ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ದೇಶಕ್ಕೆ ಟ್ರಂಪ್ ಅಧ್ಯಕ್ಷರಾಗಿದ್ದೇ ಪ್ರಮಾದ: ಮಿಷೆಲ್ ಒಬಾಮಾ ವಾಗ್ದಾಳಿ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 18: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರಿಗೆ ಮತ ಹಾಕಿ. ಏಕೆಂದರೆ ನಮ್ಮ ಜೀವನ ಅವರನ್ನು ಅವಲಂಬಿಸಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಷೆಲ್ ಒಬಾಮಾ ಹೇಳಿದ್ದಾರೆ.

ಸೋಮವಾರ ರಾತ್ರಿ ನಡೆದ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಟ್ರಂಪ್ ಅವರ ವಿಭಜನೆಯ ರಾಜಕೀಯವನ್ನು ತಿರಸ್ಕರಿಸುವಂತೆ ಮತದಾರರಿಗೆ ಮನವಿ ಮಾಡಿದರು.

ಕಮಲಾ ಹ್ಯಾರಿಸ್‌ಗೆ ಶುಭಕೋರಿ ತಮಿಳುನಾಡಿನಲ್ಲಿ ಪೋಸ್ಟರ್ ಕಮಲಾ ಹ್ಯಾರಿಸ್‌ಗೆ ಶುಭಕೋರಿ ತಮಿಳುನಾಡಿನಲ್ಲಿ ಪೋಸ್ಟರ್

ಡೊನಾಲ್ಡ್ ಟ್ರಂಪ್ ನಮ್ಮ ದೇಶಕ್ಕೆ ಅಧ್ಯಕ್ಷರಾಗಿರುವುದು ದೊಡ್ಡ ಪ್ರಮಾದ. ಅವರು ತಾನು ಕೆಲಸ ಮಾಡಬಲ್ಲೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಸಮಯ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಿರೀಕ್ಷೆಗಳನ್ನು ತಲುಪಲು ಈ ಸಂದರ್ಭದಲ್ಲಿ ಅವರಿಂದ ಸಾಧ್ಯವಿಲ್ಲ ಎಂದು ಟೀಕಿಸಿದರು.

ಭಾರತೀಯರ ಮತ ಸೆಳೆಯಲು ಟ್ರಂಪ್ ಮಾಸ್ಟರ್ ಪ್ಲ್ಯಾನ್..!ಭಾರತೀಯರ ಮತ ಸೆಳೆಯಲು ಟ್ರಂಪ್ ಮಾಸ್ಟರ್ ಪ್ಲ್ಯಾನ್..!

 Michelle Obama Slam Donals Trump Said, Wrong President For Our Country

ದೇಶದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ನೀವು ಭಾವಿಸದೆ ಹೋದರೆ, ನಂಬಿ, ಅವರು ಹಾಗೆ ಮಾಡುತ್ತಾರೆ. ಈ ಪರಿಸ್ಥಿತಿಯಲ್ಲಿ ನಾವು ಸಂಕಷ್ಟ ಎದುರಿಸುತ್ತಿದ್ದೇವೆ ಎಂದ ಅವರು, ಬಿಡೆನ್ ಒಬ್ಬ ಶಿಸ್ತಿನ ಮನುಷ್ಯ. ನಮ್ಮ ದೇಶದ ಈಗಿನ ಸಂಕಷ್ಟವನ್ನು ನಿವಾರಿಸಲು ಮತ್ತು ಆರ್ಥಿಕತೆಯ ಪತನದಿಂದ ರಕ್ಷಿಸಲು ಹಾಗೂ ದೇಶವನ್ನು ಮುನ್ನಡೆಲು ಬಿಡೆನ್ ಸೂಕ್ತ ವ್ಯಕ್ತಿ ಎಂದರು.

ಅಮೆರಿಕದ ಅಂಚೆ ಸೇವೆಯಲ್ಲಿ ಬದಲಾವಣೆ ತರಲು ಟ್ರಂಪ್ ಆಡಳಿತ ಪ್ರಯತ್ನ ನಡೆಸಿದೆ. ಇದರಿಂದಾಗಿ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿನ ಮತದಾನ ಪ್ರಕ್ರಿಯೆಯಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂದು ಮಿಷೆಲ್ ಹೇಳಿದರು.

ಈಗಿನ ಬಿಕ್ಕಟ್ಟನ್ನು ನಾವು ಅಂತ್ಯಗೊಳಿಸುವ ಯಾವುದೇ ಭರವಸೆ ಹೊಂದಿದ್ದರೆ, ನಮ್ಮ ಜೀವನ ಜೋ ಬಿಡೆನ್ ಅವರನ್ನು ಅವಲಂಬಿಸಿದೆ ಎನ್ನುವಂತೆ ಅವರಿಗೆ ಮತ ಚಲಾಯಿಸಬೇಕಿದೆ ಎಂದರು.

ಮೊದಲ ದಿನದ ಸಮಾವೇಶದಲ್ಲಿ ಡೆಮಾಕ್ರಟಿಕ್ ಪಕ್ಷದ ಅನೇಕ ಸಂಸದರು ಮಾತನಾಡಿದರು. ಕ್ರಿಸ್ಟನ್ ಉರ್ಕ್ವಿಜಾ, ಬರ್ನಿ ಸ್ಯಾಂಡರ್ಸ್, ಜಾನ್ ಕ್ಯಾಸಿಚ್ ಮುಂತಾದವರು ಜೋ ಬಿಡೆನ್ ಪರ ಮಾತನಾಡಿದರು.

ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶವು ಅಧ್ಯಕ್ಷೀಯ ಅಭ್ಯರ್ಥಿಗಳು ನೇರವಾಗಿ ಮತದಾರರೊಂದಿಗೆ ಸಂಪರ್ಕಿಸುವ ಅವರೊಂದಿಗೆ ಮಾತನಾಡುವ ವೇದಿಕೆ. ಸಾಮಾನ್ಯವಾಗಿ ಈ ಸಮಾವೇಶಗಳು ಜನರ ಸಮ್ಮುಖದಲ್ಲಿ ನಡೆಯುತ್ತಿದ್ದವು. ಆದರೆ ಕೊರೊನಾ ವೈರಸ್ ಭೀತಿಯ ಕಾರಣದಿಂದ ಈ ಬಾರಿಯ ಸಮಾವೇಶ ವರ್ಚ್ಯುವಲ್ ಆಗಿ ನಡೆಯುತ್ತಿದೆ.

ಕರ್ನಾಟಕದಲ್ಲಿ ಕೊವಿಡ್ ನೆಗೆಟಿವ್ ಬಂದವರಲ್ಲೂ ಮತ್ತೆ ಸೋಂಕಿನ ಲಕ್ಷಣ

English summary
US Election 2020: Barack Obama's wife slammed American President and said, Donald Trump is a wrong president for our country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X