ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ತುರ್ತು ಬಳಕೆಗೆ ಅಮೆರಿಕ, ಯುರೋಪ್ ಅನುಮತಿ ಕೋರಿದ ಮಾಡೆರ್ನಾ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 30: ತನ್ನ ಕೊರೊನಾ ವೈರಸ್ ಲಸಿಕೆಯು ಸೋಂಕಿನ ವಿರುದ್ಧ ಪ್ರಬಲ ರಕ್ಷಣೆ ನೀಡುತ್ತದೆ ಎಂಬುದು ತನ್ನ ಅಧ್ಯಯನಗಳ ಫಲಿತಾಂಶದಿಂದ ದೃಢಪಟ್ಟಿರುವುದರಿಂದ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಮಾಡೆರ್ನಾ ಇಂಕ್. ಅಮೆರಿಕ ಮತ್ತು ಯುರೋಪಿಯನ್ ದೇಶಗಳ ಔಷಧ ನಿಯಂತ್ರಕ ಸಂಸ್ಥೆಗಳಿಗೆ ಮನವಿ ಮಾಡಿದೆ. ಸೀಮಿತ ಪ್ರಮಾಣದಲ್ಲಿ ಲಸಿಕೆ ನೀಡುವಿಕೆ ಪ್ರಾರಂಭಿಸಿದರೆ ಕೊರೊನಾ ವೈರಸ್ ಸನ್ನಿವೇಶ ಮತ್ತಷ್ಟು ಕೈಮೀರಿ ಹೋಗುವುದನ್ನು ನಿಯಂತ್ರಿಸಬಹುದು ಎಂದು ಅದು ಹೇಳಿದೆ.

ಅಮೆರಿಕ ಮತ್ತು ಯುರೋಪ್‌ಗಳಲ್ಲಿ ತೀವ್ರವಾಗಿ ಹರಡುತ್ತಿರುವ ಸೋಂಕನ್ನು ನಿಯಂತ್ರಿಸಲು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಪ್ರಯೋಗಿಸುತ್ತಿರುವ ಲಸಿಕೆಗಳು ಯಶ ಕಾಣಬೇಕಿವೆ. ಅಮೆರಿಕದಲ್ಲಿ ಈಗಾಗಲೇ ಫೈಜರ್ ಮತ್ತು ಅದರ ಜರ್ಮನ್ ಸಹಭಾಗಿ ಬಯೋಎನ್‌ಟೆಕ್ ಸಂಸ್ಥೆಗಳು ಲಸಿಕೆಯ ತುರ್ತುಬಳಕೆಗೆ ಡಿಸೆಂಬರ್‌ನಿಂದಲೇ ಅನುಮತಿ ನೀಡುವಂತೆ ಮನವಿ ಮಾಡಿವೆ. ಅದರ ಬೆನ್ನಲ್ಲೇ ಮಾಡೆರ್ನಾ ಸಂಸ್ಥೆ ಕೂಡ ತುರ್ತು ಬಳಕೆಯ ಅನುಮತಿಗೆ ಕೋರಿದೆ.

ಕೊರೊನಾ ವೈರಸ್ ಪರಿಸ್ಥಿತಿ ಚರ್ಚೆ: ಡಿ. 4ರಂದು ಪ್ರಧಾನಿ ಮೋದಿ ಸರ್ವಪಕ್ಷ ಸಭೆ ಕೊರೊನಾ ವೈರಸ್ ಪರಿಸ್ಥಿತಿ ಚರ್ಚೆ: ಡಿ. 4ರಂದು ಪ್ರಧಾನಿ ಮೋದಿ ಸರ್ವಪಕ್ಷ ಸಭೆ

ಅಟ್ಲಾಂಟಿಕ್ ಪ್ರದೇಶಗಳಲ್ಲಿ ಬ್ರಿಟನ್ ಔಷಧ ನಿರ್ವಾಹಕರು ಫೈಜರ್ ಲಸಿಕೆ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಯ ಲಸಿಕೆಯ ಮನವಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಜತೆಗೂಡಿ ಮಾಡೆರ್ನಾ ಲಸಿಕೆ ತಯಾರಿಸಿದೆ. ಕಳೆದ ವಾರಾಂತ್ಯದಲ್ಲಿ ಅದರ ಅಂತಿಮ ಪರೀಕ್ಷೆಯ ವರದಿ ಬಂದಿದ್ದು, ಶೇ 94ಕ್ಕೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

 Moderna Requests To Allow Emergency Use Of Its Covid1-19 Vaccine

ಅಮೆರಿಕಾದಲ್ಲಿ 45 ನಿಮಿಷ ವಿಮಾನ ಹಾರಾಟ ವಿಳಂಬಕ್ಕೆ ಕಾರಣ ಮಾಸ್ಕ್! ಅಮೆರಿಕಾದಲ್ಲಿ 45 ನಿಮಿಷ ವಿಮಾನ ಹಾರಾಟ ವಿಳಂಬಕ್ಕೆ ಕಾರಣ ಮಾಸ್ಕ್!

Recommended Video

ನಮ್ ದೇಶ ಕೊಳಕಾಗಿದ್ಯ Trump ಹೇಳ್ತಿರೋದು ಏನು? | Oneindia Kannada

ಇದುವರೆಗೂ ಅಧ್ಯಯನಕ್ಕೆ ಒಳಪಟ್ಟ 196 ಕೋವಿಡ್ ರೋಗಿಗಳಲ್ಲಿ 185 ರೋಗಿಗಳು ಲಸಿಕೆಯ ಮಾದರಿಯನ್ನಷ್ಟೇ ಪಡೆದಿದ್ದರೆ, 11 ಮಂದಿ ಮಾತ್ರ ನೈಜ ಲಸಿಕೆ ಪಡೆದುಕೊಂಡಿದ್ದರು. ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ 30 ಮಂದಿಯಲ್ಲಿ ಡಮ್ಮಿ ಲಸಿಕೆ ಪಡೆದುಕೊಂಡಿದ್ದ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಮಾಡೆರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಟಾಲ್ ಜ್ಯಾಕ್ಸ್ ಹೇಳಿದ್ದಾರೆ.

English summary
Moderna Inc. said it would ask America and European regulators to allow emergency use of its coronavirus vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X