ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಕರ್ಮಿ ಮೀರಾ ನಾಯರ್ ಪುತ್ರ ನ್ಯೂಯಾರ್ಕ್ ಅಸೆಂಬ್ಲಿಗೆ ಆಯ್ಕೆ

|
Google Oneindia Kannada News

ನ್ಯೂಯಾರ್ಕ್, ನ. 4: ಜನಪ್ರಿಯ, ವಿವಾದಿತ ಚಿತ್ರಕರ್ಮಿ ಮೀರಾ ನಾಯರ್ ಅವರ ಪುತ್ರ ಜೊಹ್ರಾನ್ ಮಾಮ್ದಾನಿ ಅವರು ನ್ಯೂಯಾರ್ಕ್ ಅಸೆಂಬ್ಲಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಸ್ಟೋರಿಯಾದ ನ್ಯೂಯಾರ್ಕ್ ನ 36ನೇ ಅಸೆಂಬ್ಲಿ ಡಿಸ್ಟ್ರಿಕ್ಟ್ ನಿಂದ ಜೊಹ್ರಾನ್ ಆಯ್ಕೆಯಾಗಿದ್ದಾರೆ.

ಉಗಾಂಡದ ಕಂಪಾಲಾದಲ್ಲಿ ಜನಿಸಿದ ಜೊಹ್ರಾನ್ ಅವರು 7 ವರ್ಷ ವಯಸ್ಸಿನವರಾಗಿದ್ದಾಗ ಅವರ ಕುಟುಂಬ ನ್ಯೂಯಾರ್ಕ್ ನಗರದಲ್ಲಿ ನೆಲೆಸಿದರು. ಬ್ರಾಂಕ್ಸ್ ಸೈನ್ಸ್ ಹೈಸ್ಕೂಲ್, ಬೌಡೊಯಿನ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡಿದ್ದು, ಸದ್ಯ ಹೌಸಿಂಗ್ ಕೌನ್ಸಲರ್ ಆಗಿ ವಲಸೆ ಕಾರ್ಮಿಕರು, ಕುಟುಂಬದವರ ನೋವಿಗೆ ಸ್ಪಂದಿಸುತ್ತಿದ್ದಾರೆ.

ಅಮೆರಿಕದ ಸೆನೆಟ್ ಗೆ ಸತತ ಮೂರನೇ ಬಾರಿಗೆ ಪ್ರಮೀಳಾ ಜಯಪಾಲ್ ಆಯ್ಕೆಅಮೆರಿಕದ ಸೆನೆಟ್ ಗೆ ಸತತ ಮೂರನೇ ಬಾರಿಗೆ ಪ್ರಮೀಳಾ ಜಯಪಾಲ್ ಆಯ್ಕೆ

ಜೊಹ್ರಾನ್ ಅಲ್ಲದೆ 38 ವರ್ಷದ ಜೆನ್ನಿಫರ್, ನ್ಯೂಯಾರ್ಕ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಕ್ಷಿಣ ಏಷ್ಯಾದ ವ್ಯಕ್ತಿ ಎನಿಸಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷಕ್ಕೆ ಸೇರಿದ 29 ವರ್ಷದ ಭಾರತೀಯ-ಅಮೆರಿಕನ್ ನೀರಜ್ ಅಂಟಾನಿ ಕೂಡಾ ಸೆನೆಟ್ ಗೆ ಆಯ್ಕೆಯಾಗಿರುವ ಮತ್ತೊಬ್ಬ ಏಷ್ಯಾ ಮೂಲದವರಾಗಿದ್ದಾರೆ.

Mira Nair son Zohran Mamdani wins NY Assembly seat

ನ್ಯೂಯಾರ್ಕ್ ಅಸೆಂಬ್ಲಿಗೆ ಆಯ್ಕೆಯಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿ, ಟ್ವೀಟ್ ಮಾಡಿರುವ ಜೊಹ್ರಾನ್, ಅಲ್ಬಾನಿಗೆ ಹೋಗುತ್ತಿದ್ದೇನೆ, ನಾವು ಗೆದ್ದಿದ್ದೇವೆ, ಬಡವರಿಗೆ ಸೂರು, ಸಮಾಜವಾದಿ ನೆಲೆಯಲ್ಲಿ ನ್ಯೂಯಾರ್ಕ್ ನಗರ ರೂಪಿಸಬೇಕಿದೆ. ಇದು ನನ್ನೊಬ್ಬನಿಂದ ಸಾಧ್ಯವಿಲ್ಲ. ಸಮಾಜವಾದ ಗೆಲ್ಲಬೇಕಾದರೆ, ಸಾಮೂಹಿಕ ಚಳವಳಿ ಅಗತ್ಯ, ಬಹುವರ್ಣೀಯ ಜನ ಸಮುದಾಯದ ಪರಿಶ್ರಮದಿಂದ ಹೊಸತನ್ನು ಸಾಧಿಸಬಹುದು, ಬನ್ನಿ ಸೇರಿಕೊಳ್ಳಿ ಎಂದು ಕರೆ ನೀಡಿದ್ದಾರೆ.

English summary
Filmmaker Mira Nair's son Zohran Mamdani made history as he became one of the first South Asians to win a seat in the New York state assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X