ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ವಿಚಾರದಲ್ಲಿ ಚೀನಾ ಬಗ್ಗೆ ನಮಗೆ ಬೇಸರ ಇದೆ': ಟ್ರಂಪ್ ಹೀಗೆ ಹೇಳಿದ್ದೇಕೆ?

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 23: ಕೊರೊನಾ ವೈರಸ್‌ ಹುಟ್ಟಿಗೆ ಕಾರಣವಾಗಿರುವ ಚೀನಾ ದೇಶದ ವಿರುದ್ಧ ಇಡೀ ವಿಶ್ವಕ್ಕೆ ಕೋಪವಿರುವುದಂತೂ ಸುಳ್ಳಲ್ಲ. ಆ ವಿಚಾರದಲ್ಲಿ ಚೀನಾ ಮೇಲೆ ಅಮೆರಿಕಗೆ ಬಹಳ ದೊಡ್ಡ ಮಟ್ಟದ ಕೋಪ ಹೊಂದಿರುವುದು ಅಷ್ಟೆ ಸತ್ಯ. ಆದರೆ. ಈಗ ಪರಸ್ಪರ ಆರೋಪ ಮಾಡುವ ಸಮಯವಲ್ಲ ಎನ್ನುವ ಕಾರಣಕ್ಕೆ ಕೊರೊನಾ ದಾಳಿಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತೇವೆ ದೇಶಗಳು.

Recommended Video

Trump finally points his finger towards China | Oneindia kannada

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮದವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ''ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಬಗ್ಗೆ ನಮಗೆ ಸ್ವಲ್ಪ ಮಟ್ಟಿಗೆ ಬೇಸರ ಇದೆ'' ಎಂದು ಹೇಳಿದ್ದಾರೆ. ಟ್ರಂಪ್ ಹೇಳಿದ ಈ ಮಾತು ಈಗ ಚರ್ಚೆಗೆ ಕಾರಣವಾಗಿದೆ.

ಕೊರೊನಾ ವೈರಸ್ ಹೆಸರಲ್ಲಿ ಅಮೆರಿಕ ಚೀನಾ ಪರಸ್ಪರ ಕೆಸರೆರಚಾಟ!ಕೊರೊನಾ ವೈರಸ್ ಹೆಸರಲ್ಲಿ ಅಮೆರಿಕ ಚೀನಾ ಪರಸ್ಪರ ಕೆಸರೆರಚಾಟ!

ಚೀನಾ ಮತ್ತು ಅಮೆರಿಕ ದೇಶಗಳಿಗೆ ಮೊದಲಿನಿಂದಲೂ ಆಗಲ್ಲ. ಇಂತಹ ಸಮಯದಲ್ಲಿ ಚೀನಾ ದೇಶವೇ ಉದ್ದೇಶಪೂರ್ವಕವಾಗಿ ಕೊರೊನಾ ವೈರಸ್ ಹರಡಿಸಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಿರುವಾಗ ಟ್ರಂಪ್ ಹೀಗೆ ಹೇಳಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮುಂದೆ ಓದಿ....

ಚೀನಾ ಮೊದಲೇ ಹೇಳಬೇಕಿತ್ತು

ಚೀನಾ ಮೊದಲೇ ಹೇಳಬೇಕಿತ್ತು

'ಕೊರೊನಾ ವೈರಸ್‌ ಕುರಿತು ಚೀನಾ ದೇಶ ಮೊದಲೇ ನಮಗೆ ಹೇಳಬೇಕಿತ್ತು. ಈ ವಿಚಾರವನ್ನು ತಡವಾಗಿ ಹೇಳಿದ್ದರ ಬಗ್ಗೆ ನಮಗೆ ಬೇಸರ ಇದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. 'ನಾನು ಚೀನಾದ ಬಗ್ಗೆ ಸ್ವಲ್ಪ ಅಸಮಾಧಾನ ಹೊಂದಿದ್ದೇನೆ ನಿಜ. ನಾನು ಚೈನೀಸ್ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್ ಅವರನ್ನು ಇಷ್ಟಪಡುತ್ತೇನೆ, ನಾನು ಆ ದೇಶವನ್ನು ಗೌರವಿಸುತ್ತೇನೆ " ಎಂದು ಟ್ರಂಪ್ ಹೇಳಿದರು.

