• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಟ್ವಿಟ್ಟರ್ ಖಾತೆ ಬಂದ್ ಮಾಡಿಸಿದ್ದು ವಕೀಲೆ ವಿಜಯ ಗದ್ದೆ

|

ವಾಷಿಂಗ್ಟನ್, ಜನವರಿ 11: ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯರಾಗಿದ್ದರು. ಆದರೆ, ಕಳೆದ ಶುಕ್ರವಾರ ಟ್ರಂಪ್ ಖಾತೆಯನ್ನು ಶಾಶ್ವತವಾಗಿ ಬಂದ್ ಮಾಡಲಾಗಿದೆ. ಟ್ವಿಟ್ಟರ್ ಸಂಸ್ಥೆ ಈ ಈ ರೀತಿ ನಿರ್ಧಾರ ಕೈಗೊಂಡು, ಟ್ರಂಪ್ ಖಾತೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವಂತೆ ಮಾಡಿದ್ದು, ಟ್ವಿಟ್ಟರ್ ಸಂಸ್ಥೆ ಪರ ವಕೀಲೆ ವಿಜಯಾ ಗದ್ದೆ.

ಭಾರತ ಮೂಲದ ಅಮೆರಿಕನ್ 45 ವರ್ಷ ವಯಸ್ಸಿನ ವಕೀಲೆ ವಿಜಯಾ ಗದ್ದೆ ಅವರು, ಟ್ರಂಪ್ ಅವರ ಪ್ರಚೋದಿತ ಭಾಷಣ, ಸಂದೇಶಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ಕ್ಯಾಪಿಟಲ್ ಹಿಲ್ಸ್ ಮುತ್ತಿಗೆ, ಪ್ರತಿಭಟನೆ ಸಂದರ್ಭದಲ್ಲಿ ಟ್ರಂಪ್ ಟ್ವೀಟ್ ಮೂಲಕ ತಮ್ಮ ಬೆಂಬಲಿಗರಿಗೆ ಉತ್ತೇಜನ ನೀಡಿದ್ದಲ್ಲದೆ, ಪ್ರಚೋದನಕಾರಿ ವಿಡಿಯೋ ಸಂದೇಶಗಳನ್ನು ಹಾಕಿಕೊಂಡಿದ್ದರು. ಟ್ರಂಪ್ ನಡೆಯಿಂದ ಟ್ವಿಟ್ಟರ್ ಸುರಕ್ಷತೆ, ದೇಶದ ಭದ್ರತೆಗೆ ತೊಂದರೆಯಾಗಲಿದೆ ಎಂದು ವಾದಿಸಿದ ವಿಜಯಾ, ಖಾತೆ ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತ

 ವಿಜಯ ಗದ್ದೆ ಟ್ವೀಟ್ ವಿವರಿಸಿದ್ದರು

ವಿಜಯ ಗದ್ದೆ ಟ್ವೀಟ್ ವಿವರಿಸಿದ್ದರು

"@realDonaldTrump ಅವರ ಖಾತೆಯನ್ನು ಟ್ವಿಟರ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ನಾವು ನಮ್ಮ ನೀತಿ ಜಾರಿ ವಿಶ್ಲೇಷಣೆಯನ್ನು ಸಹ ಪ್ರಕಟಿಸಿದ್ದೇವೆ- ನೀವು ನಮ್ಮ ನಿರ್ಧಾರದ ಬಗ್ಗೆ ವಿವರಣೆ ನೀಡಿದ್ದೇವೆ, ನೀವು ಓದಬಹುದು " ಎಂದು ಟ್ವಿಟ್ಟರ್ ಸಂಸ್ಥೆಯ ಕಾನೂನು, ನೀತಿ ಮತ್ತು ನಂಬಿಕೆ-ಸುರಕ್ಷತೆ ವಿಷಯಗಳ ವಿಭಾಗದ ಮುಖ್ಯಸ್ಥೆ ವಿಜಯ ಗದ್ದೆ ಟ್ವೀಟ್ ಮಾಡಿದ್ದಾರೆ.

