ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಗಾಂಜಾ ಫ್ರೀ..! ಆಫರ್ ಕೇಳಿ ಜನರಿಗೆ ಬಿಗ್ ಶಾಕ್..!

|
Google Oneindia Kannada News

ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಏನೆಲ್ಲಾ ಆಫರ್ ಕೊಡಬಹುದು ಹೇಳಿ..? ಹೆಚ್ಚೆಂದರೆ ಇದು ನಿಮ್ಮ ಜೀವದ ಅಳಿವು, ಉಳಿವಿನ ಪ್ರಶ್ನೆ. ಕೊರೊನಾ ಮುಕ್ತಗೊಳಿಸಲು ನೀವು ಲಸಿಕೆ ಹಾಕಿಸಿಕೊಳ್ಳಿ ಎಂಬ ಸಲಹೆ ನೀಡಬಹುದು. ಆದರೆ ಇಲ್ಲೊಬ್ಬ ಭೂಪ ವ್ಯಾಕ್ಸಿನ್ ಹಾಕಿಸಿಕೊಳ್ಳುವವರಿಗೆ ಪ್ರೋತ್ಸಾಹ ನೀಡಲು 'ಗಾಂಜಾ' ವಿತರಣೆ ಮಾಡಿದ್ದಾನೆ.

ಅಮೆರಿಕದ ನ್ಯೂಯಾರ್ಕ್ ನಿವಾಸಿ, ಗಾಂಜಾ ಪರ ಹೋರಾಟಗಾರ ಟಾಡ್ ಹಿಂಡೆನ್ ಎಂಬಾತನೇ ಇಂತಹ ಆಫರ್ ನೀಡಿದ್ದು. ಅಂದಹಾಗೆ ಅಮೆರಿಕದಲ್ಲಿ ಕೊರೊನಾ ಎಲ್ಲೆ ಮೀರಿದ್ದು, ಈಗಾಗಲೇ ಅರ್ಧ ಮಿಲಿಯನ್‌ಗೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಹೀಗಾಗಿ ಅಲ್ಲಿನ ಸರ್ಕಾರ ಜನರಿಗೆ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ. ಆದರೆ ವ್ಯಾಕ್ಸಿನ್ ಪಡೆಯಲು ಯುವ ಸಮುದಾಯ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ವೈದ್ಯಕೀಯ ವಲಯದಿಂದ ಕೇಳಿಬರುತ್ತಿದೆ. ಹೀಗಾಗಿ ಅಮೆರಿಕದ ಗಾಂಜಾ ಪರ ಹೋರಾಟಗಾರ ಹಿಂಡೆನ್ ಮತ್ತು ಸಂಗಡಿಗರು ಕೊರೊನಾ ಲಸಿಕೆ ಪಡೆದವರಿಗೆ ಆಫರ್ ನೀಡಿದ್ದಾರೆ.

ಸುಮಾರು ಕಾಲು ಕೆ.ಜಿ. ಗಾಂಜಾ ಉಚಿತವಾಗಿ ಹಂಚಿದ್ದಾರೆ ಟಾಡ್ ಹಿಂಡೆನ್. ಇದರಿಂದ ವ್ಯಾಕ್ಸಿನ್ ಪಡೆಯುವವರ ಸಂಖ್ಯೆ ಹೆಚ್ಚಲಿದೆ ಎಂದು ಟಾಡ್ ಹಿಂಡೆನ್ ಅಭಿಪ್ರಾಯಪಟ್ಟಿದ್ದು, ಈ ಕೆಲಸದ ಬಗ್ಗೆ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

ಅಮೆರಿಕದಲ್ಲಿ ಗಾಂಜಾ ಲೀಗಲ್..!

ಅಮೆರಿಕದಲ್ಲಿ ಗಾಂಜಾ ಲೀಗಲ್..!

ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್‌ನಲ್ಲಿ ಗಾಂಜಾ ಬಳಸಲು ಅನುಮತಿ ಸಿಕ್ಕಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಗಾಂಜಾಗೆ ಲೀಗಲ್ ಸ್ಟೇಟಸ್ ಕೊಟ್ಟ ಮಸೂದೆ ನ್ಯೂಯಾರ್ಕ್‌ನ ಅಸೆಂಬ್ಲಿಯಲ್ಲಿ ಪಾಸ್ ಆಗಿತ್ತು. ಹೀಗಾಗಿಯೇ ಟಾಡ್ ಹಿಂಡೆನ್ & ಟೀಂ ಉಚಿತವಾಗಿ ಗಾಂಜಾ ಹಂಚುವ ಸಾಹಸ ಮಾಡಿದೆ. ಅಮೆರಿಕದ 50 ರಾಜ್ಯಗಳ ಪೈಕಿ ಈವರೆಗೂ 15 ರಾಜ್ಯಗಳಲ್ಲಿ ಗಾಂಜಾ ಲೀಗಲ್ ಆಗಿದೆ. ಇದನ್ನ ಬಿಟ್ಟರೆ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಔಷಧ ತಯಾರಿಕೆಗೆ ಬಳಸಬಹುದು. ಇತ್ತೀಚಿನ ದಿನದಲ್ಲಿ ಅಮೆರಿಕದ ಒಂದೊಂದೇ ರಾಜ್ಯಗಳು ಗಾಂಜಾ ಲೀಗಲ್ ಮಾಡುತ್ತಿವೆ.

ಔಷಧ ಕಂಪನಿಗಳು ಬಳಸುತ್ತಿವೆ

ಔಷಧ ಕಂಪನಿಗಳು ಬಳಸುತ್ತಿವೆ

ಈಗಾಗಲೇ ಅಮೆರಿಕದ ಹಲವು ಔಷಧ ತಯಾರಿಕಾ ಸಂಸ್ಥೆಗಳು ಗಾಂಜಾ ಗಿಡವನ್ನು ಮೆಡಿಸಿನ್ ತಯಾರಿಕೆಗೆ ಮೂಲ ಪದಾರ್ಥವಾಗಿ ಬಳಸುತ್ತಿವೆ. ಆದರೆ ಹಲವು ದಶಕಗಳ ಹಿಂದೆ ಬಹುತೇಕ ದೇಶಗಳು ಗಾಂಜಾ ಬ್ಯಾನ್ ಮಾಡಲು ಅಮೆರಿಕ ಕಂಪನಿಗಳ ಲಾಬಿ ಕಾರಣ ಎನ್ನಲಾಗಿತ್ತು. ಇಷ್ಟೆಲ್ಲದರ ನಡುವೆ ಅಮೆರಿಕದಲ್ಲೂ ಗಾಂಜಾ ಬಳಕೆ ಬಗ್ಗೆ ಒತ್ತಡಗಳು ಹೆಚ್ಚಾದವು. ಈ ಒತ್ತಡಗಳ ಪರಿಣಾಮ ಒಂದೊಂದೇ ರಾಜ್ಯಗಳು ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡವು. ಈಗ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಬಳಕೆಗೆ ಅನುಮತಿ ಸಿಕ್ಕಿದೆ.

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ ಬಹುಪಾಲು ದೇಶಗಳಲ್ಲಿ ಮರಿಜುನಾ ಈಗಲೂ ನಿಷೇಧಿತ ವಸ್ತು. ಆದರೆ 40ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಜಾ ಬೆಳೆಯುವುದಕ್ಕೆ ಹಾಗೂ ಬಳಸುವುದಕ್ಕೆ ಅನುಮತಿ ಇದೆ. ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಗಾಂಜಾ ಗಿಡಕ್ಕೆ ಲೀಗಲ್ ಪಟ್ಟವಿದೆ. ಹಾಗೇ ಅಮೆರಿಕದ ಹಲವು ರಾಜ್ಯಗಳಲ್ಲಿ ಔಷಧ ತಯಾರಿಕೆಗೆ ಗಾಂಜಾ ಬಳಸಲು ಅನುಮತಿ ಇದೆ. ಭಾರತದಲ್ಲಿ ಮಾತ್ರ ಗಾಂಜಾ ಈಗಲೂ ಬ್ಯಾನ್ ಆಗಿದೆ. ಹೀಗಾಗಿ ಆಯುರ್ವೇದ ತಜ್ಞರು ಕಾನೂನಾತ್ಮಕವಾಗಿ ಗಾಂಜಾ ಬಳಸಲು ಅನುಮತಿ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ.

ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

ಆಯುರ್ವೇದದಲ್ಲಿ ಗಾಂಜಾಗೆ ಮನ್ನಣೆ ಇದ್ದು, ಇದನ್ನು ನೋವು ನಿವಾರಕದಂತೆ ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ನೋವು ನಿವಾರಕವಾಗಿ ಮಾತ್ರವಲ್ಲ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೂ ಗಾಂಜಾ ರಾಮಬಾಣ ಎನ್ನಲಾಗುತ್ತೆ. ಹೀಗೆ ಸಾವಿರಾರು ವರ್ಷಗಳಿಂದಲೂ ಗಾಂಜಾ ಗಿಡ ಆಯುರ್ವೇದದಲ್ಲಿ ಬೆರೆತು ಹೋಗಿತ್ತು.

1961ರಲ್ಲೇ ಗಾಂಜಾ ಭಾರತದಲ್ಲಿ ಬ್ಯಾನ್ ಆಗುವಂತೆ ಮಾಡಲು ಲಾಬಿ ನಡೆದಿತ್ತು. ಅಮೆರಿಕ ಆಸೆ ಆಗ ಈಡೇರಲಿಲ್ಲ. ಆದರೆ 1985ರಲ್ಲಿ ಅಂದಿನ ರಾಜೀವ್ ಗಾಂಧಿ ಸರ್ಕಾರ ಅಮೆರಿಕ ಫಾರ್ಮಾ ಕಂಪನಿಗಳ ಒತ್ತಡಕ್ಕೆ ಮಣಿದು ಗಾಂಜಾ ಬ್ಯಾನ್ ಮಾಡಿತ್ತು ಎಂಬ ಆರೋಪವಿದೆ. ಆದರೂ ಭಾರತದಲ್ಲಿ ಕಳ್ಳದಾರಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಉದಾಹರಣೆಗೆ ಹಿಮಾಚಲ ಪ್ರದೇಶ ಒಂದರಲ್ಲೇ ಬರೋಬ್ಬರಿ 60 ಸಾವಿರ ಕೆ.ಜಿ ಗಾಂಜಾ ಬೆಳೆಯಲಾಗುತ್ತಿದೆ.
ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಮರಿಜುನಾ ಹಲವು ಔಷಧೀಯ ಗುಣ ಹೊಂದಿದೆ. ಇದರಲ್ಲಿನ ಕೆಲವು ರಾಸಾಯನಿಕ ವಸ್ತುಗಳು ದೇಹದಲ್ಲಿ ಒತ್ತಡ ಹಾಗೂ ನೋವು ಕಡಿಮೆ ಮಾಡುವ ಶಕ್ತಿ ಹೊಂದಿವೆ ಎಂಬುದು ಆಯುರ್ವೇದ ತಜ್ಞರ ಮಾತು. ಸಿಗರೇಟ್ ಹಾಗೂ ಆಲ್ಕೋಹಾಲ್‌ಗೆ ಹೋಲಿಕೆ ಮಾಡಿದರೆ ಗಾಂಜಾ ಗಿಡದಿಂದ ಆಗುವ ಅಪಾಯವೂ ತೀರಾ ಕಡಿಮೆ ಎಂಬುದು ಕೆಲ ಸಂಶೋಧನೆಗಳಿಂದ ಸಾಬೀತಾಗಿದೆ. ಆದರೂ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಏಕೆಂದರೆ ಗಾಂಜಾ ಬ್ಯಾನ್ ಆಗಿರೋದರಿಂದ ಹಲವು ಸಂಶೋಧನೆಗೂ ಅಡ್ಡಿಯಾಗಿದೆ.

English summary
American cannabis rights activist Todd & Team distributed Marijuana to create awareness about Corona Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X