ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ: ಕೊರೊನಾದಿಂದ ಲಕ್ಷಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

|
Google Oneindia Kannada News

ವಾಷಿಂಗ್ಟನ್, ಜನವರಿ 04: ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಲಕ್ಷಕ್ಕಿಂತಲೂ ಅಧಿಕವಾಗಿದೆ. ಅಮೆರಿಕದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ 18,500ಕ್ಕೂ ಹೆಚ್ಚು ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್ ಜಗತ್ತಿನಾದ್ಯಂತ ಮತ್ತೊಮ್ಮೆ ಆತಂಕ ಸೃಷ್ಟಿಸುವ ಮಟ್ಟಕ್ಕೆ ತಲುಪಿದೆ. ಅಮೆರಿಕದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ಕೋವಿಡ್ ಪ್ರಕರಣಗಳು ತಲುಪಿದ್ದು, ಪ್ರಸ್ತುತ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಚ್ಚರಿಕೆ ಗಂಟೆ: ಭಾರತದಲ್ಲಿ ಕೊವಿಡ್-19 ಸೋಂಕಿನ 3ನೇ ಅಲೆ ಶುರು! ಎಚ್ಚರಿಕೆ ಗಂಟೆ: ಭಾರತದಲ್ಲಿ ಕೊವಿಡ್-19 ಸೋಂಕಿನ 3ನೇ ಅಲೆ ಶುರು!

ಏಳು ರೋಗಿಗಳಲ್ಲಿ ಓರ್ವನಿಗೆ ಕೋವಿಡ್: ಈಗ ಸದ್ಯಕ್ಕೆ ಅಮೆರಿಕದ ಆಸ್ಪತ್ರೆಗಳಲ್ಲಿ ಮುಕ್ಕಾಲು ಭಾಗದಷ್ಟು ಹಾಸಿಗೆಗಳು ಭರ್ತಿಯಾಗಿವೆ. ಆಸ್ಪತ್ರೆಯಲ್ಲಿರುವ ಏಳು ಮಂದಿ ರೋಗಿಗಳಲ್ಲಿ ಓರ್ವ ಕೋವಿಡ್ ರೋಗಿ ಇರುತ್ತಾನೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸುತ್ತಿವೆ.

More Than 100,000 People Hospitalized With Covid-19 In US

ತೀವ್ರ ನಿಗಾ ಘಟಕದಲ್ಲಿ 18,500ಕ್ಕೂ ಹೆಚ್ಚು ಕೋವಿಡ್-19 ರೋಗಿಗಳಿದ್ದಾರೆ. ಸುಮಾರು ಶೇಕಡಾ 78 ತೀವ್ರ ನಿಗಾ ಘಟಕದ ಹಾಸಿಗೆಗಳು ಭರ್ತಿಯಾಗಿವೆ. ಅವುಗಳಲ್ಲಿ ಶೇಕಡಾ 25ರಷ್ಟು ಹಾಸಿಗೆಗಳು ಕೋವಿಡ್ ರೋಗಿಗಳಿಂದ ಭರ್ತಿಯಾಗಿವೆ.
ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಜನವರಿ 14, 2021ರಂದು ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 1 ಲಕ್ಷದ 42 ಸಾವಿರಕ್ಕಿಂತಲೂ ಹೆಚ್ಚಿತ್ತು. ಈ ಸಂಖ್ಯೆ ದಾಖಲೆ ಸೃಷ್ಟಿ ಮಾಡಿತ್ತು.

ಇದಾದ ನಂತರ ಒಂದು ಲಕ್ಷದ ತಲುಪಿದ್ದು, ಸೆಪ್ಟೆಂಬರ್ 11 2021ರಂದು ಮಾತ್ರ. ಅಲ್ಲಿಂದ ಇಲ್ಲಿವರೆಗೆ ಕೋವಿಡ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇತ್ತು. ಈಗ ಮತ್ತೊಮ್ಮೆ ಒಂದು ಲಕ್ಷ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಹೌದು, ಈಗ ಅಮೆರಿಕದಲ್ಲಿ ಆಸ್ಪತ್ರೆಗೆ ಸೇರಿಕೊಂಡಿರುವರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸಿಎನ್​ಎನ್​ ವರದಿ ಮಾಡಿದೆ.

