• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ

|
Google Oneindia Kannada News

ಹ್ಯೂಸ್ಟನ್, ಸೆಪ್ಟೆಂಬರ್ 21: ಅಮೆರಿಕದ ಹ್ಯೂಸ್ಟನ್‌ನಲ್ಲಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲ ಭಾಗವಹಿಸಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ಸಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಮತ್ತು ಅದರ ಬಳಿಕ ರಾಜ್ಯದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಟೆಕ್ಸಾಸ್ ಮೂಲದ ಫೆಡರಲ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ರಾಮ ಮಂದಿರ ನಿರ್ಮಾಣ: ಮೋದಿ ಹೇಳಿದ 'ಭರವಸೆ' ಮಾತುರಾಮ ಮಂದಿರ ನಿರ್ಮಾಣ: ಮೋದಿ ಹೇಳಿದ 'ಭರವಸೆ' ಮಾತು

ಕಾಶ್ಮೀರದ ಜನರ ಹಕ್ಕನ್ನು ಮೋದಿ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ಕಾಶ್ಮೀರದ ಇಬ್ಬರು ಕಾರ್ಯಕರ್ತರು ಮೋದಿ ವಿರುದ್ಧ ದಾವೆ ಹೂಡಿದ್ದಾರೆ. ಅಲ್ಲದೆ, ಮೋದಿ ಅವರ ವಿರುದ್ಧ ಸಿಖ್ ಸಂಘಟನೆಯೊಂದರ ಗುಂಪು ಹಾಗೂ ಪಾಕಿಸ್ತಾನಿಯರು ಹ್ಯೂಸ್ಟನ್‌ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.

'ಹೌಡಿ ಮೋದಿ' ಜಗತ್ತಿನ ದುಬಾರಿ ಕಾರ್ಯಕ್ರಮ: ರಾಹುಲ್ ತಗಾದೆ'ಹೌಡಿ ಮೋದಿ' ಜಗತ್ತಿನ ದುಬಾರಿ ಕಾರ್ಯಕ್ರಮ: ರಾಹುಲ್ ತಗಾದೆ

'ಹೌಡಿ, ಮೋದಿ! ಕನಸುಗಳ ಹಂಚಿಕೆ, ಉಜ್ವಲ ಭವಿಷ್ಯ' ಕಾರ್ಯಕ್ರಮದಲ್ಲಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಭಾನುವಾರ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೋದಿ ಅವರ ವಿರುದ್ಧ ಕಾಶ್ಮೀರಿ ಕಾರ್ಯಕರ್ತರು ಮತ್ತು ಖಲಿಸ್ತಾನ ರೆಫರೆಂಡಮ್ ಫ್ರಂಟ್ ಸಂಘಟನೆ 73 ಪುಟಗಳ ದೂರು ನೀಡಿದೆ. ಕಾಶ್ಮೀರಿಗಳ ಮೇಲೆ ಮೋದಿ, ಅಮಿತ್ ಶಾ, ಸೇನಾ ಜನರಲ್ ಕನ್ವಲ್ ಜೀತ್ ಸಿಂಗ್ ದೊಲ್ಲೋನ್ ಅವರು ಕ್ರೌರ್ಯ ಮತ್ತು ಅಮಾನವೀಯ ವರ್ತನೆ ಪ್ರದರ್ಶಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನುಬಾಹಿರ ಹತ್ಯೆ ಹಾಗೂ ಸಂಘರ್ಷಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊನ್ನೆ ಮೋದಿ, ನಿನ್ನೆ ಶಾ ಭೇಟಿ: ಹಮ್ಮು ತೊರೆದರೇ ದೀದಿ?ಮೊನ್ನೆ ಮೋದಿ, ನಿನ್ನೆ ಶಾ ಭೇಟಿ: ಹಮ್ಮು ತೊರೆದರೇ ದೀದಿ?

ಮೋದಿ ಅವರ ವಿರುದ್ಧ ಅಮೆರಿಕದ ಫೆಡರಲ್ ಕೋರ್ಟ್ ಒಂದರಲ್ಲಿ ದಾವೆ ದಾಖಲಾಗಿರುವುದು ಇದು ಎರಡನೆಯ ಬಾರಿ. ಗೋಧ್ರಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರ ಸೆಪ್ಟೆಂಬರ್‌ನಲ್ಲಿ ಮೋದಿ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ ಈ ದಾವೆಯನ್ನು 2015ರ ಜನವರಿಯಲ್ಲಿ ವಜಾಗೊಳಿಸಲಾಗಿತ್ತು.

English summary
A Texas based Federal court has issued summons to Prime Minister Narendra Modi over the government decision on Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X