ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ದುರಂತಕ್ಕೆ 5ಜಿ ನೆಟ್‌ವರ್ಕ್‌ ಕಾರಣವಾಗಬಹುದು: ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಜನವರಿ 18: ವಿಮಾನಗಳ ದುರಂತಕ್ಕೆ 5ಜಿ ನೆಟ್‌ವರ್ಕ್ ಕೂಡ ಕಾರಣವಾಗಬಹುದು ಎಂದು ಅಮೆರಿಕ ಏರ್‌ಲೈನ್ಸ್ ಕಂಪನಿ ಸಿಇಒಗಳು ಎಚ್ಚರಿಕೆ ನೀಡಿದ್ದಾರೆ.

ಈ ನೂತನ ವೈರ್‌ಲೆಸ್ 5ಜಿ ಸೇವೆಯು ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಯುಎಸ್ ಕಾರ್ಗೋ ಮತ್ತು ಪ್ಯಾಸೆಂಜರ್ ಏರ್‌ಕ್ರಾಫ್ಟ್ ಆಪರೇಟರ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಸೇರಿ 12 ನಗರಗಳಲ್ಲಿ ಮೊದಲಿಗೆ 5ಜಿ ಸೇವೆಬೆಂಗಳೂರು ಸೇರಿ 12 ನಗರಗಳಲ್ಲಿ ಮೊದಲಿಗೆ 5ಜಿ ಸೇವೆ

ಅಮೆರಿಕದ ಪ್ರಮುಖಏರ್‌ಲೈನ್ಸ್​ ಕಂಪನಿಗಳ ಪ್ರಕಾರ, ಹೊಸ ಸೇವೆಯು ಹೆಚ್ಚಿನ ಸಂಖ್ಯೆಯ ವೈಡ್ ಬಾಡಿ ಪ್ಲೇನ್‌ಗಳನ್ನು ನಿಷ್ಪ್ರಯೋಜಕವಾಗಿಸಬಹುದು ಎಂದು ಹೇಳುತ್ತಿವೆ.

Major U.S. Airlines Warn 5G Could Ground Some Planes, Wreak Havoc

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಹೇಳುವ ಪ್ರಕಾರ, ಇದು ಅಲ್ಟಿಮೀಟರ್‌ಗಳು ಮತ್ತು ಕಡಿಮೆ ಗೋಚರತೆಯ ಕಾರ್ಯಾಚರಣೆಗಳಂತಹ ಸೂಕ್ಷ್ಮ ವಿಮಾನ ಉಪಕರಣಗಳ ಮೇಲೂ ಪರಿಣಾಮ ಬೀರಬಹುದು. ಅಂತಹ ಸ್ಥಿತಿಯಲ್ಲಿ ವಿಮಾನವನ್ನು ನಿರ್ವಹಿಸುವುದು ಅಪಾಯಕಾರಿ ಎಂದು ಎಚ್ಚರಿಸುತ್ತಿದೆ.

ಅಮೆರಿಕನ್ ಕಂಪನಿ AT&T ಮತ್ತು ವೆರಿಝೋನ್ ಕಳೆದ ವರ್ಷ ಹರಾಜಿನಲ್ಲಿ $80 ಬಿಲಿಯನ್ ಬೆಟ್ಟಿಂಗ್ ಮಾಡುವ ಮೂಲಕ C-ಬ್ಯಾಂಡ್ ಸ್ಪೆಕ್ಟ್ರಮ್ ಬಿಡ್ ಅನ್ನು ಪಡೆದವು.
ಈಗ ಅವರು 5G ನೆಟ್‌ವರ್ಕ್‌ಗಾಗಿ ಟವರ್‌ಗಳನ್ನು ಸ್ಥಾಪಿಸಬೇಕಾಗಿದೆ.

ರನ್‌ವೇ ಸುತ್ತಲೂ 5ಜಿ ನೆಟ್‌ವರ್ಕ್‌ನ ಪರಿಣಾಮ ಕಂಡುಬಂದರೆ, ತಾಂತ್ರಿಕವಾಗಿ ದೊಡ್ಡ ವಿಮಾನಗಳಿಗೆ ತೊಂದರೆಯಾಗಲಿದೆ. ಹೀಗಾಗಿ ವಿಮಾನ ನಿಲ್ದಾಣದ ರನ್‌ವೇಯ ಸುಮಾರು 2 ಮೈಲಿಗಳಿಂದ (3.2 ಕಿ.ಮೀ) 5G ಟವರ್​ಗಳನ್ನು ಮುಕ್ತಗೊಳಿಸಬೇಕು ಎಂದು ಪ್ರಮುಖ ವಿಮಾನಯಾನ ಕಂಪನಿಗಳು ಹೇಳುತ್ತವೆ.

ನವೆಂಬರ್ ಆರಂಭದಲ್ಲಿ FAA ವಿಮಾನಗಳ ಮೇಲೆ 5G ಸಂಭಾವ್ಯ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿತು. ಇದರ ನಂತರ, ಅಧ್ಯಕ್ಷ ಜೋ ಬೈಡನ್ ಆಡಳಿತದ ಹಸ್ತಕ್ಷೇಪದ ನಂತರ C-ಬ್ಯಾಂಡ್ ಸ್ಪೆಕ್ಟ್ರಮ್ ಬಳಕೆಯನ್ನು ಜನವರಿ 5ರ ವರೆಗೆ ಮುಂದೂಡಲಾಯಿತು.

