• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಡೆರ್ನಾ ಕೊರೊನಾ ಲಸಿಕೆಗೆ ದರ ನಿಗದಿ, ಆದ್ರೆ ಸಾಮಾನ್ಯ ಜನ ಕೊಳ್ಳೋಕಾಗುತ್ತಾ?

|

ನವದೆಹಲಿ, ಆಗಸ್ಟ್ 10: ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಮಾಡೆರ್ನಾ ಕಂಪನಿ ಔಷಧ ಬೆಲೆಯನ್ನು ನಿಗದಿಪಡಿಸಿದೆ.

   Donald Trump Exits briefing after shooting near White House | Oneindia Kannada

   ಕೆಲ ರಾಷ್ಟ್ರಗಳಿಗೆ ಅಥವಾ ಗ್ರಾಹಕರಿಗೆ ಕಷ್ಟದ ಸಮಯದಲ್ಲಿ ಕಡಿಮೆ ಬೆಲೆಯಲ್ಲಿ ನೀಡಲು ಸಿದ್ಧವಿರುವುದಾಗಿ ತಿಳಿಸಿದೆ. ಇದರ ಪ್ರಕಾರ ಪ್ರತಿ ಡೋಸ್​ಗೆ 2,400 ರೂ.ಗಳಿಂದ 2,800 ರೂ.ವರೆಗೆ ನಿಗದಿಪಡಿಸಿದೆ.

   ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಲಸಿಕೆ ಪ್ರತಿ ಡೋಸ್‌ಗೆ 225 ರೂ

   ಮಾಡೆರ್ನಾ ಮಾನವನ ಮೇಲೆ ಮೂರನೇ ಹಂತದ ಪ್ರಯೋಗವನ್ನು ನಡೆಸಿದೆ. ಅಮೆರಿಕ ಇತರ ಕಂಪನಿಗಳ ಜತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಹೋಲಿಸಿದಲ್ಲಿ ಇದು ಅಂದಾಜು ಎರಡುಪಟ್ಟು ಹೆಚ್ಚಾಗಿದೆ. ಹೀಗಿದ್ದರೂ ತನ್ನದು ನ್ಯಾಯಯುತ ಬೆಲೆಯಾಗಿದೆ ಎಂದು ಮಾಡೆರ್ನಾ ಹೇಳಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ 225 ರೂಗೆ ಲಭ್ಯವಿರಲಿದ್ದು, 2400 ರೂ ನೀಡಿ ಮಾಡೆರ್ನಾ ಲಸಿಕೆ ಕೊಳ್ಳುವುದು ಸಾಮಾನ್ಯ ಜನರಿಗೆ ಕಷ್ಟವಾಗಬಹುದು.

   ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

   ಸದ್ಯ ಅಮೆರಿಕದ 100ಕ್ಕೂ ಅಧಿಕ ಸ್ಥಳಗಳಲ್ಲಿ ಮಾಡೆರ್ನಾ ಕಂಪನಿ 30 ಸಾವಿರಕ್ಕೂ ಅಧಿಕ ಜನರ ಮೇಲೆ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿದೆ. ಅಕ್ಟೋಬರ್​ ಅಂತ್ಯದ ವೇಳೆಗೆ ಲಸಿಕೆ ಬಿಡುಗಡೆಗೊಳಿಸುವ ಆಶಾಭಾವ ಹೊಂದಿದೆ. ಮಾಡೆರ್ನಾ ಕಂಪನಿಗೆ ವಿವಿಧ ದೇಶಗಳು 3,500 ಕೋಟಿ ರೂ. ಗೂ ಅಧಿಕ ಮೊತ್ತ ನೀಡಿ ಲಸಿಕೆಗಾಗಿ ಕಾಯುತ್ತಿವೆ.

    ಲಸಿಕೆ ಇಲ್ಲದೆ ವೈರಸ್ ದೂರವಾಗುವುದಿಲ್ಲ

   ಲಸಿಕೆ ಇಲ್ಲದೆ ವೈರಸ್ ದೂರವಾಗುವುದಿಲ್ಲ

   ವಿಶ್ವಸಂಸ್ಥೆ ಪ್ರಕಾರ ಸಾಂಕ್ರಾಮಿಕ ರೋಗದ ಸಂಕಷ್ಟದಲ್ಲಿದ್ದೇವೆ. ಲಸಿಕೆ ಇಲ್ಲದೇ ಅಥವಾ ಪ್ರತಿರೋಧ ಶಕ್ತಿ ಹೆಚ್ಚಾಗದೇ ಇದು ನಮ್ಮಿಂದ ದೂರಾಗದು. ಕೊಳ್ಳುವ ಶಕ್ತಿ ಇಲ್ಲದಿದ್ದಾಗ್ಯೂ ಪ್ರತಿಯೊಬ್ಬರಿಗೆ ಲಸಿಕೆ ದೊರೆಯುವಂತಾಗಲು ಜಗತ್ತಿನ ವಿವಿಧ ದೇಶಗಳ ಸರ್ಕಾರಗಳ ಜತೆ ಮಾತುಕತೆಯಲ್ಲಿದ್ದೇವೆ ಎಂದು ಮಾಡೆರ್ನಾ ಸಿಇಒ ಸೇಫನ್​ ಬ್ಯಾನ್ಸೆಲ್​ ಹೇಳಿದ್ದಾರೆ.

