ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಬರೋಬ್ಬರಿ 10 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 17: ಅಮೆರಿಕದಲ್ಲಿ ಬರೋಬ್ಬರಿ 10 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ.

ಇಡೀ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಿನ ಸೋಂಕು ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲನೆಯ ಸ್ಥಾನದಲ್ಲಿದೆ.

ಅಮೆರಿಕಾದಲ್ಲಿ ಸಾಂಕ್ರಾಮಿಕ ಪಿಡುಗಿನ ನಡುವೆ ಸಂಭ್ರಮದ ದೀಪಾವಳಿಅಮೆರಿಕಾದಲ್ಲಿ ಸಾಂಕ್ರಾಮಿಕ ಪಿಡುಗಿನ ನಡುವೆ ಸಂಭ್ರಮದ ದೀಪಾವಳಿ

ದಡಾರ, ಪೋಲಿಯೊ ಲಸಿಕೆ ಹಾಕಿಸಲಾದ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿಲ್ಲ ಎಂದು ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ. ಸಾಲಿಗೋಜಾ ಹೇಳಿದ್ದಾರೆ. ಪುಟ್ಟ ಮಕ್ಕಳಗೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಅಮೆರಿಕಾ ಸರ್ಕಾರ ರಾಷ್ಟ್ರೀಯ ಕಾರ್ಯತಂತ್ರವನ್ನು ತಕ್ಷಣ ಜಾರಿಗೆ ತರಬೇಕೆಂದು ಡಾ. ಗೋಜಾ ಒತ್ತಾಯಿಸಿದ್ದಾರೆ.

More Than 1 Million Children In The US Have Had Covid-19

ಅಮೆರಿಕದ ಬಯೋಟೆಕ್ ಫರ್ಮ್ ಮಾಟೆರ್ನಾ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಶೇ.94ರಷ್ಟು ಸುರಕ್ಷಿತ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಡೆರ್ನಾವು 30 ಸಾವಿರ ಮಂದಿ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಮಾಡಿದೆ. ಕಳೆದ ವಾರವಷ್ಟೇ ಅಮೆರಿಕದ ಫಾರ್ಮಾಸುಟಿಕಲ್ ಕಂಪನಿ ಪಿಫೈಜರ್ ಹಾಗೂ ಅದರ ಜರ್ಮಲ್ ಪಾಲುದಾರ ಬಯೋಎನ್‌ಟೆಕ್ ತಮ್ಮ ಲಸಿಕೆ ಶೇ.90ರಷ್ಟು ಸುರಕ್ಷಿತ ಎಂದು ಹೇಳಿಕೊಂಡಿದ್ದವು.

ಕೊರೊನಾ ಲಸಿಕೆಯ ಮೂರನೇ ಪ್ರಯೋಗದಲ್ಲಿ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡ ಕೊರೊನಾ ಲಸಿಕೆ ಗುಣಪಡಿಸಿದೆ. ಈಗ ಪಿಫೈಜರ್ ನಂತರ ಎರಡನೇ ಕೊರೊನಾ ಲಸಿಕೆ ಮೇಲೆ ನಂಬಿಕೆ ಬಂದಿದೆ.

ಅಮೆರಿಕಾದಲ್ಲಿ ಶೇ 14ರಷ್ಟು ಸೋಂಕು ಪ್ರಕರಣಗಳು ತಂದೆ ತಾಯಿಯಿಂದಲೇ ಮಕ್ಕಳಿಗೆ ಹರಡಿವೆ ಎಂದು ಡಾ. ಗೋಜಾ ವಿವರಿಸಿದ್ದಾರೆ. ಕೊರೊನಾ ವೈರಸ್ ಆರಂಭಗೊಂಡಾಗಿನಿಂದ ನವೆಂಬರ್ 12 ರವರೆಗೆ ಅಮೆರಿಕಾದಲ್ಲಿ 10,39,464 ಮಕ್ಕಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಕಳೆದ ವಾರ ಅಮೆರಿಕಾದಲ್ಲಿ 1,11,946 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.

English summary
More than 1 million children in the United States have been diagnosed with Covid-19, according to a report released Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X