ಪ್ರಸ್ತುತ ನ್ಯೂಜೆರ್ಸಿ, ಓಹಿಯೋ ಮತ್ತು ಡೆಲವೇರ್‌ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಪ್ರತಿ 1 ಲಕ್ಷ ಜನರಿಗೆ 50ಕ್ಕೂ ಹೆಚ್ಚು ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರೆ, ಅಲಾಸ್ಕಾ ಮತ್ತು ವ್ಯೋಮಿಂಗ್‌ನಲ್ಲಿ ಒಂದು ಲಕ್ಷ ಮಂದಿಗೆ 10ಕ್ಕಿಂತ ಕಡಿಮೆ ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮೆರಿಕದ ಸೆಂಟರ್​ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ ನೀಡಿದ ಮಾಹಿತಿಯಂತೆ ಡಿಸೆಂಬರ್​ನ ಕೊನೆ ವಾರದಲ್ಲಿ ಪ್ರತಿ ದಿನ 500ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿದೆ. ಈಗ ಸದ್ಯಕ್ಕೆ 2 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್​ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಅಮೆರಿಕದಲ್ಲಿ ಅವಕಾಶ ನೀಡಲಾಗಿದೆ. ಅಮೆರಿಕದಲ್ಲಿ ಓಮಿಕ್ರಾನ್ ದಿನೇ ದಿನೇ ಹೆಚ್ಚಳವಾಗುತ್ತಿರುವುದರ ಮಧ್ಯೆ ನಿನ್ನೆ ಒಂದೇ ದಿನ 1 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದೆ.

ಮೂರು ಪಟ್ಟು ವೇಗವಾಗಿ ಅಮೆರಿಕದಲ್ಲಿ ಓಮಿಕ್ರಾನ್ ಹಬ್ಬುತ್ತಿದೆ
ಈ ಹಿಂದಿನ ಒಂದು ಮತ್ತು ಎರಡನೇ ಅಲೆಗಿಂತ ಮೂರು ಪಟ್ಟು ವೇಗವಾಗಿ ಅಮೆರಿಕದಲ್ಲಿ ಓಮಿಕ್ರಾನ್ ಹಬ್ಬುತ್ತಿದೆ. ಕಳೆದೊಂದು ವಾರದಲ್ಲಿ ಪ್ರತಿ 100 ಅಮೆರಿಕನ್ನರಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ಯೂನಿವರ್ಸಿಟಿ ವರದಿ ಮಾಡಿದೆ.

ಓಮಿಕ್ರಾನ್ ಮತ್ತು ಕೊರೊನಾ ಇಷ್ಟೊಂದು ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಶ್ವೇತಭವನದ ಕೊರೊನಾವೈರಸ್ ನಿರ್ವಹಣಾ ತಂಡವನ್ನು ಭೇಟಿ ಮಾಡಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಲಿದ್ದಾರೆ.

ಜನವರಿ 3ರಂದು ಸಾಯಂಕಾಲ 7.30ರ ಹೊತ್ತಿಗೆ ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಅಂಕಿಅಂಶ ಪ್ರಕಾರ, ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ನಿನ್ನೆ ಒಂದೇ ದಿನದಲ್ಲಿ ವರದಿಯಾಗಿದ್ದು ಎಲ್ಲಾ ರಾಜ್ಯಗಳಿಂದ ಅಷ್ಟು ಹೊತ್ತಿಗೆ ಅಂಕಿ ಅಂಶ ಸಿಕ್ಕಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ.

ಭಾನುವಾರ ಒಂದೇ ದಿನ ಅಮೆರಿಕದಲ್ಲಿ 5 ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸು ದಾಖಲಾಗಿತ್ತು. ಇದುವರೆಗೆ ಅಮೆರಿಕದಲ್ಲಿ 55 ಮಿಲಿಯನ್ ಗಿಂತಲೂ ಅಧಿಕ ಕೊರೊನಾ ಪಾಸಿಟಿವ್ ಕೇಸುಗಳು ವರದಿಯಾಗಿವೆ. ಅಂದರೆ ಪ್ರತಿ ಆರು ಜನರಲ್ಲಿ ಒಬ್ಬರಿಗೆ ಬಂದಂತೆ ಆಗಿದೆ. ಇದುವರೆಗೆ ದೇಶದಲ್ಲಿ 8 ಲಕ್ಷದ 26 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ.

ಈ ಮಧ್ಯೆ ಅಲ್ಲಿನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ 12ರಿಂದ 15 ವರ್ಷದ ಮಕ್ಕಳಿಗೆ ಫೈಜರ್-ಬಯೋಂಟೆಕ್ ಕೊರೋನಾ ವೈರಸ್ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ನೀಡಿದೆ.

English summary
More than 103,000 people are currently hospitalized with Covid-19, the first time the total has reached six figures in nearly four months, according to the latest data from the US Department of Health and Human Services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X