    ಕಡಿಮೆ ದರದಲ್ಲಿ ಲಸಿಕೆ

   ಕಡಿಮೆ ದರದಲ್ಲಿ ಲಸಿಕೆ

   ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಲಸಿಕೆ ಬೆಲೆಯನ್ನು ಅದರ ಮೌಲ್ಯಕ್ಕಿಂತ ಕಡಿಮೆಗೆ ನಿಗದಿ ಮಾಡಲಾಗುವುದು. ನಿಯಂತ್ರಣಕ್ಕೆ ಬಂದ ಮೇಲೆ ಅದರ ನಿಗದಿತ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.ಇನ್ನೊಂದೆಡೆ, ಅಮೆರಿಕ ಮಾಡೆರ್ನಾ ಕಂಪನಿಗೆ ಭಾರಿ ಪ್ರಮಾಣದಲ್ಲಿ ಹಣಕಾಸು ನೆರವು ನೀಡಿದ್ದಲ್ಲದೇ, ಖರೀದಿ ಒಪ್ಪಂದ ಮಾಡಿಕೊಂಡಿದೆ. ಇತರ ಕಂಪನಿಗಳು 1,500 ರೂ.ಗೂ ಕಡಿಮೆ ಬೆಲೆಯಲ್ಲಿ ಲಸಿಕೆ ಪೂರೈಸುವುದಾಗಿ ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡಿವೆ.

    ಅಸ್ಟ್ರಾಜೆನೆಕಾದ ಬೆಲೆ 225 ರೂ.

   ಅಸ್ಟ್ರಾಜೆನೆಕಾದ ಬೆಲೆ 225 ರೂ.

   ಬಿಲ್​ ಆ್ಯಂಡ್​ ಮೆಲಿಂಡಾ ಗೇಟ್​ ಪ್ರತಿಷ್ಠಾನದಿಂದ ಪುಣೆಯ ಸಿರಂ ಇನ್‌ಸ್ಟಿಟ್ಯೂಟ್‌‌ ಆಫ್‌ ಇಂಡಿಯಾಗೆ ಹಣಕಾಸಿ ನೆರವು ದೊರೆಯುತ್ತಿರುವುದರಿಂದ ಭಾರತ ಹಾಗೂ ಆರ್ಥಿಕವಾಗಿ ಹಿಂದುಳಿದ ನೂರು ದೇಶಗಳಿಗೆ ಪ್ರತಿ ಡೋಸ್‌‌ಗೆ 225 ರೂ.ದರದಲ್ಲಿ ಕೊರೊನಾ ಲಸಿಕೆಯನ್ನು ಪೂರೈಕೆ ಮಾಡಲಿದೆ.

    ಮಾಡೆರ್ನಾ ಕಂಪನಿ ಮಾತ್ರ 2400 ರೂನಿಗದಿಪಡಿಸಿದೆ

   ಮಾಡೆರ್ನಾ ಕಂಪನಿ ಮಾತ್ರ 2400 ರೂನಿಗದಿಪಡಿಸಿದೆ

   ಈ ಕೊರೊನಾ ಲಸಿಕೆಗೆ ಅಮೆರಿಕಾದ ಮಾಡೆರ್ನಾ ಕಂಪೆನಿಯು 2,400 ರೂ.ಗಳಿಂದ 2,800 ರೂ.ವರೆಗೆ ನಿಗದಿ ಪಡಿಸಿದೆ. ಭಾರತದಲ್ಲಿ ಸಿರಂ ಇನ್‌ಸ್ಟಿಟ್ಯೂಟ್‌‌‌‌‌ ಲಸಿಕೆಗೆ 1,000 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದ್ದು, ಈ ಬೆಲೆಯನ್ನು ಗೇಟ್ಸ್‌‌‌ ಪ್ರತಿಷ್ಠಾನದ ನೆರವು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿದಂತಾಗಿದೆ.

   ಕೆಲವು ಸಂಸ್ಥೆಗಳು ಆಯಾ ದೇಶಗಳ ಆರ್ಥಿಕ ಸಹಕಾರದ ಅಡಿಯಲ್ಲಿ ಸಂಶೋಧನೆ ನಡೆಸುತ್ತಿದ್ದು, ಈ ಕಾರಣದಿಂದ ಲಸಿಕೆಯನ್ನು ಅಂತಹ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದರೆ, ಉಳಿದಂತೆ ದೇಶಗಳು ಈ ಲಸಿಕೆಯನ್ನು ಅಧಿಕ ಬೆಲೆಗೆ ಕೊಡಬೇಕಾಗುತ್ತದೆ.

   English summary
   Moderna has said that its vaccine, under pandemic pricing, is likely to cost between Rs 2,400 and Rs 2,800.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X