ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಾಂಬ್: ಚೀನಾದ ಮೇಲೆ ಟ್ರಂಪ್‌ಗೆ ಮತ್ತಷ್ಟು ಅನುಮಾನ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 6: ಚೀನಾದಲ್ಲಿ ಹುಟ್ಟಿ ಇದೀಗ ಇಡೀ ಜಗತ್ತನ್ನು ಕಾಡುತ್ತಿದೆ ಕೊರೊನಾ ವೈರಸ್‌. ಚೀನಾ ಹೊರತುಪಡಿಸಿ ಕೊರೊನಾ ದಿನದಿಂದ ದಿನಕ್ಕೆ ಬೇರೆ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ. ಆದರೆ, ಚೀನಾದಲ್ಲಿ ಮಾತ್ರ ಮಳೆ ಬಂದು ನಿಂತಂತಾಗಿದೆ ಕೊರೊನಾ ಪರಿಸ್ಥಿತಿ.

ಕೊರೊನಾ ಜಗತ್ತಿನಾದ್ಯಂತ ಈ ಪರಿ ಹರಡುತ್ತಿರುವ ಬಗ್ಗೆ ಅಮೆರಿಕಕ್ಕೆ ತೀವ್ರ ಗುಮಾನಿ ಕಾಡುತ್ತಿದೆ. ಕೊರೊನಾಕ್ಕೆ ಚೈನಿ ವೈರಸ್‌ ಎಂದೇ ಹೆಸರಿಟ್ಟಿದೆ. ಈ ಗುಮಾನಿಗೆ ಮತ್ತಷ್ಟು ಪುಷ್ಠಿ ಎನ್ನುವಂತೆ ಮತ್ತೊಂದು ವರದಿ ಬಂದಿದೆ.

ಅಮೆರಿಕದಲ್ಲಿ ಕೊರೊನಾ ರುದ್ರನರ್ತನ: 10 ಸಾವಿರ ಸನಿಹದಲ್ಲಿ ಸಾವಿನ ಸಂಖ್ಯೆ!ಅಮೆರಿಕದಲ್ಲಿ ಕೊರೊನಾ ರುದ್ರನರ್ತನ: 10 ಸಾವಿರ ಸನಿಹದಲ್ಲಿ ಸಾವಿನ ಸಂಖ್ಯೆ!

ತನ್ನ ದೇಶದಲ್ಲಿ ಕೊರೊನಾ ವೈರಸ್‌ ಹಬ್ಬಿರುವುದನ್ನು ಚೀನಾ ಬಹಿರಂಗಪಡಿಸಿದ ಬಳಿಕವೂ ಸುಮಾರು ನಾಲ್ಕು ಲಕ್ಷ ಜನ ಚೀನಾದಿಂದ ನೇರ ವಿಮಾನಗಳಲ್ಲಿ ಅಮೆರಿಕಕ್ಕೆ ಹೋಗಿ ಬಂದಿರುವುದು ಬಹಿರಂಗಗೊಂಡಿದೆ. ಮುಂದೆ ಓದಿ...

ಚೀನಾದ ಮೇಲೇ ಟ್ರಂಪ್ ಅನುಮಾನ ಹೆಚ್ಚಳ

ಚೀನಾದ ಮೇಲೇ ಟ್ರಂಪ್ ಅನುಮಾನ ಹೆಚ್ಚಳ

ಅಮೆರಿಕ ಸರ್ಕಾರ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಮೊದಲು ಚೀನಾದಿಂದ ಅಮೆರಿಕದ ವಿವಿಧ ನಗರಗಳಿಗೆ ಸುಮಾರು 4 ಲಕ್ಷ ಜನ ಬಂದು ಹೋಗಿದ್ದಾರೆ ಎಂದು ಅಮೆರಿಕದ ಮಾದ್ಯಮಗಳು ವರದಿ ಮಾಡಿವೆ. ಮುಖ್ಯವಾಗಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿದ್ದ ವುಹಾನ್‌ನಿಂದಲೇ ಸಾವಿರಾರು ಜನ ಅಮೆರಿಕಕ್ಕೆ ನೇರವಾಗಿ ಬಂದಿದ್ದಾರೆ ಎಂಬುದು ಬಹಿರಂಗವಾಗಿದೆ. ಇದು ಚೀನಾದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮಾನ ಮತ್ತಷ್ಟು ಹೆಚ್ಚಲು ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎಲ್ಲರೂ ಚೀನಾದವರಲ್ಲ

