• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

960 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಸಂಸ್ಥೆ

|

ವಾಶಿಂಗ್ಟನ್, ಜುಲೈ.21: ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗು ಕಾರ್ಪೋರೇಟ್ ವಲಯಕ್ಕೂ ಭಾರಿ ಹೊಡೆತ ಕೊಡುತ್ತಿದೆ. ಉತ್ಪನ್ನಗಳ ಬೇಡಿಕೆ ಮೇಲೆ ಕೊರೊನಾವೈರಸ್ ನಿರಂತರ ಪರಿಣಾಮ ಬೀರುತ್ತಿದ್ದು, ಮೈಕ್ರೋಸಾಫ್ಟ್ ಕಾರ್ಪೋರೇಟ್ ನೆಟ್ ವರ್ಕಿಂಗ್ ಸೈಟ್ ಆಗಿರುವ ಲಿಂಕ್ಡ್ ಇನ್ ಕಂಪನಿಯು ತನ್ನ 960 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ವಿಶ್ವದಾದ್ಯಂತ ತನ್ನ ಕಂಪನಿಯ ಶೇ.6ರಷ್ಚು ಉದ್ಯೋಗ ಕಡಿತಗೊಳಿಸಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಕ್ಯಾಲಿಪೋರ್ನಿಯಾ ಮೂಲದ ಕಂಪನಿಯು ತನ್ನ ಉದ್ಯೋಗಿಗಳಿಗೆ ಹೊಸ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ನೆರವು ನೀಡುವುದಾಗಿ ತಿಳಿಸಿದೆ.

40,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಟಿಸಿಎಸ್

ಜಾಗತಿಕ ಮಟ್ಟದಲ್ಲಿ ನೇಮಕಾತಿ ಮತ್ತು ಮಾರಾಟ ವಿಭಾಗದಲ್ಲಿ ಉದ್ಯೋಗ ಕಡಿತಗೊಳಿಸಲಾಗಿದೆ. ಕಂಪನಿಯಿಂದ ವಜಾಗೊಂಡಿರುವ ಉದ್ಯೋಗಿಗಳಿಗೆ 10 ವಾರಗಳ ವೇತನ ಮತ್ತು ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಯಾನ್ ರೊಸ್ಲಂಸ್ಕಿ ತಿಳಿಸಿದ್ದಾರೆ.

ಮೊದಲ ಬಾರಿಗೆ ಉದ್ಯೋಗದಲ್ಲಿ ಕಡಿತ:

ಲಿಂಕ್ಡ್ ಇನ್ ಕಂಪನಿಯಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗ ಕಡಿತಗೊಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಯಾನ್ ರೊಸ್ಲಂಸ್ಕಿ ಹೇಳಿದ್ದಾರೆ. ಉದ್ಯೋಗ ಕಡಿತದ ಬಗ್ಗೆ ಅಧಿಕೃತವಾಗಿ ಬಾಧಿತರಿಗೆ ಮಾಹಿತಿ ನೀಡಿಲ್ಲ. ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಅನುಕೂಲಕ್ಕಾಗಿ ಕಂಪನಿಯು ನೀಡಿದ ಸೆಲ್ ಫೋನ್, ಲ್ಯಾಪ್ ಟಾಪ್ ಮತ್ತು ಇತ್ತೀಚಿಗೆ ಖರೀದಿಸಿದ ಪರಿಕರಣಗಳು ಉದ್ಯೋಗಿಗಳ ಬಳಿಯೇ ಉಳಿದಿವೆ ಎಂದರು.

ಉದ್ಯೋಗ ಕಡಿತದ ಕುರಿತು ಸಭೆಗೆ ಹಾಜರಾಗುವಂತೆ ಉದ್ಯೋಗಿಗಳಿಗೆ ಇನ್ನೊಂದು ವಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ ನಿಮಗೆ ಸಭೆಗೆ ಹಾಜರಾಗುವಂತೆ ಕರೆ ಬಾರದಿದ್ದರೆ ನಿಮ್ಮ ಉದ್ಯೋಗಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಭಾವಿಸಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಯಾನ್ ರೊಸ್ಲಂಸ್ಕಿ ಹೇಳಿದ್ದಾರೆ.

English summary
LinkedIn Announces Layoffs As COVID-19 Pandemic Puts Brakes On Corporate Hiring.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X