• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

H1B ವೀಸಾ ವಿವಾದ, ಟ್ರಂಪ್ ವಿರುದ್ಧ ಕೋರ್ಟ್ ಮೊರೆ

|

ಅಮೆರಿಕದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ತಲೆನೋವು ಶುರುವಾಗಿದೆ. H1B ವೀಸಾ ಸಂಬಂಧ ಅಮೆರಿಕ ಅಧ್ಯಕ್ಷ ಟ್ರಂಪ್ ಸರ್ಕಾರ ರೂಪಿಸಿರುವ ನಿಯಮ ಪ್ರಶ್ನಿಸಿ ಯುಎಸ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ (USCC) ಹಾಗೂ ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಮ್ಯಾನ್ಯುಫಾಕ್ಚರರ್ಸ್‌ (NAM) ಸಂಘಟನೆಗಳ ನೇತೃತ್ವದಲ್ಲಿ ದಾವೆ ಹೂಡಲಾಗಿದೆ. ಹೊಸ ನಿಯಮದಿಂದ ದೇಶಕ್ಕೆ ಬರುವ ಪ್ರತಿಭಾವಂತರ ಸಂಖ್ಯೆ ಕುಗ್ಗಲಿದೆ.

ಟ್ರಂಪ್ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಗೊತ್ತುಗುರಿಯೇ ಇಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಮೆರಿಕದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರತಿಭಾವಂತರು ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆದರೆ ಹೊಸ ನಿಯಮದಿಂದ ಅದೆಲ್ಲವೂ ಕಷ್ಟಕರವಾಗಲಿದೆ. ಟ್ರಂಪ್ ಸರ್ಕಾರದ ಹೊಸ ನಿಯಮದ ಪರಿಣಾಮ ಕೈಗಾರಿಕೆಗಳಿಗೆ ನಷ್ಟವಾಗಲಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

 ಭಾರತೀಯರಿಗೆ ಹಿನ್ನಡೆ ಸಾಧ್ಯತೆ: ಹೆಚ್‌-1ಬಿ ವೀಸಾಗಳ ಮೇಲೆ ತೀವ್ರ ಮಿತಿ ಹೇರಲಿರುವ ಟ್ರಂಪ್ ಭಾರತೀಯರಿಗೆ ಹಿನ್ನಡೆ ಸಾಧ್ಯತೆ: ಹೆಚ್‌-1ಬಿ ವೀಸಾಗಳ ಮೇಲೆ ತೀವ್ರ ಮಿತಿ ಹೇರಲಿರುವ ಟ್ರಂಪ್

ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳಿಂದ ಕೋಟ್ಯಂತರ ಜನರು ವಲಸೆ ಬಂದು ಅಮೆರಿಕದಲ್ಲಿ ಕೆಲಸ ಗಿಟ್ಟಿಸಿದ್ದು, ಅವರಿಗೆಲ್ಲಾ ಟ್ರಂಪ್‌ರ ನೂತನ H1B ನಿಯಮ ತಲೆನೋವಾಗಿದೆ. ಇದು ಕೆಲಸಗಾರರಿಗೆ ಮಾತ್ರವಲ್ಲ, ಸ್ವತಃ ಕಂಪೆನಿಗಳ ಮಾಲೀಕರು ಕೂಡ ಈ ನಿಯಮದ ವಿರುದ್ಧ ತಿರುಗಿಬಿದ್ದಿದ್ದಾರೆ.

ಭಾರತಕ್ಕೆ, ಭಾರತೀಯರಿಗೆ ಬಿಗ್ ಲಾಸ್

ಭಾರತಕ್ಕೆ, ಭಾರತೀಯರಿಗೆ ಬಿಗ್ ಲಾಸ್

ಅಮೆರಿಕದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಮತ್ತು ಸ್ಥಳೀಯರಿಗೆ ಪ್ರಾಮುಖ್ಯತೆ ನೀಡಬೇಕು ಎಂಬುದು ಟ್ರಂಪ್ ಪ್ಲ್ಯಾನ್. ಆದರೆ ಇದರಿಂದ ಭಾರತೀಯರಿಗೆ ದೊಡ್ಡ ನಷ್ಟವಾಗಲಿದೆ. ಇದಕ್ಕೆ ಸಣ್ಣ ಉದಾಹರಣೆ ನೀಡಬಹುದಾದರೆ, ಪ್ರಸಕ್ತ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮತದಾರರು ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ.

