ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ನಂತರ ಫೇಸ್‌ಬುಕ್‌ಗೆ ಎದುರಾಯ್ತು ಗಂಡಾಂತರ

|
Google Oneindia Kannada News

ಅಮೆರಿಕದಲ್ಲಿ ದೈತ್ಯ ಟೆಕ್ ಕಂಪನಿಗಳ ವಿರುದ್ಧದ ಸಮರ ಮುಂದುವರಿದಿದೆ. ಫೇಸ್‌ಬುಕ್ ವಿರುದ್ಧ ಅಮೆರಿಕದ 40ಕ್ಕೂ ಹೆಚ್ಚು ರಾಜ್ಯಗಳು ಮೊಕದ್ದಮೆ ಹೂಡಿವೆ. ಸಣ್ಣಪುಟ್ಟ ಆ್ಯಪ್, ಸಂಸ್ಥೆಗಳ ಮೇಲೆ ತನ್ನ ಹಿಡಿತ ಸಾಧಿಸಲು ಫೇಸ್‌ಬುಕ್ ಹವಣಿಸುತ್ತಿದೆ ಎಂದು ಮೊಕದ್ದಮೆ ಹೂಡಿರುವ ಅಮೆರಿಕದ 40ಕ್ಕೂ ಹೆಚ್ಚು ರಾಜ್ಯಗಳು ಗಂಭೀರ ಆರೋಪ ಮಾಡಿವೆ.

ಈ ಮೂಲಕ 2020ರಲ್ಲಿ ಗೂಗಲ್ ನಂತರ ಅತಿದೊಡ್ಡ ಕಾನೂನು ಸಮರ ಫೇಸ್‌ಬುಕ್ ವಿರುದ್ಧ ಆರಂಭವಾಗಿದೆ. ಮೊಕದ್ದಮೆಯಲ್ಲಿ ಹಲವು ಅಂಶಗಳನ್ನು ದಾಖಲು ಮಾಡಲಾಗಿದ್ದು, ಫೇಸ್‌ಬುಕ್‌ನ ಬ್ಯುಸಿನೆಸ್ ಕುರಿತು ಸಾಕಷ್ಟು ಆರೋಪಗಳು ಕೇಳಿಬಂದಿವೆ. ಫೇಸ್‌ಬುಕ್‌ ಸಣ್ಣಪುಟ್ಟ ಆ್ಯಪ್ ಕೊಳ್ಳುವ ಮುನ್ನ ಅನಿವಾರ್ಯತೆ ಸೃಷ್ಟಿಸುತ್ತದೆ. 'ಖರೀದಿಸು ಅಥವಾ ಹೂತುಹಾಕು' ಎಂಬ ನೀತಿಯನ್ನ ಅನುಸರಿಸುತ್ತಿದೆ ಎಂದು ಅಮೆರಿಕದ ರಾಜ್ಯಗಳು ಆರೋಪಿಸಿವೆ.

2012ರಲ್ಲಿ ನಡೆದಿದ್ದ ಇನ್ಸ್‌ಟಾಗ್ರಾಮ್ ಖರೀದಿ ಒಪ್ಪಂದವನ್ನು ಹಾಗೂ 2014ರ ವಾಟ್ಸ್‌ಆ್ಯಪ್ ಖರೀದಿ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. 2012ರಲ್ಲಿ ಇನ್ಸ್‌ಟಾಗ್ರಾಮ್ ಖರೀದಿ ಮಾಡಿದ್ದ ಫೇಸ್‌ಬುಕ್ ಇದಕ್ಕೆ ಪ್ರತಿಯಾಗಿ 1 ಬಿಲಿಯನ್ ಡಾಲರ್ ನೀಡಿತ್ತು. 2014ರಲ್ಲಿ ವಾಟ್ಸ್‌ಆ್ಯಪ್ ಅನ್ನ ಖರೀದಿಸಲು 19 ಬಿಲಿಯನ್ ಡಾಲರ್‌ ಒಪ್ಪಂದ ನಡೆದಿತ್ತು. ಆದರೆ ಇಂದು ಇದೇ ಆ್ಯಪ್‌ಗಳನ್ನು ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿ ಹೇಳುವುದಾದರೆ ಇಂದಿಗೆ ನೂರಾರು ಬಿಲಿಯನ್ ಡಾಲರ್ ಬೆಲೆಬಾಳುತ್ತವೆ.

 ಇನ್ಸ್‌ಟಾಗ್ರಾಮ್, ವಾಟ್ಸ್‌ಆ್ಯಪ್ ಖರೀದಿಗೆ ಒತ್ತಡ..?

ಇನ್ಸ್‌ಟಾಗ್ರಾಮ್, ವಾಟ್ಸ್‌ಆ್ಯಪ್ ಖರೀದಿಗೆ ಒತ್ತಡ..?

