• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ ಲಸಿಕೆ ಪ್ರಯೋಗದ ನೀಲನಕ್ಷೆ ಹಂಚಿಕೊಂಡ ಮಾಡೆರ್ನಾ, ಪಿಫೈಜರ್

|

ವಾಷಿಂಗ್ಟನ್,ಸೆಪ್ಟೆಂಬರ್ 18: ಅಮೆರಿಕದ ಬಯೋಟೆಕ್ ಫರ್ಮ್ ಮಾಡೆರ್ನಾ ಹಾಗೂ ಪಿ ಫೈಜರ್ ಎರಡೂ ಕೂಡ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿರುವ 9 ಕಂಪನಿಗಳಲ್ಲಿ ಒಂದಾಗಿದೆ. ಮಾಡೆರ್ನಾವು ಮೊದಲ ಬಾರಿಗೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಪ್ರಯೋಗದ ನೀಲನಕ್ಷೆಯನ್ನು ಹಂಚಿಕೊಂಡಿದೆ.

ಪಿಫೈಜರ್ ಕೂಡ ಅಮೆರಿಕದ ಕಂಪನಿಯಾಗಿದ್ದು, ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ. ಲಸಿಕೆಗಳು ಅಂತಿಮ ಹಂತಕ್ಕೆ ಬರುವ ಮುನ್ನವೇ ಒಪ್ಪಿಗೆ ದೊರೆತಿದೆ. ಹಾಗೆಯೇ ಸಾವಿರಾರು ಮಂದಿ ಮೇಲೆ ಪ್ರಯೋಗ ನಡೆಸಲಾಗಿದ್ದು, ಯಾವುದೇ ಅಡ್ಡ ಪರಿಣಾಮವಿಲ್ಲದಿರುವುದು ಖಾತ್ರಿಯಾಗಿದೆ.

2021ರ ಆರಂಭದಲ್ಲಿ ಭಾರತಕ್ಕೆ ಕೊರೊನಾ ಲಸಿಕೆ ಸಿಗುವ ನಿರೀಕ್ಷೆ: ಹರ್ಷವರ್ಧನ್

ಡೊನಾಲ್ಡ್ ಟ್ರಂಪ್ ಈ ಕುರಿತು ಮಾತನಾಡಿದ್ದು, ಅಕ್ಟೋಬರ್ ವೇಳೆಗೆ ಮೊದಲ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.ಈ ಕುರಿತು ಜೋ ಬಿಡನ್ ಕೂಡ ಪ್ರತಿಕ್ರಿಯೆ ನೀಡಿದ್ದು, ಡೊನಾಲ್ಡ್ ಟ್ರಂಪ್ ಅವರ ಭರವಸೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಾಡೆರ್ನಾವು 25,296 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಸುತ್ತಿದೆ. ಅದರಲ್ಲಿ 10025 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.ಮೊದಲ ಡೋಸ್ ನೀಡಿ 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತಿದೆ.

   Modi, I love this gift !! | Oneindia kannada

   ಆಸ್ಟ್ರಾಜೆನೆಕಾ ಲಸಿಕೆಯಿಂದ ಸಾಕಷ್ಟು ಮಂದಿ ರೋಗಿಗಳಿಗೆ ಬೆನ್ನಿನಲ್ಲಿ ಊತ ಕಾಣಿಸಿಕೊಂಡಿತ್ತು.

   English summary
   US biotech firm Moderna, one of nine companies in the late stages of clinical trials for a Covid-19 vaccine, became the first to publish the complete blueprints of its study following calls for greater transparency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X