ಹೀಗೆ ಕೋಟ್ಯಂತರ ಭಾರತೀಯರು ಅಮೆರಿಕದಲ್ಲಿ ನೆಲೆಸಲು ಇದೇ H1B ವೀಸಾ ಪ್ರಮುಖ ಕಾರಣ. ಅಲ್ಲದೆ ನಮ್ಮವರು ಅಲ್ಲಿನ ಪೌರತ್ವ ಪಡೆಯುವಲ್ಲಿಯೂ H1B ವೀಸಾ ಸಾಕಷ್ಟು ಪ್ರಭಾವ ಬೀರಿದೆ. ಆದರೆ ಈಗ ದಿಢೀರ್ ಟ್ರಂಪ್ ಆಡಳಿತ H1B ವೀಸಾ ಮೇಲೆ ಹತ್ತಾರು ನಿಯಮಗಳನ್ನ ಹೇರಿದ್ದು, ಭಾರತೀಯರು ಸೇರಿದಂತೆ ವಿಶ್ವದ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿಭಾವಂತರು ಬೆಚ್ಚಿಬಿದ್ದಿದ್ದಾರೆ.

ಹೆಚ್-1ಬಿ ವೀಸಾ ರದ್ದು: ಭಾರತೀಯರಿಗೆ ಹೊಡೆತ ಕೊಡುತ್ತಾ ಟ್ರಂಪ್ ನೀತಿ?ಹೆಚ್-1ಬಿ ವೀಸಾ ರದ್ದು: ಭಾರತೀಯರಿಗೆ ಹೊಡೆತ ಕೊಡುತ್ತಾ ಟ್ರಂಪ್ ನೀತಿ?

ಭಾರತೀಯರ ಮತವೇ ನಿರ್ಣಾಯಕ..!

ಭಾರತೀಯರ ಮತವೇ ನಿರ್ಣಾಯಕ..!

ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಭಾರತ ಮೂಲದ ಮತದಾರರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಇತ್ತೀಚಿನ ದಶಕಗಳಲ್ಲಿ ಆ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಅಮೆರಿಕ ರಾಜಕಾರಣದಲ್ಲಿ ಭಾರತೀಯರ ಹವಾ ಎಷ್ಟಿದೆ ಎಂದರೆ, ಹಲವು ಸಂಸದರು ಭಾರತ ಮೂಲದವರೇ ಆಗಿದ್ದಾರೆ.

ಅಷ್ಟೇ ಏಕೆ ಈಗ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಕೂಡ ಭಾರತ ಮೂಲದ ನಂಟನ್ನು ಹೊಂದಿದ್ದಾರೆ. ಕಮಲಾ ಹ್ಯಾರಿಸ್ ತಾಯಿ ತಮಿಳುನಾಡು ಮೂಲದವರು. ಸ್ವತಃ ಕಮಲಾ ಭಾರತದ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. ಟ್ರಂಪ್ ಕೂಡ ಭಾರತೀಯರ ಮತ ಪಡೆಯಲು ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಭಾರತೀಯರಿಗೆ ಸಮಸ್ಯೆ ಉಂಟುಮಾಡಬಲ್ಲ ನಿರ್ಧಾರವನ್ನೇ ಟ್ರಂಪ್ ಕೈಗೊಂಡಿದ್ದಾರೆ.

Sub Head: ಟ್ರಂಪ್ ಪಾಲಿಗೆ ಚುನಾವಣಾ ಅಜೆಂಡಾ..?

Sub Head: ಟ್ರಂಪ್ ಪಾಲಿಗೆ ಚುನಾವಣಾ ಅಜೆಂಡಾ..?

ಇಂತಹದ್ದೊಂದು ಆರೋಪ ಡೆಮಾಕ್ರಟಿಕ್ ಪಕ್ಷದ ನಾಯಕರದ್ದಾಗಿದೆ. ಟ್ರಂಪ್ ವೀಸಾ ವಿಚಾರವನ್ನೂ ತಮ್ಮ ಚುನಾವಣಾ ಗೆಲುವಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಆಶ್ವಾಸನೆ ಕೊಡುತ್ತಾ, ಟ್ರಂಪ್ ಮತಪಡೆಯುವ ಸಾಹಸ ಮಾಡುತ್ತಿದ್ದಾರೆ ಎಂಬುದು ಅವರ ಆರೋಪ. ಆದರೆ ಇದಕ್ಕೆ ಟ್ರಂಪ್ ಕೇರ್ ಮಾಡದೆ, H1B ವೀಸಾ ನಿಯಮದಲ್ಲಿ ಭಾರಿ ಬದಲಾವಣೆ ಮಾಡಿದ್ದಾರೆ. ಇದರಿಂದ ವಲಸೆ ನೀತಿಯಲ್ಲೇ ಅಲ್ಲೋಲ ಕಲ್ಲೋಲ ಉಂಟಾಗಿದೆ.

ಎಚ್-1ಬಿ ವೀಸಾ ನಿರ್ಬಂಧ: ನ್ಯಾಯಾಲಯದಲ್ಲೂ ಭಾರತದ ಉದ್ಯೋಗಿಗಳಿಗೆ ಹಿನ್ನಡೆಎಚ್-1ಬಿ ವೀಸಾ ನಿರ್ಬಂಧ: ನ್ಯಾಯಾಲಯದಲ್ಲೂ ಭಾರತದ ಉದ್ಯೋಗಿಗಳಿಗೆ ಹಿನ್ನಡೆ

ಟ್ರಂಪ್‌ಗೆ ಎದುರಾಗುತ್ತಾ ಸಂಕಷ್ಟ..?