ಫೇಸ್‌ಬುಕ್ ವಿರುದ್ಧ ಮುಖ್ಯವಾಗಿ ಕೇಳಿಬಂದಿರುವ ಆರೋಪ ಇನ್ಸ್‌ಟಾಗ್ರಾಮ್, ವಾಟ್ಸ್‌ಆ್ಯಪ್ ಖರೀದಿ ಕುರಿತಾಗಿದೆ. 100 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಇನ್ಸ್‌ಟಾಗ್ರಾಮ್ ಆ್ಯಪ್ 2012ರಲ್ಲಿ ಫೇಸ್‌ಬುಕ್‌ಗೆ ಸೇಲ್ ಆಗಿತ್ತು. ಅಂದು ಇನ್ಸ್‌ಟಾಗ್ರಾಮ್ ಮಾರಾಟದ ಬೆಲೆ 1 ಬಿಲಿಯನ್ ಡಾಲರ್ ಆಗಿತ್ತು, ಅಂದ್ರೆ 2012ರಲ್ಲಿ ಭಾರತದ ರೂಪಾಯಿ ಮೌಲ್ಯದ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 5 ಸಾವಿರ ಕೋಟಿ ರೂಪಾಯಿಗೆ ಮಾರಾಟ ನಡೆದಿತ್ತು.

ಈಗಿನ ಮಾರುಕಟ್ಟೆ ಮೌಲ್ಯ ಹೇಳುವುದಾದರೆ ಹಾರ್ಟ್ ಅಟ್ಯಾಕ್ ಪಕ್ಕಾ, ಏಕೆಂದರೆ ಇನ್ಸ್‌ಟಾಗ್ರಾಮ್‌ನ ಈಗಿನ ಮಾರುಕಟ್ಟೆ ಮೌಲ್ಯ 100 ಬಿಲಿಯನ್ ಡಾಲರ್‌ಗೂ ಹೆಚ್ಚು. 2014ರಲ್ಲಿ 19 ಬಿಲಿಯನ್ ಡಾಲರ್‌ ಅಂದ್ರೆ ಸುಮಾರು 1 ಲಕ್ಷ 20 ಸಾವಿರ ಕೋಟಿಗೆ ಮಾರಾಟವಾಗಿದ್ದ ವಾಟ್ಸ್‌ಆ್ಯಪ್ ಇಂದು ಸುಮಾರು 2 ಬಿಲಿಯನ್‌ಗೆ ಬೆಲೆಬಾಳುತ್ತದೆ. ಅಂದರೆ ಲೆಕ್ಕ ಹಾಕಿ ಫೇಸ್‌ಬುಕ್ ಈ ಎರಡೂ ಆ್ಯಪ್ ಖರೀದಿ ಮಾಡುವ ಮುನ್ನ ಹಾಗೂ ಖರೀದಿ ಮಾಡಿದ ನಂತರ ಎಷ್ಟು ಲಾಭ ಆಗಿರಬಹುದು ಎಂಬುದನ್ನ.

ಮಾರುಕಟ್ಟೆ ನಿಯಂತ್ರಣಕ್ಕೆ ಯತ್ನ..?

ಮಾರುಕಟ್ಟೆ ನಿಯಂತ್ರಣಕ್ಕೆ ಯತ್ನ..?

ಫೇಸ್‌ಬುಕ್ ಏಕಸ್ವಾಮ್ಯ ನೀತಿ ಅಂದರೆ ಒಬ್ಬನೇ ರಾಜ ಎಂಬಂತಹ ವರ್ತನೆ ತೋರುತ್ತಿದೆ. ಇದಕ್ಕಾಗಿ ತನಗೆ ಎದುರಾಗುವ ಎದುರಾಳಿಗಳನ್ನ ಕಂಟ್ರೋಲ್ ಮಾಡುತ್ತಿದೆ. 'ಖರೀದಿಸು ಅಥವಾ ಹೂತುಹಾಕು' ಎಂಬ ನೀತಿ ಅನುಸರಿಸುವ ಮೂಲಕ ಆಗತಾನೆ ಬೆಳೆಯುತ್ತಿರುವ ಸಂಸ್ಥೆಗಳನ್ನ, ಆ್ಯಪ್‌ಗಳನ್ನ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿದೆ ಎಂದು ಅಮೆರಿಕದ 40ಕ್ಕೂ ಹೆಚ್ಚು ರಾಜ್ಯಗಳು ಆರೋಪ ಮಾಡಿವೆ. ಈಗಾಗಲೇ ಅಮೆರಿಕನ್ ಕಾಂಗ್ರೆಸ್‌ನಿಂದ ಫೇಸ್‌ಬುಕ್ ವಿಚಾರಣೆ ನಡೆದಿತ್ತು. ಇದಾದ ಬಳಿಕ ಮತ್ತೆ ಸಾಮಾಜಿಕ ಜಾಲತಾಣದ ರಾಜನಿಗೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಮಾರ್ಕ್ ಜುಕರ್ಬರ್ಗ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟಿಕ್‌ಟಾಕ್ ವಿಚಾರದಲ್ಲೂ ಕಿರಿಕ್..!