ಎಲ್ಲರೂ ಚೀನಾದವರಲ್ಲ

ಚೀನಾದಲ್ಲಿ ಕೊರೊನಾ ಕಾಣಿಸಿಕೊಂಡ ನಂತರ, ಅಮೆರಿಕಕ್ಕೆ ಬಂದ 4 ಲಕ್ಷ ಮಂದಿಯಲ್ಲಿ ವಿವಿಧ ದೇಶಗಳ ನಾಗರಿಕರು ಸಹ ಸೇರಿದ್ದಾರೆ. ಚೀನಾದಿಂದ ಬಂದವರಲ್ಲಿ ಶೇಕಡ 40 ರಷ್ಟು ಜನ ಮಾತ್ರ ಮೂಲತಃ ಚೀನಾದವರು. ಉಳಿದ ಶೇ 60 ಜನ ವಿವಿಧ ದೇಶಗಳ ನಾಗರಿಕರು. ಇವರು ಚೀನಾದಿಂದ ಅಮೆರಿಕಕ್ಕೆ ಬಂದಿದ್ದರು. ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ವೈರಸ್‌ ಹಬ್ಬುವುದನ್ನುನಿಯಂತ್ರಿಸಲಾಯಿತು ಎಂದು ಡೊನಾಲ್ಡ್‌ ಟ್ರಂಪ್ ಹೇಳಿದ್ದರು. ಆದರೆ, ಚೀನಾದಿಂದ ಅಮೆರಿಕಕ್ಕೆ ಬಂದ ಜನರ ಸಂಖ್ಯೆಯನ್ನು ನೋಡಿದಾಗ ಟ್ರಂಪ್ ಬಹಳ ತಡವಾಗಿ ಅಂತಾರಾಷ್ಟ್ರೀಯ ವಿಮಾನಯಾನ ತಡೆದಿದ್ದು ಕೆಟ್ಟ ನಿರ್ಧಾರ ಎಂದು ಅಮೆರಿಕ ಮಾಧ್ಯಮಗಳು ಟೀಕಿಸಿವೆ.

ಕೊರೊನಾ ವೈರಸ್ ಚಿಕಿತ್ಸೆಗೆ ಭಾರತದಲ್ಲಿ ಔಷಧಿ ಕೋರಿದ ಅಮೆರಿಕಾಕೊರೊನಾ ವೈರಸ್ ಚಿಕಿತ್ಸೆಗೆ ಭಾರತದಲ್ಲಿ ಔಷಧಿ ಕೋರಿದ ಅಮೆರಿಕಾ

ಆರಂಭದಲ್ಲಿ ಎಚ್ಚೆತ್ತುಕೊಂಡಿರಲಿಲ್ಲ

ಆರಂಭದಲ್ಲಿ ಎಚ್ಚೆತ್ತುಕೊಂಡಿರಲಿಲ್ಲ

ಅಮೆರಿಕದ ವಿಮಾನಯಾನ ಸಂಸ್ಥೆಗಳು ವಿಮಾನ ಸಂಚಾರ ಸ್ಥಗಿತಗೊಳಿಸಿದ ಬಳಿಕ ಚೀನಾದ ವಿಮಾನಗಳು ಎಂದಿನಂತೆ ಸಂಚಾರ ಆರಂಭಿಸಿದ್ದವು. ಈ ವಿಮಾನಗಳ ಮೂಲಕ ಹಲವು ಮಂದಿ ಅಮೆರಿಕ ಪ್ರವೇಶಿಸಿದ್ದಾರೆ. ಆದರೆ, ಅಮೆರಿಕದಲ್ಲಿ ವೈರಸ್‌ ಮೊದಲ ಬಾರಿ ಎಲ್ಲಿ ಕಾಣಿಸಿಕೊಂಡಿತು ಎನ್ನುವುದು ಇನ್ನೂ ಖಚಿತವಾಗಿ ಗೊತ್ತಾಗಿಲ್ಲ. ಆದರೆ, ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ಮತ್ತು ಅಮೆರಿಕಕ್ಕೆ ಬಂದ ಬಳಿಕ ಜನರ ಆರೋಗ್ಯ ತಪಾಸಣೆಗೆ ಕಠಿಣ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬುದು ಕೂಡ ಬಹಿರಂಗಗೊಂಡಿದೆ.

ಟ್ರಂಪ್ ವಿರುದ್ಧ ಟೀಕೆ ಹೆಚ್ಚಳ

ಟ್ರಂಪ್ ವಿರುದ್ಧ ಟೀಕೆ ಹೆಚ್ಚಳ

ಜನವರಿ ತಿಂಗಳ ಮಧ್ಯಭಾಗಕ್ಕೂ ಮುನ್ನ ಚೀನಾ ಅಧಿಕಾರಿಗಳು ವೈರಸ್‌ ಹಬ್ಬಿರುವುದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೈರಸ್‌ನ ತೀವ್ರತೆಯ ಕುರಿತು ಇತರ ರಾಷ್ಟ್ರಗಳು ಕಟ್ಟೆಚ್ಚರ ವಹಿಸುವ ಬಗ್ಗೆ ಸಮರ್ಪಕ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಚೀನಾದಿಂದ ಬಂದವರು ವೈರಸ್‌ ಸೋಂಕಿಗೆ ಒಳಗಾಗಿರುವ ಬಗ್ಗೆ ಪರೀಕ್ಷೆಯನ್ನೇ ಮಾಡಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

English summary
Coronavirus In America: More Than 4 Lakh People Visited To America After Coronavirus Spread In China. us president upset with china.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X