ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆಗೂ ಮುನ್ನ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗದು

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 1: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಒಳಗೆ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ನವೆಂಬರ್ 25ರೊಳಗೆ ಮಾರ್ಡೆನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಯುಎಸ್ ಬಯೋಟೆಕ್ ಫರ್ಮ್ ಮಾಡೆರ್ನಾ ತಿಳಿಸಿದೆ.

ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಕೊರೊನಾ ಲಸಿಕೆ ದೊರೆತರೆ ತಮ್ಮ ಪ್ರಚಾರಕ್ಕೂ ಸಹಾಯವಾಗುತ್ತಿತ್ತು ಎಂದು ಡೊನಾಲ್ಡ್ ಟ್ರಂಪ್ ಬಯಸಿದ್ದರು. ಆದರೆ ಚುನಾವಣೆಗೂ ಮುನ್ನ ಲಸಿಕೆ ಸಿಗುವುದು ಕಷ್ಟ ಎಂದು ಮಾಡೆರ್ನಾ ಹೇಳಿದೆ.

ಡೊನಾಲ್ಡ್ ವಿರುದ್ಧ ಗಂಭೀರ ಆರೋಪ, ಸರಿಯಾಗಿ ತೆರಿಗೆ ಕಟ್ಟಲಿಲ್ವಾ ಟ್ರಂಪ್..? ಡೊನಾಲ್ಡ್ ವಿರುದ್ಧ ಗಂಭೀರ ಆರೋಪ, ಸರಿಯಾಗಿ ತೆರಿಗೆ ಕಟ್ಟಲಿಲ್ವಾ ಟ್ರಂಪ್..?

ಲಸಿಕೆಯಿಂದ ಶೀತ, ಆಯಾಸ, ಜ್ವರ, ತಲೆನೋವು, ಸ್ನಾಯು ನೋವು ಮುಂತಾದ ವಿವಿಧ ಸಣ್ಣಪ್ರಮಾಣದ ಅಡ್ಡಪರಿಣಾಮಗಳು ಉಂಟಾಗಿವೆ. ಆದರೆ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ಕಂಪೆನಿ ಮಾಹಿತಿ ನೀಡಿದೆ.

ಕೋವಿಡ್‌ 19ರಿಂದ ತೀವ್ರವಾಗಿ ಬಳಲುತ್ತಿರುವ ವಯಸ್ಕ ರೋಗಿಗಳು ಚೇತರಿಸಿಕೊಳ್ಳಲು ಅವರ ದೇಹದಲ್ಲಿ ಆಂಟಿಬಾಡಿಗಳ ಪ್ರಮಾಣದಲ್ಲಿ ಹೆಚ್ಚಳ ಅಗತ್ಯವಾಗಿದೆ.

ನವೆಂಬರ್ 25ರ ವೇಳೆಗೆ ಸುರಕ್ಷಿತ ಡಾಟಾಗಳು ಲಭ್ಯ

ನವೆಂಬರ್ 25ರ ವೇಳೆಗೆ ಸುರಕ್ಷಿತ ಡಾಟಾಗಳು ಲಭ್ಯ

ನವೆಂಬರ್ 25ರ ವೇಳೆ ಲಸಿಕೆ ಕುರಿತು ಸುರಕ್ಷಿತ ಡಾಟಾಗಳು ಲಭ್ಯವಾಗಲಿವೆ. ಬಳಿಕ ಫುಡ್ ಹಾಗೂ ಡ್ರಗ್ ಅಡ್ಮಿನಿಸ್ಟ್ರೇಷನ್ ಬಳಿ ಅನುಮತಿ ಕೇಳಲಿದ್ದೇವೆ ಎಂದು ತಿಳಿಸಿದೆ.

ನವೆಂಬರ್ 3ರೊಳಗೆ ಲಸಿಕೆ ರೆಡಿಯಾಗಬೇಕಿತ್ತು

ನವೆಂಬರ್ 3ರೊಳಗೆ ಲಸಿಕೆ ರೆಡಿಯಾಗಬೇಕಿತ್ತು

ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಕೊರೊನಾ ಲಸಿಕೆ ಅಮೆರಿಕಕ್ಕೆ ಲಭ್ಯವಾಗುವಂತೆ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಜನರಿಗೆ ಭರವಸೆ ನೀಡಿದ್ದರು. ಅಮೆರಿಕದಲ್ಲಿ ಕೊರೊನಾದಿಂದಾಗಿ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.

