• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಚ್ಛೇದನದ ಬಳಿಕ ಮೆಲಾನಿಯಾ ಟ್ರಂಪ್ ಪಡೆಯುವ ಪರಿಹಾರವೆಷ್ಟು ಗೊತ್ತೇ?

|

ವಾಷಿಂಗ್ಟನ್, ನವೆಂಬರ್ 13: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲುವುದ ಖಚಿತವಾಗುತ್ತಿದ್ದಂತೆಯೇ ಅವರ ಪತ್ನಿ ಮೆಲಾನಿಯಾ ಟ್ರಂಪ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಜನವರಿಯಲ್ಲಿ ಅಧ್ಯಕ್ಷಸ್ಥಾನದಿಂದ ಕೆಳಗಿಳಿಯಲಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಒಂದೆಡೆ ಅಧ್ಯಕ್ಷಗಿರಿ ಕೈತಪ್ಪಿದರೆ ಇನ್ನೊಂದೆಡೆ ಪತ್ನಿಯಿಂದ ದೂರವಾಗುವ ಸ್ಥಿತಿಯೂ ಎದುರಾಗಿದೆ. ಟ್ರಂಪ್ ಜತೆಗಿನ ವೈವಾಹಿಕ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿರುವ ಮೆಲಾನಿಯಾ ಅವರಿಗೆ ವಿಚ್ಛೇದನಾ ಪರಿಹಾರವಾಗಿ ದೊಡ್ಡಮೊತ್ತದ ಪರಿಹಾರ ಸಿಗಲಿದೆ.

ಚುನಾವಣಾ ಗದ್ದಲಗಳು ಮುಗಿದು ವಾಷಿಂಗ್ಟನ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಮರು ಭೇಟಿಯಾಗುವ ಮೊದಲು ಮೆಲಾನಿಯಾ ವಿವಾಹಪೂರ್ವ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಅಮೆರಿಕ ಚುನಾವಣೆ: ಸೋತ ಟ್ರಂಪ್‌ಗೆ ಪತ್ನಿ ವಿಚ್ಛೇದನ!

ಮೆಲನಾನಿಯಾ ಮತ್ತು ಡೊನಾಲ್ಡ್ ಅವರದ್ದು 'ವ್ಯಾವಹಾರಿಕ ವಿವಾಹ' ಎಂದು ಹೇಳಲಾಗಿದೆ. ತಮ್ಮ ವ್ಯಾವಹಾರಿಕ ಮದುವೆಯ ಭಾಗವಾಗಿ ಅವರಿಬ್ಬರೂ ಶ್ವೇತಭವನದಲ್ಲಿ ಪ್ರತ್ಯೇಕ ಬೆಡ್‌ರೂಂಗಳಲ್ಲಿ ಇರುತ್ತಿದ್ದರು ಎಂದು ಟ್ರಂಪ್ ಅವರ ಮಾಜಿ ಸಹಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಮುಂದೆ ಓದಿ.

ವಿಚ್ಛೇದನಕ್ಕೆ ಕಾಯುತ್ತಿದ್ದ ಮೆಲಾನಿಯಾ

ವಿಚ್ಛೇದನಕ್ಕೆ ಕಾಯುತ್ತಿದ್ದ ಮೆಲಾನಿಯಾ

ಮದುವೆಯ ಬಳಿಕ ನಡೆದ ಒಪ್ಪಂದದಲ್ಲಿ ಮಗ ಬ್ಯಾರೋನ್‌ಗೆ ಟ್ರಂಪ್ ಅವರ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು ಎಂದು ಮೆಲಾನಿಯಾ ವ್ಯಾವಹಾರಿಕ ಮಾತುಕತೆ ನಡೆಸಿದ್ದರು ಎಂದು ಸ್ಟೀಫನಿ ವೋಕಾಫ್ ತಿಳಿಸಿದ್ದಾರೆ. ಮತ್ತೊಬ್ಬ ಸಹಾಯಕ ಒಮರೊಸಾ ನ್ಯೂಮ್ಯಾನ್ ಪ್ರಕಾರ, ಇಬ್ಬರ 15 ವರ್ಷಗಳ ಮದುವೆ ಮುರಿದುಬಿದ್ದಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನ ಕಳೆದುಕೊಂಡು ಕಚೇರಿಯಿಂದ ಹೊರಬಂದ ಬಳಿಕ ವಿಚ್ಛೇದನ ನೀಡುವುದಕ್ಕಾಗಿ ಮೆಲಾನಿಯಾ ಪ್ರತಿ ನಿಮಿಷವನ್ನೂ ಲೆಕ್ಕಹಾಕುತ್ತಿದ್ದರು.

50 ಮಿಲಿಯನ್ ಡಾಲರ್ ಪರಿಹಾರ

50 ಮಿಲಿಯನ್ ಡಾಲರ್ ಪರಿಹಾರ

ಒಪ್ಪಂದಕ್ಕೆ ಅನುಗುಣವಾಗಿ ಮೆಲಾನಿಯಾ ಅವರು 50 ಮಿಲಿಯನ್ ಡಾಲರ್‌ನಷ್ಟು ಭಾರಿ ಮೊತ್ತದ ಪರಿಹಾರ ಪಡೆದುಕೊಳ್ಳಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಈ ಮೊತ್ತ ಟ್ರಂಪ್ ಅವರ ಮೊದ ಇಬ್ಬರು ಪತ್ನಿಯರಾದ ಇವಾನಾ ಮತ್ತು ಮರ್ಲಾ ಮಾಪ್ಲೆಸ್ ಅವರು ಪಡೆದ ಪರಿಹಾರಕ್ಕಿಂತಲೂ ಅಧಿಕ.

