ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹುಲ್ ಚೋಕ್ಸಿಯನ್ನು ಕರೆದೊಯ್ಯಿರಿ, ನಮ್ಮ ಅಭ್ಯಂತರವಿಲ್ಲ: ಆಂಟಿಗುವಾ ಪ್ರಧಾನಿ

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 26: ಉದ್ದೇಶಪೂರ್ವಕ ಸುಸ್ಥಿದಾರ ಮೆಹೂಲ್ ಚೋಕ್ಸಿಗೆ ಗಂಡಾಂತರ ಎದುರಾಗಿದ್ದು, ಆತ ಅಡಗಿರುವ ದೇಶದ ಪ್ರಧಾನಿಯೇ 'ಆತನಿಂದ ದೇಶಕ್ಕೆ ಉಪಯೋಗವಿಲ್ಲ' ಎಂದು ಹೇಳಿದ್ದಾರೆ.

'ಮೆಹೂಲ್ ಚೋಕ್ಸಿ ಒಬ್ಬ ವಂಚಕ ಎಂಬ ಮಾಹಿತಿ ನಮಗೆ ದೊರೆತಿದೆ. ಆತನಿಂದ ನಮ್ಮ ದೇಶಕ್ಕೆ ಯಾವುದೇ ಹೆಚ್ಚಿನ ಉಪಯೋಗವಿಲ್ಲ, ಆತನನ್ನು ಹಸ್ತಾಂತರಿಸಲು ಮನವಿ ಬರುತ್ತಿದ್ದಂತೆ ಆತನನ್ನು ಹೊರಗೆ ಕಳುಹಿಸಲು ನಾವು ಸಿದ್ಧವಿದ್ದೇವೆ' ಎಂದು ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಸ್ಟೋನ್ ಬ್ರೌನ್ ಹೇಳಿದ್ದಾರೆ.

ಪಿಎನ್ ಬಿ ಹಗರಣ: ನೀರವ್ ಮೋದಿ ಸೋದರ ನೆಹಾಲ್ ವಿರುದ್ಧ ಅರೆಸ್ಟ್ ವಾರೆಂಟ್ಪಿಎನ್ ಬಿ ಹಗರಣ: ನೀರವ್ ಮೋದಿ ಸೋದರ ನೆಹಾಲ್ ವಿರುದ್ಧ ಅರೆಸ್ಟ್ ವಾರೆಂಟ್

'ಭಾರತದ ಅಧಿಕಾರಿಗಳು ನಮ್ಮ ದೇಶಕ್ಕೆ ಬಂದು ತನಿಖೆ, ವಿಚಾರಣೆ ನಡೆಸಲೂ ಸಹ ನಮ್ಮ ಅಡ್ಡಿಯಿಲ್ಲ' ಎಂದು ಅವರು ಹೇಳಿದ್ದಾರೆ. ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಸ್ಟೋನ್ ಬ್ರೌನ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಬ್ಲೂಮ್‌ಬರ್ಗ್‌ ಗ್ಲೋಬಲ್ ಬ್ಯುಸಿನೆಸ್ ಫೋರಂನಲ್ಲಿ ಭಾರತದ ಮಾಧ್ಯಮಗಳ ಜೊತೆ ಮಾತನಾಡಿದರು.

Mehul Choksi Is A Croock: Antigua Barbuda Prime Minister

ಮೆಹೂಲ್ ಚೋಕ್ಸಿಯು ಆಂಟಿಗುವಾದಲ್ಲಿ ಅಡಗಿದ್ದಾನೆ ಎಂಬುದು ಭಾರತ ಸರ್ಕಾರಕ್ಕೆ ಇರುವ ಖಚಿತ ಮಾಹಿತಿಯಾಗಿದೆ. ಆದರೆ ಸರ್ಕಾರವು ಆತನ ಹಸ್ತಾಂತರಕ್ಕೆ ಇನ್ನೂ ಮನವಿ ಮಾಡಿಲ್ಲ.

ಮೆಹುಲ್ ಚೋಕ್ಸಿಗೆ ಸೇರಿದ ದುಬೈ ಆಸ್ತಿ, ಬೆಂಜ್ ಕಾರು ವಶಕ್ಕೆಮೆಹುಲ್ ಚೋಕ್ಸಿಗೆ ಸೇರಿದ ದುಬೈ ಆಸ್ತಿ, ಬೆಂಜ್ ಕಾರು ವಶಕ್ಕೆ

ಪಿಎನ್‌ಬಿ ಹಗರಣದ ಪ್ರಮುಖ ರುವಾರಿಗಳಲ್ಲಿ ಒಬ್ಬನಾದ ಮೆಹೂಲ್ ಚೋಕ್ಸಿ ಸರ್ಕಾರಕ್ಕೆ ಮತ್ತು ಬ್ಯಾಂಕುಗಳಿಗೆ ಸಾವಿರಾರು ಕೋಟಿ ಹಣ ಬಾಕಿ ಇದ್ದು, ಬಾಕಿ ಪಾವತಿ ಮಾಡದೆ ಆಂಟಿಗುವಾಕ್ಕೆ ಪರಾರಿ ಆಗಿದ್ದಾನೆ.

English summary
Antigua and Barbuda prime minister Gastone Browne said that, Mehul Choksi is a croock We will ready to deported him from our country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X