ಟ್ರಂಪ್‌ಗೆ ಎದುರಾಗುತ್ತಾ ಸಂಕಷ್ಟ..?

ಹೌದು, ಈಗಾಗಲೇ ಇಂತಹದ್ದೊಂದು ಚರ್ಚೆ ಅಮೆರಿಕದಲ್ಲಿ ಆರಂಭವಾಗಿದೆ. ಟ್ರಂಪ್ ವಿರುದ್ಧ ಈಗಾಗಲೇ ಹತ್ತಾರು ಅರ್ಜಿಗಳು ಕೋರ್ಟ್ ಮೆಟ್ಟಿಲೇರಿವೆ. ಅದರಲ್ಲಿ ಪ್ರಮುಖವಾಗಿ ಕ್ರಿಮಿನಲ್ ಕೇಸ್‌ಗಳು ಕೂಡ ಇವೆ. ಇಷ್ಟೆಲ್ಲದರ ಮಧ್ಯೆ ಟ್ರಂಪ್ ವಿರುದ್ಧ ಈಗ ಹೊಸದಾಗಿ H1B ವೀಸಾ ಅರ್ಜಿ ಕೂಡ ದಾಖಲಾಗಿದೆ. ಇದು ಟ್ರಂಪ್‌ಗೆ ಚುನಾವಣೆ ಗೆಲ್ಲಲೇಬೇಕು ಎಂಬ ಅನಿವಾರ್ಯತೆ ಸೃಷ್ಟಿಯಾಗುವಂತೆ ಮಾಡಿದೆ. ಅಕಸ್ಮಾತ್ ಟ್ರಂಪ್ ಸೋತರೆ ಅರ್ಜಿಗಳ ವಿಚಾರಣೆ ತೀವ್ರ ವೇಗ ಪಡೆಯಲಿದ್ದು, ಟ್ರಂಪ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ.

‘ಅವರೇನು ಮೂಲ ಅಮೆರಿಕದ ನಿವಾಸಿಗಳಲ್ಲ’

‘ಅವರೇನು ಮೂಲ ಅಮೆರಿಕದ ನಿವಾಸಿಗಳಲ್ಲ’

ಟ್ರಂಪ್ H1B ವೀಸಾ ನಿಯಮದಲ್ಲಿ ಬದಲಾವಣೆ ಮಾಡಿರುವು ದೊಡ್ಡ ವಿವಾದ ಸೃಷ್ಟಿಸಿರುವಾಗಲೇ, ಇದನ್ನು ವಿರೋಧಿಸಿ ನಾನಾ ಹೋರಾಟಗಳು ನಡೆಯುತ್ತಿವೆ. ಇಷ್ಟೆಲ್ಲದರ ಮಧ್ಯೆ ಕೆಲವರು ಟ್ರಂಪ್ ನಿರ್ಧಾರದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಮೆರಿಕದಲ್ಲಿ ಟ್ರಂಪ್ ಈಗ ಬದಲಾವಣೆ ಬಯಸಿರುವುದು ಸ್ಥಳೀಯ ಉದ್ಯೋಗಿಗಳಿಗೆ ಕೆಲಸ ಕೊಡಬೇಕೆಂದು.

ಆದರೆ ಅವರು ಕೂಡ ಯುರೋಪ್ ದೇಶಗಳಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿದವರು. ಆದರೆ ಈಗ ಬೇರೆ ದೇಶಗಳಿಂದ ವಲಸೆ ಬರುವವರನ್ನು ಟ್ರಂಪ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಕೆಲವರ ಆರೋಪವಾಗಿದೆ. ಅದೇನೆ ಇರಲಿ ಚುನಾವಣೆ ಹೊತ್ತಲ್ಲೇ ಟ್ರಂಪ್‌ಗೆ ಇನ್ನೊಂದು ಸಂಕಷ್ಟ ಎದುರಾಗಿದ್ದು, ಇದರಿಂದ ಹೇಗೆ ಹೊರಬರಲಿದ್ದಾರೆ ಎಂಬುದನ್ನ ಕಾದು ನೋಡಬೇಕು.

ಡೊನಾಲ್ಡ್ ಟ್ರಂಪ್ ಗೆಲುವಿಗೆ ರೈತ ಸಮುದಾಯ ಶಪಥಡೊನಾಲ್ಡ್ ಟ್ರಂಪ್ ಗೆಲುವಿಗೆ ರೈತ ಸಮುದಾಯ ಶಪಥ

English summary
The United States Chambers of Commerce and the National Association of Manufacturers filed lawsuits over the H1B visa rule, which is set by Trump's government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X