ನಮ್ಮ ವೈದ್ಯರ ತಂಡವನ್ನು ನಿರಾಕರಿಸಿದರು

ನಮ್ಮ ವೈದ್ಯರ ತಂಡವನ್ನು ನಿರಾಕರಿಸಿದರು

ಕೊರೊನಾ ವೈರಸ್ ಹರಡುತ್ತಿದೆ ಎಂಬ ವಿಚಾರ ನಮಗೆ ತಿಳಿಯುತ್ತಿದ್ದಂತೆ ನಾವು ಅಮೆರಿಕ ವೈದ್ಯರ ತಂಡವನ್ನು ಚೀನಾಗೆ ಕಳುಹಿಸಲು ಮುಂದಾಗಿದ್ದೇವೆ. ಆದರೆ, ಚೀನಾ ಅದನ್ನು ನಿರಾಕರಿಸಿತ್ತು, ಖುದ್ದು ಚೀನಾ ಅಧ್ಯಕ್ಷರ ಬಳಿ ಮಾತನಾಡಿದ್ದೇನೆ. ಆದರೆ ಯುಸ್ ವೈದ್ಯರನ್ನು ಬರಮಾಡಿಕೊಳ್ಳಲು ಸಿದ್ಧವಿರಲಿಲ್ಲ' ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ವೈರಸ್ ಸೋಂಕಿತರನ್ನು ಭೇಟಿ ಮಾಡಿದರೂ ಟ್ರಂಪ್ ನೆಗಟಿವ್ !ವೈರಸ್ ಸೋಂಕಿತರನ್ನು ಭೇಟಿ ಮಾಡಿದರೂ ಟ್ರಂಪ್ ನೆಗಟಿವ್ !

ಚೀನಾ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ

ಚೀನಾ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ

ಚೀನಾ ಜೊತೆ ನಮ್ಮ ಸಂಬಂಧ ಉತ್ತಮವಾಗಿದೆ ಎಂದು ಹೇಳಿದ ಟ್ರಂಪ್ ''ಅವರು ಮೂರು ತಿಂಗಳ ಹಿಂದೆಯೇ ಕೊರೊನಾ ಹರಡುವಿಕೆ ಬಗ್ಗೆ ನಮಗೆ ಹೇಳಿದ್ದರೆ ಚೆನ್ನಾಗಿತ್ತು. ನಮಗೆ ಈ ಬಗ್ಗೆ ಗೊತ್ತಿರಲಿಲ್ಲ. ಈ ಬಗ್ಗೆ ಮೊದಲೇ ಮಾಹಿತಿ ಕೊಟ್ಟಿದ್ದರೆ ಪ್ರಪಂಚಾದ್ಯಂತ ಬಹಳ ಜೀವಗಳನ್ನು ಉಳಿಸಬಹುದಿತ್ತು'' ಎಂದು ಮತ್ತೆ ಚೀನಾ ಮೇಲೆ ಪರೋಕ್ಷ ದಾಳಿ ಮಾಡಿದರು.

ಅಮೆರಿಕ ವರ್ಸಸ್ ಚೀನಾ

ಅಮೆರಿಕ ವರ್ಸಸ್ ಚೀನಾ

ಚೀನಾ ಮತ್ತು ಅಮೆರಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಪರಸ್ಪರ ಟ್ವಿಟ್ಟರ್‌ನಲ್ಲಿ ಆರೋಪ ಮತ್ತು ಪ್ರತ್ಯಾರೋಪ ಮಾಡಿದ್ದರು. ಕೊರೊನಾ ಬಗ್ಗೆ ಚೀನಾ ಮಾಹಿತಿ ನೀಡದೆ, ಮುಚ್ಚಿಟ್ಟಿತ್ತು. ಅವರ ಬೇಜವಾಬ್ದಾರಿಯಿಂದಲೇ ಈಗ ವಿಶ್ವಕ್ಕೆ ಇಂತಹ ಸ್ಥಿತಿ ಬಂದಿದೆ ಎಂದು ಟೀಕಿಸಿದ್ದರು. ಬಳಿಕ, ಚೀನಾವೂ ಅಮೆರಿಕ ಅಧಿಕಾರಿಗಳ ಟ್ವೀಟ್ ಗೆ ಉತ್ತರಿಸಿ, ನಾವು ಮೊದಲೇ ಎಚ್ಚರಿಸಿದ್ದೇವು, ಆ ಬಗ್ಗೆ ನಿರ್ಲಕ್ಷ್ಯ ತೋರಿಸಲಾಗಿದೆ ಎಂದು ತಿರುಗೇಟು ನೀಡಿದ್ದರು. ಇದೀಗ, ಅಮೆರಿಕ ಅಧ್ಯಕ್ಷ ಟ್ರಂಪ್ ಹೀಗೆ ಹೇಳಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಟ್ರಂಪ್ ಟ್ವೀಟ್ ನಂತರ HCQ ಲಸಿಕೆ ಫುಲ್ ಟ್ರೆಂಡಿಂಗ್ ಯಾಕೆ?ಟ್ರಂಪ್ ಟ್ವೀಟ್ ನಂತರ HCQ ಲಸಿಕೆ ಫುಲ್ ಟ್ರೆಂಡಿಂಗ್ ಯಾಕೆ?

English summary
'Little Upset With China, Should Have Told Us About Coronavirus' says america president Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X