ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಿಂದ ಎಂಡಿಎಚ್ ಸಾಂಬಾರ್ ಮಸಾಲ ವಾಪಸ್ಸಾಗಿದ್ದೇಕೆ?

|
Google Oneindia Kannada News

ಬೆಂಗಳೂರು, ಸೆ.12: ಭಾರತೀಯ ಅತ್ಯಂತ ಪುರಾತನ ಹಾಗೂ ಪ್ರತಿಷ್ಠಿತ ಮಸಾಲ ಪುಡಿಗಳ ಬ್ರ್ಯಾಂಡ್ ಎಂಡಿಎಚ್ ಗೆ ಹಿನ್ನಡೆಯಾಗಿದೆ. ಕ್ಯಾಲಿಫೋರ್ನಿಯಾಕ್ಕೆ ರಫ್ತಾಗಿದ್ದ ಎಂಡಿಎಚ್ ಸಾಂಬಾರ್ ಪುಡಿಯನ್ನು ಗುಣಮಟ್ಟ ಸ್ತರವನ್ನು ಮುಟ್ಟದ ಕಾರಣ ವಾಪಸ್ ಕಳಿಸಲಾಗಿದೆ.

ಉತ್ತರ ಕ್ಯಾಲಿಫೋರ್ನಿಯಾದ ರೀಟೇಲ್ ಮಳಿಗೆ ಹೌಸ್ ಆಫ್ ಸ್ಪೈಸಸ್(ಇಂಡಿಯಾ) ಎಂಡಿಎಚ್ ಸಾಂಬಾರ್ ಪುಡಿಯನ್ನು ಪರೀಕ್ಷಿಸಿದ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಷ್ಟ್ರೇಷನ್ (ಎಫ್ ಡಿಎ) ಅದರಲ್ಲಿ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾವನ್ನು ಪತ್ತೆ ಹಚ್ಚಿದೆ.

MDH sambar masala recalled in US for Salmonella bacteria

ಆರ್ ಪ್ಯೂರ್ ಆಗ್ರೋ ಸ್ಪೆಷಾಲಿಟಿಸ್ ಕಂಪನಿ ತಯಾರಿಸಿರುವ ಈ ಸಾಂಬಾರ್ ಪುಡಿಯಲ್ಲಿ ಯಾವುದೇ ಆಕ್ಷೇಪಾರ್ಹ ಅಂಶ ಇಲ್ಲ ಎಂದು ಕಂಪನಿ ಸ್ಪಷ್ಟನೆ ನೀಡಿದೆ. ನೂರು ವರ್ಷಕ್ಕೂ ಅಧಿಕ ವರ್ಷಗಳ ಕಾಲ ಅನುಭವವುಳ್ಳ ಎಂಡಿಎಚ್ ಸಂಸ್ಥೆಯ ಸಾಂಬಾರ್ ಪುಡಿ ಜನಪ್ರಿಯ ಮಸಾಲ ಪುಡಿಯಾಗಿದೆ.

'ನನ್ನ ಸಾವಿನ ಸುದ್ದಿ ಕೇಳಿ ಇನ್ನಷ್ಟು 'ತರುಣ' ನಾದೆ' : ಮಹಾಶಯ್'ನನ್ನ ಸಾವಿನ ಸುದ್ದಿ ಕೇಳಿ ಇನ್ನಷ್ಟು 'ತರುಣ' ನಾದೆ' : ಮಹಾಶಯ್

ಸಾಲ್ಮೊನೆಲ್ಲಾ(Salmonella) ಬ್ಯಾಕ್ಟೀರಿಯಾದಿಂದ ಫುಡ್ ಪಾಯಿಸನ್ ಆಗಿ 4 ರಿಂದ 7 ದಿನ ಆಹಾರ ಸೇವಿಸಿದವರನ್ನು ಕಾಡುತ್ತದೆ. ಪಚನ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಚಿಕಿತ್ಸೆ ಇಲ್ಲದೆ ಸರಿ ಹೋಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪಾಕಿಸ್ತಾನದ ಸಿಯೋಲ್ ಕೋಟ್ ನಲ್ಲಿ 1919ರಲ್ಲಿ ಮಹಾಶಯ್ ಚುನ್ನಿ ಲಾಲ್ ಗುಲಾಟಿ ಆರಂಭಿಸಿದ ಎಂಡಿಎಚ್ ಸಂಸ್ಥೆ ಸರಿ ಸುಮಾರು 62ಕ್ಕೂ ಅಧಿಕ ಮಸಾಲೆ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಹೊಂದಿದ್ದು, 924 ಕೋಟಿ ರು ಗೂ ಅಧಿಕ ಆದಾಯ ಹೊಂದಿದೆ.