ಅಮೆರಿಕ ಚುನಾವಣೆ: ಸೋಲೊಪ್ಪಿಕೊಳ್ಳುವಂತೆ ಟ್ರಂಪ್‌ಗೆ ಮೆಲಾನಿಯಾ ಸಲಹೆ

ಪಾರ್ಟಿಯಲ್ಲಿ ಮೆಲಾನಿಯಾ ಭೇಟಿ

ಪಾರ್ಟಿಯಲ್ಲಿ ಮೆಲಾನಿಯಾ ಭೇಟಿ

ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಅವರು 1998ರಲ್ಲಿ ಪಾರ್ಟಿಯೊಂದಲ್ಲಿ ಮೊದಲು ಭೇಟಿಯಾಗಿದ್ದರು. ಆಗ ಮೆಲಾನಿಯಾ ನಾವುಸ್ ಫ್ಯಾಷನ್ ಮಾಡೆಲ್ ಆಗಿದ್ದರು. ಅಲ್ಲಿ ಟ್ರಂಪ್ ಅವರ ಫೋನ್ ನಂಬರ್ ಪಡೆದುಕೊಂಡರು. ಮರು ವರ್ಷ ಜೋಡಿಯಾದರು. 2005ರಲ್ಲಿ ಮದುವೆಯಾಗಿ 2006ರಲ್ಲಿ ಬಾರೊನ್ ಟ್ರಂಪ್ ಜನಿಸಿದ. ಟ್ರಂಪ್‌ಗೆ ಈಗ ಮೂವರು ಹೆಂಡಿರಿಂದ ಐವರು ಮಕ್ಕಳು ಮತ್ತು ಹತ್ತು ಮೊಮ್ಮಕ್ಕಳಿದ್ದಾರೆ.

ಹೋಗಿ ಸೋಲೊಪ್ಪಿಕೊಳ್ಳಲಿ: ಡೊನಾಲ್ಡ್ ಟ್ರಂಪ್‌ಗೆ ಮಾಜಿ ಪತ್ನಿ ಸಲಹೆ

ಮೊದಲ ಮದುವೆ

ಮೊದಲ ಮದುವೆ

ಟ್ರಂಪ್ ಮೊದಲು ಮದುವೆಯಾಗಿದ್ದು 1977ರಲ್ಲಿ. ಜೆಕ್-ಅಮೆರಿಕನ್ ಉದ್ಯಮಿ, ಮಾಧ್ಯಮ ವ್ಯಕ್ತಿ, ಫ್ಯಾಷನ್ ಡಿಸೈನರ್ ಮತ್ತು ಮಾಡೆಲ್ ಆಗಿದ್ದ ಇವಾನಾ ಅವರನ್ನು. ಈ ಜೋಡಿಗೆ ಡೊನಾಲ್ಡ್ ಟ್ರಂಪ್ ಜೂನಿಯರ್, ಇವಾಂಕಾ ಟ್ರಂಪ್ ಮತ್ತು ಎರಿಕ್ ಟ್ರಂಪ್ ಎಂಬ ಮೂವರು ಮಕ್ಕಳು. 1992ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು.

ಮಾಪ್ಲೆಸ್ ಜತೆ ಎರಡನೆಯ ಮದುವೆ

ಮಾಪ್ಲೆಸ್ ಜತೆ ಎರಡನೆಯ ಮದುವೆ

1993ರಲ್ಲಿ ಟ್ರಂಪ್ ಅವರು ನಟಿ, ನಿರ್ಮಾಪಕಿ ಮತ್ತು ರೂಪದರ್ಶಿ ಮರ್ಲಾ ಮಾಪ್ಲೆಸ್ ಅವರನ್ನು ಮದುವೆಯಾದರು. ಟಿಫಾನಿ ಎಂಬ ಮಗು ಜನಿಸಿತು. 1997ರ ಮೇ ತಿಂಗಳಲ್ಲಿ ಇಬ್ಬರೂ ಬೇರ್ಪಟ್ಟರು. ವಿಚ್ಛೇದನವಾಗಿದ್ದು 1999ರ ಜೂನ್ 8ರಂದು.

ಇವಾನಾ, ಮಾಪ್ಲೆಸ್ ಪರಿಹಾರ

ಇವಾನಾ, ಮಾಪ್ಲೆಸ್ ಪರಿಹಾರ

ವರದಿಗಳ ಪ್ರಕಾರ ಎಲ್ಲ ಪತ್ನಿಯರೊಂದಿಗೂ ಟ್ರಂಪ್ ವಿವಾಹಪೂರ್ವ ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಅದರ ಪ್ರಕಾರ ಇವಾನಾ ಟ್ರಂಪ್ ವಿಚ್ಛೇದನದ ಬಳಿಕ 14 ಮಿಲಿಯನ್ ಡಾಲರ್ ಪರಿಹಾರ ಪಡೆದಿದ್ದರು. ಜತೆಗೆ ಕನ್ನೆಕ್ಟಿಕಟ್‌ನಲ್ಲಿ ಮಹಲ್ಲು ಮತ್ತು ಟ್ರಂಪ್ ಪ್ಲಾಜಾದಲ್ಲಿ ಅಪಾರ್ಟ್‌ಮೆಂಟ್ ಕೂಡ ಪಡೆದುಕೊಂಡಿದ್ದರು. ಮಾಪ್ಲೆಸ್ ಅವರ ವಿಚ್ಛೇದನದ ನಂತರ 2 ಮಿಲಿಯನ್ ಡಾಲರ್ ಹಣ ಪಡೆದಿದ್ದರು.

English summary
Melania Trump could get $50 million as settlement if she divorce Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X