ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ಸೇ ಸುಳ್ಳು ಎಂದು ಕೊವಿಡ್ ಪಾರ್ಟಿಗೆ ಹೋದ ವ್ಯಕ್ತಿ ಏನಾದ?

|
Google Oneindia Kannada News

ನ್ಯೂಯಾರ್ಕ್, ಜುಲೈ 13: ಕೊವಿಡ್ 19 ಸೋಂಕಿತರು ಆಯೋಜಿಸಿದ್ದ ಪಾರ್ಟಿಗೆ ಹೋಗಿ 30 ವರ್ಷದ ವ್ಯಕ್ತಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಕೊರೊನಾ ವೈರಸ್ ಸುಳ್ಳು, ಅಂತಹ ವೈರಸ್ಸೇ ಇಲ್ಲ, ಎಲ್ಲವೂ ಕಟ್ಟು ಕತೆ ಎಂದು ಹೇಳಿ, ಕೊವಿಡ್ ಪಾರ್ಟಿಗೆ ವ್ಯಕ್ತಿಯೊಬ್ಬ ಹೋಗಿದ್ದ.

Recommended Video

Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada

ಈಗಾಗಲೇ ಅಲಬಾಮಾದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಕೊವಿಡ್ ಪಾರ್ಟಿ ಸುದ್ದಿ ಮಾಸುವ ಮುನ್ನವೇ ಇನ್ನೊಂದು ಇಂತಹದ್ದೇ ಪಾರ್ಟಿ ಅಮೆರಿಕದಲ್ಲಿ ನಡೆದಿದೆ. ಇದು ಯುವ ಜನತೆಯ ಉಸಿರಿಗೇ ಕಂಟಕವಾದದ್ದು ಎಂದು ವೈದ್ಯರೇ ಹೇಳಿದ್ದಾರೆ. ವೈದ್ಯಕೀಯ ಅಧಿಕಾರಿ ಜೇನ್ ಮಾತನಾಡಿ, ಕೊರೊನಾ ವೈರಸ್ ಇರುವುದೇ ಸುಳ್ಳು ಎಂದು ಪಾರ್ಟಿಗೆ ಹೋಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಬೆಚ್ಚಿ ಬೀಳಿಸೋ ಸುದ್ದಿ: ಅಮೆರಿಕದಲ್ಲಿ ಕೊರೊನಾ ವೈರಸ್ ಹರಡಲೆಂದೇ ನಡೀತಿತ್ತು ಪಾರ್ಟಿಬೆಚ್ಚಿ ಬೀಳಿಸೋ ಸುದ್ದಿ: ಅಮೆರಿಕದಲ್ಲಿ ಕೊರೊನಾ ವೈರಸ್ ಹರಡಲೆಂದೇ ನಡೀತಿತ್ತು ಪಾರ್ಟಿ

ಅಮೆರಿಕದಲ್ಲಿ 1,35,000 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಓರ್ವ ಸೋಂಕಿತ ಆಸ್ಪತ್ರೆಗೆ ಬಂದಾಗ ಆತ ಕೊವಿಡ್ 19 ಪಾರ್ಟಿಗೆ ತೆರಳಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕೊವಿಡ್ 19 ಸೋಂಕಿತರು ಪಾರ್ಟಿಯನ್ನು ನಿಯೋಜಿಸಿ ಯಾರು ಕೊರೊನಾ ಸೋಂಕನ್ನು ಸೋಲಿಸುತ್ತಾರೆ ಎಂದು ಪರೀಕ್ಷಿಸಲಾಗಿತ್ತು. ಆದರೆ ಅಂತ್ಯಕಾಲದಲ್ಲಿ ನಾನು ತಪ್ಪು ಮಾಡಿಬಿಟ್ಟೆ ಎಂದು ನರ್ಸ್‌ ಒಬ್ಬರ ಬಳಿ ಹೇಳಿಕೊಂಡಿದ್ದರು.

Man Dies After Attending COVID-19 Party In America

ಈ ರೋಗವೇ ಸುಳ್ಳು ಎಂದು ಆತ ನಂಬಿದ್ದ, ಹಾಗೆಯೇ ವಯಸ್ಸು ಕೂಡ ಕಡಿಮೆ ಇದೆ ವೈರಸ್ ಆತನ ಬಳಿ ಸುಳಿಯುವುದೇ ಇಲ್ಲ ಎಂದುಕೊಂಡಿದ್ದ. ಆತ ಕೊರೊನಾ ಸೋಂಕಿನಿಂದ ಬಳಲುತ್ತಿರುವವನಂತೆ ಕಂಡು ಬಂದಿರಲಿಲ್ಲ.

ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದ್ದು, ಲ್ಯಾಬ್ ಪರೀಕ್ಷೆಯಲ್ಲಿಆತ ಕಾಣಿಸುವುದಕ್ಕಿಂತ ಸೋಂಕಿನ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿತ್ತು. ಇಡೀ ವಿಶ್ವದಲ್ಲೇ ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ, ಅತಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

English summary
A 30-year-old man from Texas died from the new coronavirus after attending a "COVID-19" party hosted by an infected person, a doctor has revealed, underlining the risk to younger people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X