ಹಲವು ವರ್ಷಗಳ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ

ಹಲವು ವರ್ಷಗಳ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ

ಪಾಕಿಸ್ತಾನದ ಸಿಯೋಲ್ ಕೋಟ್ ನಲ್ಲಿ 1919ರಲ್ಲಿ ಮಹಾಶಯ್ ಚುನ್ನಿ ಲಾಲ್ ಗುಲಾಟಿ ಆರಂಭಿಸಿದ ಎಂಡಿಎಚ್ ಸಂಸ್ಥೆ ಸರಿ ಸುಮಾರು 62ಕ್ಕೂ ಅಧಿಕ ಮಸಾಲೆ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಹೊಂದಿದ್ದು, 924 ಕೋಟಿ ರು ಗೂ ಅಧಿಕ ಆದಾಯ ಹೊಂದಿದೆ. ಸಾಲ್ಮೊನೆಲ್ಲಾ(Salmonella) ಬ್ಯಾಕ್ಟೀರಿಯಾದಿಂದ ಈಗ ಹಲವು ವರ್ಷಗಳ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ.

ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

ಮಹಾಶಯ್ 1959ರಿಂದ ಸಂಸ್ಥೆಯ ನೇತೃತ್ವ

ಮಹಾಶಯ್ 1959ರಿಂದ ಸಂಸ್ಥೆಯ ನೇತೃತ್ವ

ಪಾಕಿಸ್ತಾನದ ಸಿಯೋಲ್ ಕೋಟ್ ಮೂಲದ ಗುಲಾಟಿ ಕುಟುಂಬದ ಚುನ್ನಿಲಾಲ್ ಅವರು 1919ರಲ್ಲಿ ಸ್ಥಾಪಿಸಿದ ಮಹಾಶಿಯನ್ ಡಿ ಹಟ್ಟಿ(ಎಂಡಿಎಚ್) ಮಸಾಲ ಪುಡಿ ಉತ್ಪಾದನಾ ಸಂಸ್ಥೆಗೆ 1959ರಿಂದ ಮಹಾಶಯ್ ಧರ್ಮ್ ಪಾಲ್ ಗುಲಾಟಿ ಅವರು ಮುಖ್ಯಸ್ಥರಾಗಿದ್ದಾರೆ. FMCG ಕ್ಷೇತ್ರದಲ್ಲಿ ಧರ್ಮಪಾಲ್ ಅವರು ಅತ್ಯಂತ ಹೆಚ್ಚಿನ ಸಂಬಳ ಪಡೆಯುವ ಸಿಇಒ ಆಗಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಧರ್ಮಪಾಲ್ ಅವರು 21 ಕೋಟಿ ರು ಸಂಬಳ ಪಡೆದಿದ್ದರು.

150ಕ್ಕೂ ಅಧಿಕ ವಿವಿಧ ಶ್ರೇಣಿಗಳಲ್ಲಿ ಮಾರಾಟ

150ಕ್ಕೂ ಅಧಿಕ ವಿವಿಧ ಶ್ರೇಣಿಗಳಲ್ಲಿ ಮಾರಾಟ

Fast Moving consumer goods (FMCG) ಕ್ಷೇತ್ರದ ಸೇರಿರುವ ರೆಡಿಮೇಡ್ ಮಸಾಲ ಪುಡಿ ಉತ್ಪಾದನಾ ಸಂಸ್ಥೆಯನ್ನು ಮುನ್ನಡೆಸಿರುತ್ತಿರುವ ಧರ್ಮಪಾಲ್ ಅವರು ಕಲ 5ನೇ ತರಗತಿ ತನಕ ಮಾತ್ರ ಓದಿದ್ದಾರೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಎಂಡಿಎಚ್ ಸುಮಾರು 62ಕ್ಕೂ ಅಧಿಕ ಉತ್ಪನ್ನಗಳನ್ನು 150ಕ್ಕೂ ಅಧಿಕ ವಿವಿಧ ಶ್ರೇಣಿಗಳಲ್ಲಿ ಮಾರಾಟ ಮಾಡುತ್ತಿದೆ.

ಎಂಡಿಎಚ್ ಸಂಸ್ಥೆ ಮಾಲೀಕರ ಬಗ್ಗೆ ವೈರಲ್

ಎಂಡಿಎಚ್ ಸಂಸ್ಥೆ ಮಾಲೀಕರ ಬಗ್ಗೆ ವೈರಲ್

ಎಂಡಿಎಚ್ ಸಂಸ್ಥೆ ಮಾಲೀಕರಾದ ಮಹಾಶಯ್ ಧರ್ಮಪಾಲ್ ಗುಲಾಟಿ(96) ಅವರು ವಯೋಸಹಜ ಅನಾರೋಗ್ಯರಿಂದ ಶನಿವಾರ(ಅಕ್ಟೋಬರ್ 6, 2018) ರಾತ್ರಿ ನಿಧನರಾಗಿದ್ದಾರೆ ಎಂದು ಪ್ರಮುಖ ಸುದ್ದಿ ವಾಹಿನಿಗಳ ವೆಬ್ ನಲ್ಲಿ ಪ್ರಕಟವಾಗಿತ್ತು. ಆದರೆ, ನಂತರ ಈ ಬಗ್ಗೆ ಎಂಡಿಎಚ್ ಸಂಸ್ಥೆಯಿಂದ ಸ್ಪಷ್ಟನೆ ಹೊರ ಬಂದಿತು. ಧರ್ಮಪಾಲ್ ಅವರು ಆರೋಗ್ಯದಿಂದಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Some batches of a spice mix sold by a top Indian cooking brand were taken off the shelves in the United States for salmonella contamination, the U.S. Food and Drug Administration (FDA) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X