• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಚ್ಛೇದನ ಬಳಿಕ ಶ್ರೀಮಂತ ಉದ್ಯಮಿ ಪತ್ನಿಗೆ ಸಿಗಲಿದೆ 15,000 ಕೋಟಿ ರು

|

ವಾಷಿಂಗ್ಟನ್, ಮೇ 7: ವಿಶ್ವ ಕಂಡ ಶ್ರೇಷ್ಠ ಸಾಫ್ಟ್ ವೇರ್ ತಂತ್ರಜ್ಞ, ಉದ್ಯಮಿ, ಮಹಾದಾನಿ ಬಿಲ್ ಗೇಟ್ಸ್ ದಾಂಪತ್ಯ ಮುರಿದು ಬಿದ್ದಿದೆ. ಸುಮಾರು 27 ವರ್ಷಗಳ ಬಳಿಕ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮಿಲಿಂದಾ ಅವರು ವಿಚ್ಛೇದನ ಆಯ್ಕೆ ಮಾಡಿಕೊಂಡಿದ್ದಾರೆ. ವಿಚ್ಛೇದನದ ಬಳಿಕ ಮಿಲಿಂದಾ ಅವರಿಗೆ ವಿಚ್ಛೇದನ ಮೊತ್ತ ಎಷ್ಟು ಸಿಗಲಿದೆ ಎಂಬುದರ ಚರ್ಚೆ ನಡೆಯುತ್ತಿದೆ.

ಜೆಫ್ ಬೆಜೋಸ್ ದಂಪತಿ ನಂತರ ಬಿಲ್ ಗೇಟ್ಸ್ ದಂಪತಿ ವಿಚ್ಛೇದನ ಭಾರಿ ಮೊತ್ತದಾಗಿರಲಿದೆ. ಗೇಟ್ಸ್ ದಂಪತಿ ಕೋಕಾ ಕೋಲಾ, ಎಫ್ಇಎಂಎಸ್ಎ, ಗ್ರುಪೊ ಟೆಲೆವಿಸಾ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಹೂಡಿಕೆ ಹೊಂದಿದ್ದಾರೆ.

ಮಾಗಡಿ-ಕನಕಪುರದಲ್ಲಿ ಆಮ್ಲಜನಕ ಘಟಕ ನಿರ್ಮಾಣಕ್ಕೆ ಮುಂದಾದ KRIDL ಮಾಗಡಿ-ಕನಕಪುರದಲ್ಲಿ ಆಮ್ಲಜನಕ ಘಟಕ ನಿರ್ಮಾಣಕ್ಕೆ ಮುಂದಾದ KRIDL

ಕೆನಡಾದ ನ್ಯಾಷನಲ್ ರೈಲ್ವೆ ಕೊ ಹಾಗೂ ಆಟೋನೇಷನ್ ಐಎನ್ಸಿಯಲ್ಲೂ ಪಾಲು ಹೊಂದಿದ್ದಾರೆ. ಒಟ್ಟಾರೆ, 15,000 ಕೋಟಿ ರುಗೂ ಅಧಿಕ ಪಾಲು ಮಿಲಿಂದಾಗೆ ಸಿಗುವ ಸಾಧ್ಯತೆಯಿದೆ.

ಆರೋಗ್ಯ, ಶಿಕ್ಷಣ, ಹವಾಮಾನ ವೈಪರಿತ್ಯ, ಲಿಂಗ ಸಮಾನತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಲ್ಲಿ ತನಕ ಬಿಲ್ ಹಾಗೂ ಮಿಲಿಂದಾ ಸುಮಾರು 36 ಬಿಲಿಯನ್ ಡಾಲರ್‌ಗಳಿಗೂ ಅಧಿಕ ಮೊತ್ತವನ್ನು ದಾನ ಮಾಡಿದ್ದಾರೆ. ಬಿಲ್ ಗೇಟ್ಸ್ ಅವರ ಆಸ್ತಿ ಮೌಲ್ಯ 11 ಲಕ್ಷ ಕೋಟಿ ರುಗೂ ಅಧಿಕವಿದೆ.

67 ವರ್ಷ ವಯಸ್ಸಿನ ಬಿಲ್ ಹಾಗೂ 56 ವರ್ಷ ವಯಸ್ಸಿನ ಮಿಲಿಂದಾ ನ್ಯೂಯಾರ್ಕ್ ಟ್ರೇಡ್ ಶೋನಲ್ಲಿ ಮೊದಲಿಗೆ ಭೇಟಿಯಾಗಿದ್ದರು. 1987ರ ವೇಳೆಗೆ ಮಿಲಿಂದಾ-ಬಿಲ್ ಡೇಟಿಂಗ್‌ನಲ್ಲಿದ್ದರು ನಂತರ ಹವಾಯಿಯಲ್ಲಿ 1994ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ವಾಷಿಂಗ್ಟನ್‌ನ ಮೆದಿನಾದಲ್ಲಿ 66,000 ಚದರಡಿ ವಿಸ್ತೀರ್ಣದ ದೊಡ್ಡ ಬಂಗೆಲೆಯನ್ನು ದಂಪತಿ ಹೊಂದಿದ್ದಾರೆ.

English summary
Melinda Gates likely to get Rs. 15,000 Cr Immediately After The Divorce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X