• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಸಕರು, ಒಲಿಂಪಿಕ್ ಚಿನ್ನದ ಪದಕ ಗೆದ್ದವರು ಕಂಬಿ ಹಿಂದೆ ಬಿದ್ದ ಕಥೆ ಇದು..!

|

ಅಲ್ಲಿ ಪ್ರತಿಭಟನೆ ಆರಂಭವಾಗಿತ್ತು, ನೋಡ ನೋಡುತ್ತಿದ್ದಂತೆ ಸಂಸತ್ ಭವನಕ್ಕೆ ನುಗ್ಗಿದ್ದ ಅವರೆಲ್ಲಾ ಮನಸ್ಸಿಗೆ ಬಂದಂತೆ ವರ್ತಿಸಿ ಹಿಂಸಾಚಾರ ನಡೆಸಿದ್ದರು. ಆದರೆ ಹೀಗೆ ಹಿಂಸಾಚಾರ ನಡೆಸಿದ್ದವರಲ್ಲಿ ಶಾಸಕರು ಸೇರಿದಂತೆ ಒಲಿಂಪಿಕ್ ಸ್ವರ್ಣ ಪದಕ ವಿಜೇತರು ಕೂಡ ಸೈಕೋಗಳಂತೆ ವರ್ತಿಸಿದ್ದರು ಎಂಬುದು ಈಗ ರಿವೀಲ್ ಆಗಿದೆ. ಅಷ್ಟಕ್ಕೂ ನಾವಿಲ್ಲಿ ಹೇಳುತ್ತಿರುವುದು ಅಮೆರಿಕದ ಕ್ಯಾಪಿಟಲ್ ಹಿಲ್ ದುರಂತದ ಬಗ್ಗೆ. ಇದೇ ಜನವರಿ 6ರಂದು ಅಮೆರಿಕದ ಸಂಸತ್ ಭವನ 'ಕ್ಯಾಪಿಟಲ್ ಹಿಲ್' ಕಟ್ಟಡದ ಮೇಲೆ ದಾಳಿ ನಡೆದಿತ್ತು.

ಮಾಜಿ ಅಧ್ಯಕ್ಷ ಟ್ರಂಪ್ ಮಾಡಿದ್ದ ಪ್ರಚೋದನಕಾರಿ ಭಾಷಣದಿಂದ ಜನರು ರೊಚ್ಚಿಗೆದ್ದಿದ್ದರು. ಆ ಬಳಿಕ ನಡೆದಿದ್ದೇ ಊಹೆಗೂ ನಿಲುಕದ ದುರಂತ. ಈ ದುರಂತದಲ್ಲಿ ಐವರು ಬಲಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿರುವ ಅಮೆರಿಕದ ಎಫ್‌ಬಿಐ ಈಗಾಗಲೇ 200ಕ್ಕೂ ಹೆಚ್ಚು ಜನರನ್ನ ಬಂಧಿಸಿದೆ. ಇವರಲ್ಲಿ ಅಮೆರಿಕದ ಒಲಿಂಪಿಕ್ ತಾರೆಯರು, ಶಾಸಕರು ಕೂಡ ಸೇರಿದ್ದಾರೆ ಎಂಬುದು ಎಂತಹವರನ್ನೂ ಬೆಚ್ಚಿಬೀಳಿಸುತವಂತಿದೆ.

