ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ಹಾಗೂ ಇತರೆ ವೈರಸ್‌ಗಳು ವಿಮಾನದಲ್ಲಿ ಬೇಗ ಹರಡುವುದಿಲ್ಲ'

|
Google Oneindia Kannada News

ವಾಷಿಂಗ್ಟನ್, ಮೇ 27: ಕೊರೊನಾ ವೈರಸ್ ಸೇರಿದಂತೆ ಇತರೆ ವೈರಸ್‌ಗಳು ವಿಮಾನದಲ್ಲಿ ಬಹುಬೇಗ ಹರಡುವುದಿಲ್ಲ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ.

ವೈರಸ್‌ಗಳು ವಿಮಾನದಲ್ಲಿ ಬೇಗನೆ ಹರಡುವುದಿಲ್ಲ ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಾಧ್ಯವಾದಷ್ಟು ವಿಮಾನ ಪ್ರಯಾಣದಿಂದ ದೂರವಿರಿ ಎಂದು ಹೇಳಿದೆ.

ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು

ಕೊವಿಡ್ 19ಗೆ ಸಂಬಂಧಿಸಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಈ ಕುರಿತು ಸಿಡಿಸಿ ಉಲ್ಲೇಖಿಸಿದೆ. ವಿಮಾನದಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಸಿಡಿಸಿ ಶಿಫಾರಸು ಮಾಡಿಲ್ಲ. ಆದರೆ ವಿದೇಶದಿಂದ ಬರುವವರಿಗೆ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಸೂಚಿಸಿದೆ.

Most Viruses Other Germs Do Not Spread Easily On Flights

ವಿಮಾನದಲ್ಲಿ ಗಾಳಿಯ ಪರಿಚಲನೆ ಮತ್ತು ಶುದ್ಧೀಕರಣದಿಂದಾಗಿ ವೈರಸ್‌ಗಳು ಹರಡುವುದಿಲ್ಲ. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಪ್ರಯಾಣಿಕರು ಅಪಾಯವನ್ನು ತಂದುಕೊಳ್ಳುವುದು ಬೇಡ ಸಾಧ್ಯವಾದಷ್ಟು ವಿಮಾನ ಪ್ರಯಾಣದಿಂದ ದೂರವಿರಬೇಕು ಎಂದು ತಿಳಿಸಿದೆ.

ಕೊರೊನಾ ವೈರಸ್ ಪರಿಣಾಮವಾಗಿ ಅಮೆರಿಕದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಶೇ.90ರಷ್ಟು ವಿಮಾನ ಹಾರಾಟ ಸ್ತಬ್ಧಗೊಂಡಿದೆ.ಬಹುತೇಕ ಪ್ರಯಾಣಿಕರು ಸಾಕಷ್ಟು ಸಮಯವನ್ನು ಸೆಕ್ಯುರಿಟಿ ಲೈನ್ ಹಾಗೂ ಟರ್ಮಿನಲ್‌ಗಳಲ್ಲಿ ಕಳೆಯುತ್ತಾರೆ.

ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವುದಿಲ್ಲ. ಮಾಸ್ಕ್ ಧರಿಸುವುದು, ಕೈಗವಸುಗಳು, ಹ್ಯಾಂಡ್ ಸ್ಯಾನಿಟೈಸ್ ಬಳಕೆ ಮಾಡಲೇಬೇಕು. ಒಂದೊಮ್ಮೆ ಜ್ವರ, ಶೀತ, ಕೆಮ್ಮು, ಕಫದ ಲಕ್ಷಣಗಳಿದ್ದರೆ ವಿಮಾನದಲ್ಲಿ ಪ್ರಯಾಣಿಸಬೇಡಿ, ಕೈಗಳನ್ನು ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯಿರಿ ಎಂದು ಹೇಳಿದೆ.

English summary
Most viruses and other germs do not spread easily on flights, the US Center for Disease Control and Prevention has said in its Covid-19 guidelines which do not recommend following social distancing between two passengers inside a plane or keeping the middle seat unoccupied.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X