ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಲಾನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

|
Google Oneindia Kannada News

ವಾಷಿಂಗ್ಟನ್, ಜುಲೈ 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಅವರ ಮರದ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಸ್ಲೋವೇನಿಯಾದಲ್ಲಿ ನಡೆದಿದೆ.

Recommended Video

WHO ಹಾಡಿ ಹೊಗಳಿದ ಚೀನಾ | Oneindia Kannada

ಮರದಿಂದ ತಯಾರಿಸಿದ ಶಿಲ್ಪ ಅದಾಗಿದ್ದು, ಮೆಲಾನಿಯಾ ಅವರ ಹುಟ್ಟೂರಾದ ಸ್ಲೋವೇನಿಯಾದಲ್ಲಿ ಅಮರಿಕದ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಮೆ ಸುಟ್ಟುಹಾಕಲಾಗಿದೆ ಎಂದು ಕಲಾವಿದರೊಬ್ಬರು ಮಾಹಿತಿ ನೀಡಿದ್ದಾರೆ.

ಜನಾಂಗೀಯ ಹತ್ಯೆ ವಿರುದ್ಧದ ಪ್ರತಿಭಟನೆ: ನೈಕಿ ಶೋ ರೂಮ್ ಲೂಟಿಜನಾಂಗೀಯ ಹತ್ಯೆ ವಿರುದ್ಧದ ಪ್ರತಿಭಟನೆ: ನೈಕಿ ಶೋ ರೂಮ್ ಲೂಟಿ

ಘಟನೆ ಜುಲೈ 5 ರಂದು ಸಂಭವಿಸಿದ್ದು, ಪೊಲೀಸರು ಹೇಳಿದ ತಕ್ಷಣವೇ ವಿರೂಪವಾಗಿರುವ ಶಿಲ್ಪವನ್ನು ತೆಗೆದುಹಾಕಲಾಗಿದೆ ಎಂದು ಕಲಾವಿದ ಬ್ರಾಡ್ ಡೌನಿ ತಿಳಿಸಿದ್ದಾರೆ.ಅಮೆರಿಕದ ರಾಜಕೀಯ ಪರಿಸ್ಥಿತಿಗೂ ಇದಕ್ಕೂ ಸಂಬಂಧವಿದ್ದಂತೆ ತೋರುತ್ತಿದೆ, ಹೀಗೆ ಯಾಕೆ ಮಾಡಿದರು ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಈ ಕುರಿತು ಮೆಲಾನಿಯಾ ಟ್ರಂಪ್ ಅವರನ್ನು ಕೇಳಿದಾಗ ತಕ್ಷಣ ಪ್ರತಿಕ್ರಿಯೆ ಬಂದಿರಲಿಲ್ಲ.

Melania Trump Statue Set On Fire At Her Hometown

ಇತ್ತೀಚಿನ ದಿನಗಳ ಜನಾಂಗೀಯ ಹೋರಾಟಗಳು ಅಮೆರಿಕದಲ್ಲಿ ನಡೆಯುತ್ತಿದೆ. ಹೀಗಾಗಿ ಅಲ್ಲಿರುವ ಸ್ಮಾರಕಗಳನ್ನು ಧ್ವಂಸಗೊಳಿಸುವ ಕಾರ್ಯವೂ ನಡೆಯುತ್ತಿದೆ. ಆದರೆ ಯಾರ ಮೇಲೂ ಕ್ರಮ ಕೈಗೊಳ್ಳುತ್ತಿಲ್ಲ.

ಈ ಕುರಿತು ಡೌನಿ ಪೊಲೀಸರಿಗೆ ದೂರು ನೀಡಿದ್ದು ಸೆಪ್ಟೆಂಬರ್‌ನಲ್ಲಿ ನಡೆಯುವ ತಮ್ಮ ಕಲಾ ಪ್ರದರ್ಶನಕ್ಕೂ ಮುನ್ನ ಇವೆಲ್ಲವೂ ಸರಿಯಾಗಬೇಕು ಎಂದು ಕೇಳಿಕೊಂಡಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ, ಕಾರ್ಯ ವಿಧಾನಗಳ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸುವಂತಿಲ್ಲ.

ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸುವಾಗ ಮೆಲಾನಿಯಾ ಟ್ರಂಪ್ ಧರಿಸಿದ್ದ ಉಡುಪಿನ ರೀತಿಯಲ್ಲಿಯೇ ಶಿಲ್ಪವನ್ನು ಸಿದ್ಧಪಡಿಸಲಾಗಿತ್ತು.
ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಮರದ ಪ್ರತಿಮೆಯನ್ನು ಕೂಡ ಸುಟ್ಟುಹಾಕಲಾಗಿತ್ತು.

English summary
A wooden sculpture of US first lady Melania Trump was torched near her hometown of Sevnica, Slovenia, on the night of July Fourth, as Americans celebrated US Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X