ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ ಮಾಫಿಯಾ ದೊರೆ ಎಲ್ ಚಾಪೊಗೆ 30 ವರ್ಷ ಜೈಲು

|
Google Oneindia Kannada News

ನ್ಯೂಯಾರ್ಕ್, ಜುಲೈ 18: ಜಗತ್ತಿನ ಕುಖ್ಯಾತ ಡ್ರಗ್ ಮಾಫಿಯಾ ಕಿಂಗ್ ಜಾಕ್ವಿನ್ ಗುಜ್ಮಾನ್ ಲಾರಾ ಅಲಿಯಾಸ್ ಎಲ್ ಚಾಪೊಗೆ(62) ಅಮೆರಿಕ ನ್ಯಾಯಾಲವು 30 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಡ್ರಗ್ ಮಾಫಿಯಾದ ದೊರೆ ಎಂದು ಕರೆಯಲ್ಪಡುತ್ತಿದ್ದ ಪ್ಯಾಬ್ಲೊ ಎಸ್ಕೋಬನನ್ನು 1993ರಲ್ಲಿ ಎನ್‌ಕೌಂಟರ್ ಮಾಡಿದ ಬಳಿಕ ಜಾಗತಿಕ ಡ್ರಗ್ ಮಾಫಿಯಾವನ್ನು ಚಾಪೊ ಆಳುತ್ತಿದ್ದ ಎನ್ನಲಾಗಿದೆ.

ಈತನ ಮೇಲೆ ಸಾಕಷ್ಟು ಚಿತ್ರಗಳು ಕೂಡ ಆಗಿವೆ.ಅಮೆರಿಕಕ್ಕೆ ನೂರಾರು ಟನ್ ಕೊಕೈನ್ ಸೇರಿ ಇತರೆ ಮಾದಕ ದ್ರವ್ಯಗಳನ್ನು ರವಾನಿಸಿರುವ ಆರೋಪವು ಚಾಪೊ ಮೇಲಿದೆ.

Mexican drug mafia king El Chapo gets life in prison
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ನ್ಯಾಯಾಲಯ ಚಾಪೊಗೆ 30 ವರ್ಷಗಳ ಜೀವಾವಧಿ ಜೈಲುಶಿಕ್ಷೆ ವಿಧಿಸಿದೆ. ಹಾಗೆಯೇ ಡ್ರಗ್ ಸಾಗಾಣಿಕೆ ಜೊತೆಗೆ ಅಕ್ರಮ ಹಣ ರವಾನೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲೂ ಈತ ಅಪರಾಧಿ ಎಂದು ಘೋಷಿಸಲಾಗಿದೆ.

ಆದರೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರ ವಿರುದ್ಧವೇ ಕೂಗಾಡಿರುವ ಚಾಪೊ ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಬ್ರಿಯಾನ್ ಕೊಗ್ಯಾನ್ ಕಡು ಭ್ರಷ್ಟ ನ್ಯಾಯಾಧೀಶ ಎಂದು ಅಲವತ್ತುಕೊಂಡಿದ್ದಾನೆ.

ಸಿನೊಲಲಾದ ಹಾಲಿ ಉಪಾಧ್ಯಕ್ಷನೂ ಆಗಿರುವ ಚಾಪೊನನ್ನು 2017ರಲ್ಲಿ ಮೆಕ್ಸಿಕೊದಿಂದ ಅಮೆರಿಕಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಮೆರಿಕವಲ್ಲದೆ ವಿಶ್ವದ ಸಾಕಷ್ಟು ರಾಷ್ಟ್ರಗಳಲ್ಲಿ ಈತನ ವಿರುದ್ಧ ಡ್ರಗ್ಸ್ ಮಾಫಿಯಾ ಪ್ರಕರಣಗಳು ದಾಖಲಾಗಿವೆ.

ಅಮೆರಿಕ ಒಂದರಲ್ಲೇ ಡ್ರಗ್ಸ್ ಮಾರಾಟದಿಂದ 12.7 ಬಿಲಿಯನ್ ಡಾಲರ್ ಆದಾಯವನ್ನು ಚಾಪೊ ಗಳಿಸಿದ್ದ ಎನ್ನಲಾಗಿದೆ.

English summary
Mexican drug mafia king El Chapo gets life in prison,Guzmán, 62, was found guilty of 10 charges, including drug trafficking and money laundering, by a federal court in New York in February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X