ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ: ಶ್ವೇತಭವನ, ಟ್ರಂಪ್ ಟವರ್ ಸ್ಫೋಟಿಸಲು ಸಂಚು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 25: ಅಮೆರಿಕದ ಶ್ವೇತಭವನ, ಟ್ರಂಪ್ ಟವರ್ ಸ್ಫೋಟಿಸಲು ವ್ಯಕ್ತಿಯೊಬ್ಬ ಸಂಚು ರೂಪಿಸಿದ್ದು, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕ್ರಿಸ್ಟೋಫರ್ ಸೀನ್ ಮ್ಯಾಥ್ಯೂಸ್ ತಪ್ಪೊಪ್ಪಿಕೊಂಡಿದ್ದಾನೆ, ಈತ ತಾನು ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಉತ್ತೇಜನಗೊಂಡು ಈ ದಾಳಿಯ ಸಂಚು ರೂಪಿಸಿರುವುದಾಗಿ ಹೇಳಿಕೆ ನೀಡಿದ್ದಾನೆ.

ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೇ?: ಹೊಸ ಲೆಕ್ಕಾಚಾರ ಮುಂದಿಟ್ಟ ಟ್ರಂಪ್ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೇ?: ಹೊಸ ಲೆಕ್ಕಾಚಾರ ಮುಂದಿಟ್ಟ ಟ್ರಂಪ್

ಅಮೆರಿಕದ ಶ್ವೇತಭವನ, ಟ್ರಂಪ್ ಟವರ್ ಸೇರಿದಂತೆ ಹಲವು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಲು ಆತ ಸಂಚು ರೂಪಿಸಿದ್ದ.

Man Pleads Guilty In Plot To Attack White House, Trump Tower In Manhattan

ಮೇ 2019ರಿಂದಲೂ ಟೆಕ್ಸಾಸ್‌ನ ಜಯ್ಲಿಯನ್ ಕ್ರಿಸ್ಟೋಫರ್ ಮೊಲಿನಾ ಎಂಬ ವ್ಯಕ್ತಿಯೊಂದಿಗೆ ಸೇರಿ ಸಂಚು ರೂಪಿಸಿದ್ದ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಪರವಾಗಿ ದೇಶ ಮತ್ತು ವಿದೇಶಗಳಲ್ಲಿ ಬಾಂಬ್ ದಾಳಿ ನಡೆಸಲು ಬಾಂಬ್ ತಯಾರಿಕೆ ತರಬೇತಿಯನ್ನು ಕೂಡ ಈತ ಪಡೆದಿದ್ದ.

ಅಲ್ಲದೆ ಉಗ್ರಸಂಘಟನೆಗೆ ಸೇರಲು ವ್ಯಕ್ತಿಗಳನ್ನು ಉತ್ತೇಜಿಸುತ್ತಿದ್ದುದಾಗಿ ಆತ ಒಪ್ಪಿಕೊಂಡಿದ್ದಾನೆ.

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

ಸ್ಯಾನ್ ಆಂಟೊನಿಯೊ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕ್ರಿಸ್ಟೋಫರ್ , ಇಸ್ಲಾಮಿಕ್ ಸ್ಟೇಟ್‌ ಸಂಘಟನೆಗೆ ಭಯೋತ್ಪಾದಕ ಚಟುವಟಿಕೆಗೆ ಪೂರಕ ವಸ್ತುಗಳನ್ನು ಪೂರೈಕೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.

English summary
A South Carolina man has pleaded guilty to a terror charge for plotting to bomb or shoot up sites including the White House and Trump Tower in New York City in attacks inspired by the Islamic State group, federal authorities said Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X