 ವಿಜಯಾ ಗದ್ದೆ ವಿವರ:

ವಿಜಯಾ ಗದ್ದೆ ವಿವರ:

ಭಾರತದಲ್ಲಿ ಜನಿಸಿದ ವಿಜಯಾ ಗದ್ದೆ ಅವರ ತಂದೆ ಕೆಮಿಕಲ್ ಇಂಜಿನಿಯರ್ ಆಗಿದ್ದು, ಕಾರ್ಯ ನಿಮಿತ್ತ ಟೆಕ್ಸಾಸ್‌ಗೆ ಶಿಫ್ಟ್ ಆದರು. ಹೀಗಾಗಿ, ವಿಜಯಾ ಅವರ ಬಾಲ್ಯದ ದಿನಗಳು ಟೆಕ್ಸಾಸ್ ನಲ್ಲಿ ಕಳೆದರು.ಅಲ್ಲಿಂದ ವಿಜಯಾ ಅವರ ಕುಟುಂಬ ಈಸ್ಟ್ ಕೋಸ್ಟ್ ಕಡೆ ವರ್ಗವಾಗಿದ್ದರಿದ ವಿಜಯಾ ಅವರು ನ್ಯೂಜೆರ್ಸಿಯಲ್ಲಿ ಹೈಸ್ಕೂಲ್ ಮುಗಿಸಿದರು.

 ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಪದವೀಧರೆ

ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಪದವೀಧರೆ

ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಪದವೀಧರರಾದ ವಿಜಯಾ ಅವರು ಬೇ ಏರಿಯಾದಲ್ಲಿ ಕೆಲ ಸ್ಟಾರ್ ಅಪ್ ಕಂಪನಿಗಳಲ್ಲಿ ವೃತ್ತಿ ಆರಂಭಿಸಿ 10 ವರ್ಷಗಳ ಅನುಭವ ಹೊಂದಿದ ಬಳಿಕ 2011ರಲ್ಲಿ ಸೋಷಿಯಲ್-ಮೀಡಿಯಾ(ಟ್ವಿಟ್ಟರ್) ಕಂಪನಿಗೆ ಸೇರಿಕೊಂಡರು.

 ಜನಪ್ರಿಯ ಕಾರ್ಪೊರೇಟ್ ವಕೀಲೆ

ಜನಪ್ರಿಯ ಕಾರ್ಪೊರೇಟ್ ವಕೀಲೆ

ಕಾರ್ಪೊರೇಟ್ ವಕೀಲೆಯಾಗಿ ಗದ್ದೆ, ಕಂಪನಿಯಲ್ಲಿ ನೀತಿಗಳನ್ನು ರೂಪಿಸುವ ಕಾರ್ಯ ನಿರ್ವಹಿಸುತ್ತಾರೆ, ಜಾಗತಿಕ ರಾಜಕಾರಣದಲ್ಲಿ ಕಳೆದ ಒಂದು ದಶಕದಲ್ಲಿ ಟ್ವಿಟರ್ ಪಾತ್ರವು ಹೆಚ್ಚಾಗಲು ಹಾಗೂ ಬಳಕೆದಾರರ ಗೌಪ್ಯತೆ, ಸುರಕ್ಷತೆಗೆ ಗದ್ದೆ ಕಾರಣರು ಎನ್ನಬಹುದು.

ಫಾರ್ಚೂನ್‌ ವರದಿ ಪ್ರಕಾರ, ಟ್ವಿಟರ್ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಕ್ ಡೊರ್ಸೆ ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದಾಗ ವಿಜಯಾ ಅವರು ಕಚೇರಿಯಲ್ಲಿದ್ದರು. 2018 ರ ನವೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟ್ಟರ್ ಸಂಸ್ಥೆ ನಿಯೋಗ ಭೇಟಿಯಾದಾಗ ಡೊರ್ಸಿಯೊಂದಿಗೆ ವಿಜಯಾ ಸಹ ಬಂದಿದ್ದರು.

Angels ಎಂಬ ಸಂಸ್ಥೆಯ ಸಹ ಸ್ಥಾಪಕಿ

ಹಲವು ಜನಪ್ರಿಯ ಮ್ಯಾಗಜೀನ್ ಗಳು ವಿಜಯಾ ಗದ್ದೆ ಅವರನ್ನು ಪ್ರಭಾವಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಎಂದು ಬಣ್ಣಿಸಿ ಸರಣಿ ಲೇಖನಗಳನ್ನು ಬರೆದಿವೆ.

ಟ್ವಿಟ್ಟರ್ ಅಲ್ಲದೆ Angels ಎಂಬ ಸಂಸ್ಥೆಯ ಸಹ ಸ್ಥಾಪಕಿಯಾಗಿರುವ ವಿಜಯಾ ಅವರು ಸಂಸ್ಥೆಗಳಿಂದ ಮಹಿಳಾ ಉದ್ಯೋಗಿಗಳಿಗೆ ಸಿಗಬೇಕಿರುವ ಪರಿಹಾರ ಮೊತ್ತ ತಾರತಮ್ಯದ ಬಗ್ಗೆ ಹೋರಾಟ ನಡೆಸಿದ್ದಾರೆ.

English summary
A 45-year-old immigrant from India and Twitter's top lawyer, Vijaya Gadde, spearheaded the decision to permanently suspend US President Donald Trump's Twitter accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X