ಬಳಿಕ ಅದನ್ನು ಜನವರಿ 19ರ ವರೆಗೆ ವಿಸ್ತರಿಸಲಾಯಿತು. 50 ವಿಮಾನ ನಿಲ್ದಾಣಗಳಿಗೆ ತಾತ್ಕಾಲಿಕ ಬಫರ್ ವಲಯಗಳನ್ನು ರಚಿಸಲು ಸಹ ಒಪ್ಪಿಗೆ ನೀಡಲಾಗಿದೆ.

ಈಗ ಒಪ್ಪಂದದ ಪ್ರಕಾರ, AT&T ಮತ್ತು ವೆರಿಝೋನ್ ಬುಧವಾರದಿಂದ ಸೇವೆಯನ್ನು ಪ್ರಾರಂಭಿಸಲಿವೆ. ಆದ್ದರಿಂದ ಫೆಡರಲ್ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್ ಮತ್ತೆ ತಾಂತ್ರಿಕ ತೊಂದರೆಗಳು ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಪುನರುಚ್ಚರಿಸಿದೆ.

ಅಮೆರಿಕನ್ ಏರ್‌ಲೈನ್ಸ್, ಡೆಲ್ಟಾ ಏರ್ ಲೈನ್ಸ್, ಯುನೈಟೆಡ್ ಏರ್‌ಲೈನ್ಸ್‌ನ ಸಿಇಒಗಳು ಅಪಾಯದ ಕಾರಣದಿಂದಾಗಿ 1,100 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಬಹುದು.

ಇದು ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಬಹುದು. ಅವರು ಟಿಕೆಟ್‌ಗಳನ್ನು ರದ್ದುಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ವಿಮಾನ ಕಂಪನಿಗಳು ಎಚ್ಚರಿಸುತ್ತಿವೆ.

ಭಾರತದಲ್ಲಿ ಭಾರೀ ನಿರೀಕ್ಷೆ ಹೊಂದಿರುವ 5ಜಿ ನೆಟ್‌ವರ್ಕ್ ಕೊನೆಗೂ 2022ರ ವೇಳೆ ಹೊರಹೊಮ್ಮಲಿದೆ ಎಂದು ದೂರಸಂಪರ್ಕ ಇಲಾಖೆ ಸೋಮವಾರ ದೃಢಪಡಿಸಿದೆ. ಆರಂಭದಲ್ಲಿ ದೇಶಾದ್ಯಂತ 13 ನಗರಗಳಲ್ಲಿ 5ಜಿ ನೆಟ್ ವರ್ಕ್ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.

ಬೆಂಗಳೂರು ಸೇರಿದಂತೆ ಮೆಟ್ರೋ ನಗರಗಳಾದ ಅಹಮದಾಬಾದ್, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲು ಲಭ್ಯವಾಗಲಿದೆ.

ಈ ವರ್ಷದ ಆರಂಭದಲ್ಲಿ ಏರ್‌ಟೆಲ್, ಜಿಯೋ ಹಾಗೂ ವಿಐ ಟೆಲಿಕಾಂ ಕಂಪನಿಗಳು 5ಜಿ ಪ್ರಯೋಗಗಳನ್ನು ನಡೆಸಿದ್ದವು. ಇದೀಗ 224 ಕೋಟಿ ರೂ. ವೆಚ್ಚದಲ್ಲಿ ಈ ವರ್ಷದ ಕೊನೆಯಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

5ಜಿ ತಂತ್ರಜ್ಞಾನ ಡೇಟಾ ಡೌನ್‌ಲೋಡ್ ವಿಷಯದಲ್ಲಿ ಸುಧಾರಿತವಾಗಿ ಬಳಕೆದಾರರಿಗೆ ಅನುಭವ ನೀಡಲಿದೆ. ಅಂದರೆ 5ಜಿ ನೆಟ್‌ವರ್ಕ್ 4ಜಿ ಗಿಂತಲೂ 10 ಪಟ್ಟು ಹೆಚ್ಚು ವೇಗದ ಅನುಭವ ನೀಡುವ ನಿರೀಕ್ಷೆ ಇದೆ.

ದೇಶದಲ್ಲಿ ಆರೋಗ್ಯ, ದೂರಸಂಪರ್ಕ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಗಳಂತಹ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಪ್ರಾರಂಭವಾಗಲಿದೆ. 5ಜಿ ಸೇವೆ ಮೊದಲಿಗೆ ಈ 13 ನಗರಗಳಲ್ಲಿ ಪ್ರಾರಂಭವಾಗಿ ನಂತರ ದೇಶಾದ್ಯಂತ ಲಭ್ಯವಾಗಲಿದೆ.

English summary
The chief executives of major U.S. passenger and cargo carriers on Monday warned of an impending "catastrophic" aviation crisis in less than 36 hours, when AT&T (T.N) and Verizon (VZ.N) are set to deploy new 5G service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X