ಒಟ್ಟು 11 ಲಸಿಕೆಗಳು ಕೊನೆಯ ಹಂತದ ಪ್ರಯೋಗದಲ್ಲಿವೆ

ಒಟ್ಟು 11 ಲಸಿಕೆಗಳು ಕೊನೆಯ ಹಂತದ ಪ್ರಯೋಗದಲ್ಲಿವೆ

ಒಟ್ಟು 11 ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿವೆ, ಅದರಲ್ಲಿ ಮಾಡೆರ್ನಾ ಕೂಡ ಒಂದಾಗಿದೆ. ಅಮೆರಿಕದ ಮಾಡೆರ್ನಾ ಇಂಕ್‌ ಜೈವಿಕ ತಂತ್ರಜ್ಞಾನ ಕಂಪೆನಿ ಪ್ರಯೋಗಿಸಿರುವ ಲಸಿಕೆ ಧನಾತ್ಮಕ ಫ‌ಲಿತಾಂಶ ನೀಡುವ ಸಾಧ್ಯತೆ ಇದೆ. ವಯಸ್ಕ ವ್ಯಕ್ತಿಗಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಇದನ್ನು ಪ್ರಯೋಗಿಸಲಾಗಿದ್ದು, ಸಕರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಇದು ಕೋವಿಡ್ ವೈರಸ್‌ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ ಎಂದು ಹೇಳಲಾಗಿದೆ.

ಉನ್ನತ ಮಟ್ಟದ ಸ್ಥಿರತೆ

ಉನ್ನತ ಮಟ್ಟದ ಸ್ಥಿರತೆ

ಮಾಡೆರ್ನಾದ ಕೊಡೊನಾ ವೈರಸ್‌ ಲಸಿಕೆಯು ತನ್ನ ಮೊದಲ ಹಂತದ ಪ್ರಯೋಗದಲ್ಲಿ,ಪ್ರತಿಕಾಯಗಳ ಉತ್ಪಾದನೆಯಲ್ಲಿ ನಿರಂತರ ಉನ್ನತ ಮಟ್ಟದ ಸ್ಥಿರತೆಯನ್ನು ಸೃಷ್ಟಿಸಿದೆ. ವಯಸ್ಕರಲ್ಲಿ ಈ ಫ‌ಲಿತಾಂಶ ಕಂಡುಬಂದಿದೆ. ಯುವ ವಯಸ್ಕರಿಗಿಂತಲೂ 55 ವರ್ಷಕ್ಕಿಂತ ಹೆಚ್ಚಿನ ವಯಸ್ಕರಲ್ಲಿ ಆಂಟಿಬಾಡಿಗಳ ಉತ್ಪಾದನೆ ಹೆಚ್ಚಾಗಿದೆ ಎಂದು ಅದು ಹೇಳಿದೆ.

ಮಾಡೆರ್ನಾದ ಆರಂಭದ ಹಂತದ ಪ್ರಯೋಗದಲ್ಲಿ ಈ ಫ‌ಲಿತಾಂಶಗಳು ಸಿಕ್ಕಿವೆ. ಹೆಚ್ಚು ವಯಸ್ಸಾದ 20 ಜನರ ಮೇಲಿನ ಲಸಿಕೆ ಪ್ರಯೋಗದ ವಿವರಗಳನ್ನು ಸಹ ಅದು ಒಳಗೊಂಡಿದೆ. ಮಾಡೆರ್ನಾ ಕಂಪೆನಿಯು ಈ ಡೇಟಾಗಳನ್ನು ಅಮೆರಿಕದ ಪ್ರತಿರಕ್ಷಣಾ ವಿಭಾಗದದ ರೋಗ ನಿಯಂತ್ರಣ ಮತ್ತು ತಡೆ ಸಲಹಾ ಸಮಿತಿಗೆ ಬುಧವಾರ ಸಲ್ಲಿಕೆ ಮಾಡಿದೆ.

Recommended Video

Namma Metro ಸಿಬ್ಬಂದಿಗಳಿಗೆ ಕೊರೊನ ಸೋಂಕು | Oneindia Kannada

English summary
US biotech firm Moderna won't seek an emergency use authorization for its coronavirus vaccine before November 25, its CEO told the Financial Times on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X