ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ:7.1 ತೀವ್ರತೆ ದಾಖಲು

|
Google Oneindia Kannada News

ವಾಷಿಂಗ್ಟನ್, ಜುಲೈ 6: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪ ತೀವ್ರತೆ ರಿಕ್ಟರ್ ಮಾಪಕ ದಲ್ಲಿ 7.1 ತೀವ್ರತೆ ದಾಖಲಾಗಿದೆ.

ಕಳೆದ 25 ವರ್ಷಗಳಲ್ಲಿ ಇದು ಪ್ರಬಲ ಭೂಕಂಪವಾಗಿದೆ.

Major earthquake hits South California

ಲಾಸ್ ಏಂಜಲೀಸ್‌ನ ಈಶಾನ್ಯಕ್ಕೆ 200 ಮೈಲಿ ದೂರದಲ್ಲಿರುವ ರಿಜ್‌ಕ್ರಿಸ್ಟ್‌ ನಗರದ ಸಮೀಪ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ7.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಈ ಪ್ರದೇಶದಲ್ಲಿ ದಶಕಗಳಲ್ಲಿ ಉಂಟಾದ ಅತಿದೊಡ್ಡ ಭೂಕಂಪ ಇದಾಗಿದೆ.

ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಆರಂಭದಲ್ಲಿ ಭೂಕಂಪವು 6.6 ತೀವ್ರತೆ ಇತ್ತು ಎಂದು ವರದಿಯಾಗಿದೆ. ಕೇವಲ 5.4 ಮೈಲಿಗಳ ಆಳದಲ್ಲಿ ಭೂಕಂಪದ ಕೇಂದ್ರವಿದೆ ಎನ್ನಲಾಗಿದೆ.

ಲಾಸ್ ಏಂಜಲೀಸ್‌ನಲ್ಲಿ ಉಂಟಾದ ಭೂಕಂಪದ ನಡುಕವು ಹಲವಾರು ಸಣ್ಣ ಪಟ್ಟಣಗಳಲ್ಲೂ ತನ್ನ ಪ್ರಭಾವ ಬೀರಿದೆ. ಘಟನೆ ವರದಿಯಾದ ಕೂಡಲೇ, ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ಟ್ವೀಟ್‌ನಲ್ಲಿ ಇದು ಅತಿದೊಡ್ಡ ಭೂಕಂಪ ಎಂದು ಹೇಳಿದೆ.

ಈ ಪ್ರಬಲ ಭೂಕಂಪದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಭೂಕಂಪವು ಡೆತ್ ವ್ಯಾಲಿ ನ್ಯಾಷನಲ್ ಪಾರ್ಕ್ ಭೂಕಂಪದ ಕೇಂದ್ರ ಬಿಂದುವಾಗಿತ್ತು.

ಲಾಸ್ ಎಂಜಿಲೀಸ್‌ನ ಈಶಾನ್ಯ ಭಾಗದಿಂದ 125 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. 7.1 ಮ್ಯಾಗ್ನಿಟ್ಯೂಡ್ ಪ್ರಬಲ ಭೂಕಂಪ ಇದಾಗಿದೆ. ಕಳೆದ 25 ವರ್ಷದಿಂದೀಚೆಗೆ ಇದುವೇ ಪ್ರಬಲ ಭೂಕಂಪವಾಗಿದೆ.

ಸಾಕಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಸಾಕಷ್ಟು ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

English summary
Major earthquake hits South California, hauses damaged 7.1 magnitude earthquake jolted Southern California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X