ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್: ಮಹಾತ್ಮಾ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು

|
Google Oneindia Kannada News

ನ್ಯೂಯಾರ್ಕ್, ಫೆ.6: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಇಲ್ಲಿನ ಮ್ಯಾನ್ ಹಟನ್ ಸ್ಕ್ವೇರ್‌ನಲ್ಲಿರುವ ಆಳೆತ್ತರದ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ವರದಿಯಾಗಿದೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಭಾರತೀಯ ರಾಯಭಾರ ಕಚೇರಿ, ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದೆ.

ಸುಮಾರು 9 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಯಾರೋ ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಅತ್ಯಂತ ಖೇದಕರ, ಈ ಘಟನೆಯನ್ನು ರಾಯಭಾರ ಕಚೇರಿ ತೀವ್ರವಾಗಿ ಖಂಡಿಸುತ್ತದೆ, ಸ್ಥಳೀಯ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಲಿ ಎಂದು ಅಧಿಕೃತವಾಗಿ ಟ್ವೀಟ್ ಮಾಡಿದೆ.

ಘಟನೆ ಬಗ್ಗೆ ತಿಳಿದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯವು ದಿಗ್ಭ್ರಮೆ ವ್ಯಕ್ತಪಡಿಸಿದೆ. 1986ರ ಅಕ್ಟೋಬರ್ 2ರಂದು ಗಾಂಧೀಜಿಯವರ 117ನೇ ಹುಟ್ಟುಹಬ್ಬದ ಅಂಗವಾಗಿ ಗಾಂಧಿ ಅಂತಾರಾಷ್ಟ್ರೀಯ ಸ್ಮರಣಾ ಸಂಸ್ಥೆ ಈ ಪ್ರತಿಮೆಯನ್ನು ಸ್ಥಾಪಿಸಲು ನೆರವಾಗಿತ್ತು.

