಳ ಮಹತ್ವದ ಘಟನೆ. ಎಫ್‌ಬಿಐ, ಆಲ್ಕೋಹಾಲ್ ಬ್ಯೂರೋ, ಅಗ್ನಿಶಾಮಕ ದಳ, ಸ್ಫೋಟಕ ದಳ ಸೇರಿದಂತೆ ವಿವಿಧ ಪ್ರಮುಖ ವಿಭಾಗಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ನಿಲ್ಲಿಸಿದ್ದ ವಾಹನ ಸ್ಫೋಟಗೊಂಡಿರುವುದು ಪೊಲೀಸರನ್ನು ಗುರಿಯನ್ನಾಗಿಸಿ ನಡೆದ ದಾಳಿ ಇರಬಹುದು. ಈ ಸ್ಫೋಟದ ಸ್ವರೂಪವನ್ನು ಗಮನಿಸಿದರೆ ಭಯೋತ್ಪಾದನಾ ಕೃತ್ಯ ಎನಿಸುತ್ತದೆ ಎಂದು ಹೇಳಿದ್ದಾರೆ. ಸ್ಫೋಟಕ್ಕೂ ಮುನ್ನ ವಾಹನವನ್ನು ನೋಡಿದ ಪೊಲೀಸರು ಸಮೀಪದಲ್ಲಿನ ಎಲ್ಲ ಮನೆಗಳಿಗೂ ತೆರಳಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು. ಪಾದಚಾರಿಗಳು ಅದರತ್ತ ತೆರಳುವುದನ್ನು ತಡೆದಿದ್ದರು.

ಸ್ಫೋಟದಿಂದ ಒಬ್ಬ ಪೊಲೀಸ್ ಅಧಿಕಾರಿಯ ಕಾಲಿಗೆ ಗಾಯವಾಗಿದೆ. ಅವರಿಗೆ ತಾತ್ಕಾಲಿಕ ಶ್ರವಣ ದೋಷ ಉಂಟಾಗಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಇತರೆ ಕೆಲವು ವಾಹನಗಳಿಗೂ ಬೆಂಕಿ ಹೊತ್ತುಕೊಂಡಿದೆ.

English summary
A Motor home vehicle parked in Nashville exploded on Christams morning, police called its an intentional act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X