ಟಿಕ್‌ಟಾಕ್ ವಿಚಾರದಲ್ಲೂ ಕಿರಿಕ್..!

ಅಮೆರಿಕದಲ್ಲಿ ಈ ರೀತಿ ಕಿರಿಕಿರಿ ಅನುಭವಿಸುತ್ತಿರುವುದು ಫೇಸ್‌ಬುಕ್, ಗೂಗಲ್ ಮಾತ್ರವಲ್ಲ, ಚೀನಿ ಕಂಪನಿ ಟಿಕ್‌ಟಾಕ್ ಕೂಡ ಇದೇ ಒತ್ತಡ ಅನುಭವಿಸಿದೆ. ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಮಾಡಿದ ನಂತರ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಟಿಕ್‌ಟಾಕ್ ವಿರುದ್ಧ ಕ್ರಮ ಕೈಗೊಂಡಿದ್ದ. ಅಮೆರಿಕದ ನಿರ್ಗಮಿತ ಅಧ್ಯಕ್ಷ ಟ್ರಂಪ್ ಟಿಕ್‌ಟಾಕ್ ವಿರುದ್ಧ ಸಮರವನ್ನೇ ಸಾರಿದ್ದರು. ಅಮೆರಿಕ ಮೂಲದ ಸಂಸ್ಥೆಗೆ ಟಿಕ್‌ಟಾಕ್ ಮಾರಬೇಕು ಎಂದು ಟ್ರಂಪ್ ಡೆಡ್‌ಲೈನ್ ನೀಡಿದ್ದರು. ತೀವ್ರ ಒತ್ತಡಕ್ಕೆ ಸಿಲುಕಿದ್ದ ಟಿಕ್‌ಟಾಕ್, ಮಾರಾಟಕ್ಕೆ ಪರದಾಡಿತ್ತು. ಇದು ಇನ್ನೂ ಕಗ್ಗಂಟಾಗಿರುವ ಸಂದರ್ಭದಲ್ಲೇ ಫೇಸ್‌ಬುಕ್ ಕೂಡ ಕಾನೂನು ಸಮರದ ಬಿಸಿ ಎದುರಿಸುತ್ತಿದೆ.

ಪ್ರತಿಕ್ರಿಯೆ ನೀಡದ ಫೇಸ್‌ಬುಕ್

ಪ್ರತಿಕ್ರಿಯೆ ನೀಡದ ಫೇಸ್‌ಬುಕ್

ಅಮೆರಿಕದ 40ಕ್ಕೂ ಹೆಚ್ಚು ರಾಜ್ಯಗಳು ಫೇಸ್‌ಬುಕ್ ವಿರುದ್ಧ ಮೊಕದ್ದಮೆ ಹೂಡಿದ ನಂತರ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಫೇಸ್‌ಬುಕ್ ಮುಂದಾಗಿಲ್ಲ. ಈಗಾಗಲೇ ಒಂದು ಬಾರಿ ಅಮೆರಿಕನ್ ಕಾಂಗ್ರೆಸ್‌ನಿಂದ ವಿಚಾರಣೆ ಬಿಸಿ ಎದುರಿಸಿರುವ ಫೇಸ್‌ಬುಕ್, ಇದೀಗ ತನ್ನ ಹೋರಾಟವನ್ನು ಮುಂದುವರಿಸಬೇಕಾಗಿ ಬಂದಿದೆ. ಗೂಗಲ್, ಟಿಕ್‌ಟಾಕ್ ಕೂಡ ಅಮೆರಿಕದಲ್ಲಿ ತಮ್ಮ ಉಳಿವಿಗೆ ಹೋರಾಟ ಮುಂದುವರಿಸಿವೆ. ಹೋರಾಟದಲ್ಲಿ ಗೆಲವು ಯಾರಿಗೆ ಅನ್ನೋದನ್ನ ತಿಳಿಯಲು ಹಲವು ವರ್ಷಗಳೇ ಕಾಯಬೇಕಿದೆ. ಏಕೆಂದರೆ ಸದ್ಯ ಫೇಸ್‌ಬುಕ್ ವಿರುದ್ಧ ಹೂಡಿರುವ ಮೊಕದ್ದಮ್ಮೆಯ ವಿಚಾರಣೆ ಮುಗಿಯಲು ಹಲವು ವರ್ಷಗಳೇ ಬೇಕಾಗಬಹುದು.

English summary
Lawsuit filed against Facebook in US by more than 40 states. This is the 2nd major lawsuit after the google in this year against an tech giant in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X