ನ್ಯೂಯಾರ್ಕ್, ಫೆ.6: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಇಲ್ಲಿನ ಮ್ಯಾನ್ ಹಟನ್ ಸ್ಕ್ವೇರ್‌ನಲ್ಲಿರುವ ಆಳೆತ್ತರದ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ವರದಿಯಾಗಿದೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಭಾರತೀಯ ರಾಯಭಾರ ಕಚೇರಿ, ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದೆ. ಸುಮಾರು 9 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಯಾರೋ ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಅತ್ಯಂತ ಖೇದಕರ, ಈ ಘಟನೆಯನ್ನು ರಾಯಭಾರ ಕಚೇರಿ ತೀವ್ರವಾಗಿ ಖಂಡಿಸುತ್ತದೆ, ಸ್ಥಳೀಯ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಲಿ ಎಂದು ಅಧಿಕೃತವಾಗಿ ಟ್ವೀಟ್ ಮಾಡಿದೆ. ಘಟನೆ ಬಗ್ಗೆ ತಿಳಿದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯವು ದಿಗ್ಭ್ರಮೆ ವ್ಯಕ್ತಪಡಿಸಿದೆ. 1986ರ ಅಕ್ಟೋಬರ್ 2ರಂದು ಗಾಂಧೀಜಿಯವರ 117ನೇ ಹುಟ್ಟುಹಬ್ಬದ ಅಂಗವಾಗಿ ಗಾಂಧಿ ಅಂತಾರಾಷ್ಟ್ರೀಯ ಸ್ಮರಣಾ ಸಂಸ್ಥೆ ಈ ಪ್ರತಿಮೆಯನ್ನು ಸ್ಥಾಪಿಸಲು ನೆರವಾಗಿತ್ತು. ಅಮೆರಿಕದ ನಾಗರಿಕ ಹಕ್ಕು ಹೋರಾಟಗಾರರಾದ ಬೆಯಾರ್ಡ್ ರಸ್ಟಿನ್ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡು ಗಾಂಧಿ ಜೀವನ ತತ್ವ ಇಂದಿಗೂ ಏಕೆ ಪ್ರಸ್ತುತ ಎಂದು ವಿವರಿಸಿದ್ದರು. 2001ರಲ್ಲಿ ಒಮ್ಮೆ ಸ್ಥಳಾಂತರಗೊಂಡಿದ್ದ ಪ್ರತಿಮೆಯನ್ನು 2002ರಲ್ಲಿ ಪುನರ್ ಸ್ಥಾಪಿಸಲಾಗಿತ್ತು. ಈ ಹಿಂದೆ ಕೂಡಾ ಅಮೆರಿಕದಲ್ಲಿ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ್ದ ಘಟನೆ ನಡೆದಿತ್ತು. ಉತ್ತರ ಕ್ಯಾಲಿಫೋರ್ನಿಯಾದ ಸಿಟಿ ಆಫ್ ಡೇವಿಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿದ್ದ 6 ಅಡಿ ಎತ್ತರ ಮತ್ತು 650 ಪೌಂಡ್ (294 ಕೆಜಿ) ತೂಕದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು. ಅದರ ಪಾದದ ಭಾಗಗಳನ್ನು ಕತ್ತರಿಸಿ, ಅರ್ಧ ತಲೆಯನ್ನು ಕೆತ್ತಿ ವಿರೂಪಗೊಳಿಸಲಾಗಿತ್ತು. ಮುಖದ ಒಂದು ಭಾಗ ನಾಪತ್ತೆಯಾಗಿತ್ತು. ಪ್ರತಿಮೆ ನಿಲ್ಲಿಸಿದ್ದ ಸ್ಥಳದಿಂದ ಉರುಳಿಬಿದ್ದಿತ್ತು. ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಡೇವಿಸ್ ನಗರಕ್ಕೆ ಭಾರತ ಸರ್ಕಾರ ದೇಣಿಗೆ ನೀಡಿತ್ತು. ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳ ಪ್ರತಿಭಟನೆ ನಡುವೆ ನಾಲ್ಕು ವರ್ಷಗಳ ಹಿಂದೆ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಅಮೆರಿಕದ ನಾಗರಿಕ ಹಕ್ಕು ಹೋರಾಟಗಾರರಾದ ಬೆಯಾರ್ಡ್ ರಸ್ಟಿನ್ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡು ಗಾಂಧಿ ಜೀವನ ತತ್ವ ಇಂದಿಗೂ ಏಕೆ ಪ್ರಸ್ತುತ ಎಂದು ವಿವರಿಸಿದ್ದರು. 2001ರಲ್ಲಿ ಒಮ್ಮೆ ಸ್ಥಳಾಂತರಗೊಂಡಿದ್ದ ಪ್ರತಿಮೆಯನ್ನು 2002ರಲ್ಲಿ ಪುನರ್ ಸ್ಥಾಪಿಸಲಾಗಿತ್ತು.

ಈ ಹಿಂದೆ ಕೂಡಾ ಅಮೆರಿಕದಲ್ಲಿ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ್ದ ಘಟನೆ ನಡೆದಿತ್ತು. ಉತ್ತರ ಕ್ಯಾಲಿಫೋರ್ನಿಯಾದ ಸಿಟಿ ಆಫ್ ಡೇವಿಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿದ್ದ 6 ಅಡಿ ಎತ್ತರ ಮತ್ತು 650 ಪೌಂಡ್ (294 ಕೆಜಿ) ತೂಕದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು. ಅದರ ಪಾದದ ಭಾಗಗಳನ್ನು ಕತ್ತರಿಸಿ, ಅರ್ಧ ತಲೆಯನ್ನು ಕೆತ್ತಿ ವಿರೂಪಗೊಳಿಸಲಾಗಿತ್ತು. ಮುಖದ ಒಂದು ಭಾಗ ನಾಪತ್ತೆಯಾಗಿತ್ತು. ಪ್ರತಿಮೆ ನಿಲ್ಲಿಸಿದ್ದ ಸ್ಥಳದಿಂದ ಉರುಳಿಬಿದ್ದಿತ್ತು.

ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಡೇವಿಸ್ ನಗರಕ್ಕೆ ಭಾರತ ಸರ್ಕಾರ ದೇಣಿಗೆ ನೀಡಿತ್ತು. ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳ ಪ್ರತಿಭಟನೆ ನಡುವೆ ನಾಲ್ಕು ವರ್ಷಗಳ ಹಿಂದೆ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.

English summary
A life-sized bronze statue of Mahatma Gandhi was vandalised in a New York City neighbourhood on Saturday, an act strongly condemned as 'despicable' by the Consulate General of India here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X