ಟ್ರಂಪ್‌ಗೆ ಮತ್ತೊಮ್ಮೆ ಮುಖಭಂಗ! ಹಿಂಸಾಚಾರ ಸತ್ಯದ ಬಹಿರಂಗ

221 ಜನರ ವಿರುದ್ಧ ಪ್ರಕರಣ

221 ಜನರ ವಿರುದ್ಧ ಪ್ರಕರಣ

ಈವರೆಗೂ ಅಮೆರಿಕದ ತನಿಖಾ ಸಂಸ್ಥೆಗಳು ಒಟ್ಟು 221 ಜನರ ವಿರುದ್ಧ ಪ್ರಕರಣ ದಾಖಲಿಸಿವೆ. ಕ್ಯಾಪಿಟಲ್ ಹಿಲ್ ಅಟ್ಯಾಕ್ ಸಂಬಂಧ ಇವರನ್ನೆಲ್ಲಾ ಬಂಧಿಸಲಾಗಿದೆ. ಸಂಸತ್ ಭವನಕ್ಕೆ ನುಗ್ಗಿ ಹುಚ್ಚರಂತೆ ವರ್ತಿಸಿದ್ದೂ ಅಲ್ಲದೆ ಹಿಂಸೆ ನಡೆಸಿದ್ದರಂತೆ ಇವರು. ಇದನ್ನೆಲ್ಲಾ ತೀರಾ ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕದ ಸಂಸದರು ಹಾಗೂ ಶಾಸಕರು ಪಕ್ಷಾತೀತವಾಗಿ ಟ್ರಂಪ್ ಹಾಗೂ ಟ್ರಂಪ್ ಗ್ಯಾಂಗ್ ವಿರುದ್ಧ ತಿರುಗಿಬಿದ್ದಿದ್ದರು. ಟ್ರಂಪ್‌ಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಒಕ್ಕೊರಲ ಮನವಿಯನ್ನೂ ಮಾಡಿದ್ದರು. ಇದರ ಪರಿಣಾಮ ಅಮೆರಿಕದ ವಿವಾದಾತ್ಮಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಈಗ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್

ಹಂತ ಹಂತದಲ್ಲೂ ಹೋರಾಟ..!

ಹಂತ ಹಂತದಲ್ಲೂ ಹೋರಾಟ..!

ಪ್ರತಿ ಹಂತದಲ್ಲೂ ಟ್ರಂಪ್ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಗಟ್ಟಿಗಿತ್ತಿ ಪೆಲೋಸಿ. ಇದೀಗ ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ತಿಂಗಳ ಹಿಂದೆ ಕೂಡ ಅಮೆರಿಕದ ಹೌಸ್ ಆಫ್ ಕಾಂಗ್ರೆಸ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆದು, ಅದಕ್ಕೆ ಅನುಮೋದನೆ ಸಿಕ್ಕಿತ್ತು. ಆಗಲೂ ಪೆಲೋಸಿ ಪಾತ್ರ ಮಹತ್ವದ್ದಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಅಷ್ಟು ಪ್ರಭಾವಶಾಲಿ ಮಹಿಳೆ ನ್ಯಾನ್ಸಿ ಪೆಲೋಸಿ. ಹೀಗೆ ಪೆಲೋಸಿ ಹವಾ ಹೇಗಿದೆ ಎಂದರೆ, ಖುದ್ದು ರಿಪಬ್ಲಿಕನ್ ಸದಸ್ಯರು ಕೂಡ ಪೆಲೋಸಿ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ.

ಹಲವು ಬಾರಿ ದಾಳಿ ನಡೆದಿದೆ

ಹಲವು ಬಾರಿ ದಾಳಿ ನಡೆದಿದೆ

1814ರ ನಂತರ 1835ರಲ್ಲಿಯೂ ಕ್ಯಾಪಿಟಲ್ ಹಿಲ್ ಮೇಲೆ ಅಟ್ಯಾಕ್ ಆಗಿತ್ತು. ಅಂದಿನ ಅಧ್ಯಕ್ಷ ಆ್ಯಂಡ್ರೊ ಜಾಕ್ಸನ್ ಹತ್ಯೆ ಮಾಡಲು ಸಂಚು ಹೂಡಿದ್ದ ಸಂದರ್ಭದಲ್ಲಿ ಕಟ್ಟಡದ ಮೇಲೆ ದಾಳಿ ನಡೆದಿತ್ತು. ನಂತರ 1856, 1915, 1954, 1971, 1983 ಮತ್ತು 1998ರಲ್ಲಿ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದಿದೆ. ಆದರೆ ಇದೀಗ ಟ್ರಂಪ್ ಬೆಂಬಲಿಗರು ನಡೆಸಿರುವ ದಾಳಿ ಅಮೆರಿಕದ ಮಾನ ಹರಾಜು ಹಾಕಿದೆ. ಹಾಗೇ ಈ ದಾಳಿ ಅಮೆರಿಕ ಇತಿಹಾಸದ ಪುಟ ಸೇರಿದೆ.

English summary
American investigation agencies arrested several over capital hill riot, those are including state Lawmakers and Olympic gold medalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X