ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಿಚೆಲ್ ಒಬಾಮಾ ಸಂದೇಶ

|
Google Oneindia Kannada News

ವಾಶಿಂಗ್ಟನ್, ನವೆಂಬರ್.08: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರಿಗೆ ಯುಎಸ್ಎ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಚೆಲ್ ಒಬಾಮಾ ಶುಭಾಷಯ ಕೋರಿದ್ದಾರೆ.

"ನನ್ನ ಸ್ನೇಹಿತ ಜೋ ಬಿಡನ್ ಮತ್ತು ನಮ್ಮ ಮೊದಲ ಕಪ್ಪು ಮತ್ತು ಭಾರತೀಯ-ಅಮೆರಿಕನ್ ಮಹಿಳಾ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರ ಗೆಲುವು ನನಗೆ ರೋಮಾಂಚನವನ್ನು ಉಂಟು ಮಾಡಿದೆ. ಅವರು ಶ್ವೇತಭವನದಲ್ಲಿ ಘನತೆ, ಸಾಮರ್ಥ್ಯ ಮತ್ತು ಹೃದಯವನ್ನು ಪುನಃಸ್ಥಾಪಿಸಲಿದ್ದಾರೆ" ಎಂದು ಮಿಚೆಲ್ ಒಬಾಮಾ ಟ್ವೀಟ್ ಮಾಡಿದ್ದಾರೆ.

ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರುಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

ಡೊನಾಲ್ಡ್ ಟ್ರಂಪ್ ಅವರ ಮತಗಳನ್ನು ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬಿಡೆನ್ ತಮ್ಮದಾಗಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕಾಗಿತ್ತು. ಜನರನ್ನು ತಲುಪುವಲ್ಲಿ ಡೆಮಾಕ್ರೆಟಿಕ್ ಪಕ್ಷವು ಉತ್ತಮ ಕೆಲಸಗಳನ್ನು ಮಾಡಿದೆ ಎಂದು ಮಿಚೆಲ್ ಟ್ವಿಟರ್ ನಲ್ಲಿ ಹೇಳಿದ್ದಾರೆ.

Michelle Obama Congratulates To US President Joe Biden And Vice_President Kamala Harris

ಟ್ರಂಪ್ ರನ್ನು ಟ್ವಿಟರ್ ನಲ್ಲಿ ತಿವಿದ ಮಿಚೆಲ್:

"ಸುಳ್ಳು, ದ್ವೇಷ, ಅವ್ಯವಸ್ಥೆ ಮತ್ತು ವಿಭಜನೆಯನ್ನು ಬೆಂಬಲಿಸುವ ಸಂದರ್ಭಗಳಲ್ಲೂ ಕೂಡಾ ಲಕ್ಷಾಂತರ ಜನರು ಯಥಾಸ್ಥಿತಿಗೆ ಮತ ಚಲಾಯಿಸಿದ್ದಾರೆ ಎಂದು ನಾವು ನೆನಪಿನಲ್ಲಿಟ್ಟುಕೊಳ್ಳೋಣ" ಎಂದು ಬರೆದುಕೊಳ್ಳುವ ಮೂಲಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಗೆ ತಿವಿದಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಅಂಥ ಜನರ ಮನಃಪರಿವರ್ತನೆ ಹಾಗೂ ಎಲ್ಲರನ್ನೂ ಒಂದುಗೂಡಿಸುವ ನಿಟ್ಟಿನಲ್ಲಿ ನಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ" ಎಂದು ಮಿಚೆಲ್ ಒಬಾಮಾ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಭುತ್ವದ ಪ್ರಮುಖ ಭಾಗವನ್ನು ನಾವು ನಿರ್ಲಕ್ಷ್ಯ ಧೋರಣೆಯಿಂದ ನೋಡುವಂತಿಲ್ಲ. ದೇಶದಲ್ಲಿ ಪ್ರತಿಯೊಂದು ಮತಗಳು ಎಣಿಕೆಯಾಗಬೇಕು. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಒಂದು ದೇಶವಾಗಿ ನಾವು ಮತ ಚಲಾಯಿಸಲು ಪ್ರಕ್ರಿಯೆ ಸುಲಭ ಮತ್ತು ಸರಳ ವಿಧಾನದಲ್ಲಿರಬೇಕು ಎಂದು ಮಿಚೆಲ್ ಒಬಾಮಾ ತಿಳಿಸಿದ್ದಾರೆ.

ಶನಿವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಅಧಿಕೃತವಾಗಿ ಆಯ್ಕೆಯಾದರು. ಭಾರತೀಯ ಮೂಲದ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

English summary
Michelle Obama Congratulates To US President Joe Biden And Vice-President Kamala Harris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X