ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'cut, copy and paste'ಜನಕ ವಿಜ್ಞಾನಿ ಲ್ಯಾರಿ ಟೆಸ್ಲರ್​ ಇನ್ನಿಲ್ಲ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 20: ಕಂಪ್ಯೂಟರ್​ ಕೀಲಿ ಮಣೆಯಲ್ಲಿ ಬಹುಶಃ ಅತಿ ಹೆಚ್ಚು ಬಳಕೆಯಾಗುವ 'cut, copy and paste' ಪ್ರಕ್ರಿಯೆಗೆ ನಾಂದಿ ಹಾಡಿದ, ಬ್ರೌಸರ್ ಎಂಬ ಪದ ಹುಟ್ಟು ಹಾಕಿದ ವಿಜ್ಞಾನಿ ಲ್ಯಾರಿ ಟೆಸ್ಲರ್​ (74) ಗುರುವಾರದಂದು ಮೃತರಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ ಜನಿಸಿದ ಟೆಸ್ಲರ್ ಅವ್ರು ಸ್ಟಾನ್ ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವ್ಯಾಸಂಗ ಮಾಡಿದ್ದರು.

ಕ್ಸೆರಾಕ್ಸ್​ ಪಾಲೋ ಆಲ್ಟೋ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವಾಗ ಕಾಪಿ-ಕಟ್-ಪೇಸ್ಟ್ ಕ್ರಿಯೆಯನ್ನು ಮೊದಲಿಗೆ ಕಂಡು ಹಿಡಿದ ಟೆಸ್ಲರ್, ಆ್ಯಪಲ್​ ಕಂಪ್ಯೂಟರ್​ ಅಭಿವೃದ್ಧಿ ಹಂತದಲ್ಲಿ ಟೆಸ್ಲರ್​ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಂತರ ಸುಮಾರು 20 ವರ್ಷಗಳ ಕಾಲ ಆ್ಯಪಲ್​ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. 1976ರಲ್ಲಿ ಬ್ರೌಸರ್ ಶಬ್ದವನ್ನು ಹುಟ್ಟು ಹಾಕಿದರು.

Larry Tesler, the computer scientist behind cut, copy and paste, dies at 74

1997ರಲ್ಲಿ ಆ್ಯಪಲ್​ ಸಂಸ್ಥೆಯನ್ನು ತೊರೆದು, ಯಾಹೂ ನಂತರ ಅಮೆಜಾನ್​ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಟೆಸ್ಲರ್ ನಿಧನಕ್ಕೆ ಟೆಕ್ ಲೋಕದ ದಿಗ್ಗಜ ಸಂಸ್ಥೆಗಳಾದ ಕ್ಸೆರಾಕ್ಸ್​, ಆ್ಯಪಲ್​ ಸೇರಿದಂತೆ ಅನೇಕ ಸಂಸ್ಥೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

English summary
American computer scientist Larry Tesler who worked at Apple, Amazon, Yahoo and Xerox and created computerized cut, copy and paste, passed away aged 74. Born in New York, Tesler studied computer science at Stanford University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X