• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

|

ವಾಷಿಂಗ್ಟನ್, ಜೂನ್ 3: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಅಮೇರಿಕಾದಲ್ಲಿ ಜನಾಂಗೀಯ ಹೋರಾಟ ತಾರಕಕ್ಕೇರಿದೆ. ಕಳೆದ ಒಂದು ವಾರದಿಂದ ಅಮೇರಿಕಾದ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

   Good news to all you beer fans of Karnataka | Brewery | Oneindia kannada

   ಬ್ಲಾಕ್ ಮ್ಯಾನ್ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ 'ಬಿಳಿ' ಪೊಲೀಸರ ಅಟ್ಟಹಾಸದ ವಿರುದ್ಧ ಮೊದಲು ಶಾಂತವಾಗಿ ಆರಂಭವಾದ ಪ್ರತಿಭಟನೆ ಬಳಿಕ ಹಿಂಸಾಚಾರಕ್ಕೆ ತಿರುಗಿತು.

   ಮಿಲಿಟರಿ ನಿಯೋಜಿಸುವುದಾಗಿ ಪ್ರತಿಭಟನಾಕಾರರಿಗೆ ಕಟ್ಟೆಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

   ಹಿಂಸಾತ್ಮಕ ಪ್ರತಿಭಟನೆಯನ್ನು ನಿಯಂತ್ರಿಸಲು.. ಅಮೇರಿಕಾದಲ್ಲಿ ಶಾಂತಿ ಸ್ಥಾಪಿಸಲು.. ಕಾನೂನು ಸುವ್ಯವಸ್ಥೆ ಕಾಪಾಡಲು ಮಿಲಿಟರಿ ನಿಯೋಜಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ ನೀಡಿದ್ದರು. ಸಾಲದಕ್ಕೆ, ಎಲ್ಲಾ ಗವರ್ನರ್ ಗಳಿಗೆ ಪ್ರಾಬಲ್ಯ ಮೆರೆಯುವಂತೆ ಸೂಚಿಸಿದ್ದರು.

   US: ಪ್ರತಿಭಟನಾಕಾರರ ಕಿಚ್ಚಿನಿಂದ 200 ವರ್ಷಗಳ ಐತಿಹಾಸಿಕ ಚರ್ಚ್ ಬೆಂಕಿಗೆ ಆಹುತಿ.!

   ಇದರಿಂದ ಕೆಂಡಾಮಂಡಲರಾಗಿರುವ ಹೂಸ್ಟನ್ ನ ಪೊಲೀಸ್ ಚೀಫ್, ಡೊನಾಲ್ಡ್ ಟ್ರಂಪ್ ಗೆ ''ನಿಮ್ಮ ಬಾಯಿ ಮುಚ್ಚಿ'' ಎಂದಿದ್ದಾರೆ.

   ಪ್ರಾಬಲ್ಯ ಮೆರೆಯಬೇಕು.!

   ಪ್ರಾಬಲ್ಯ ಮೆರೆಯಬೇಕು.!

   ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ''ಎಲ್ಲಾ ಗವರ್ನರ್ ಗಳು 'ಪ್ರಾಬಲ್ಯ' ಮೆರೆಯಬೇಕು. ಡಾಮಿನೇಟ್ ಮಾಡದೇ ಹೋದರೆ, ನಿಮ್ಮ ಸಮಯ ಹಾಳು'' ಎಂದು ಜೂನ್ 1 ರಂದು ಗವರ್ನರ್ ಗಳಿಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದರು.

   'ಬಾಯಿ ಮುಚ್ಚಿ'!

   ಎಲ್ಲಾ ಗವರ್ನರ್ ಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸೂಚನೆಯಿಂದ ಕಣ್ಣು ಕೆಂಪಗೆ ಮಾಡಿಕೊಂಡ ಹೂಸ್ಟನ್ ನ ಪೊಲೀಸ್ ಚೀಫ್ ಆರ್ಟ್ ಅಸೆವೆಡೊ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಗೆ ''ನಿಮ್ಮ ಬಾಯಿ ಮುಚ್ಚಿ'' ಎಂದಿದ್ದಾರೆ.

   ವಿಶ್ವದ ದೊಡ್ಡಣ್ಣ.. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋಗಿ ಹೋಗಿ ಹೀಗೆ ಮಾಡೋದಾ?

   ''ರಾಷ್ಟ್ರದ ಎಲ್ಲಾ ಪೊಲೀಸ್ ಚೀಫ್ ಗಳ ಪರವಾಗಿ ಇದನ್ನ ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷರಿಗೆ ಹೇಳಲೇಬೇಕು. ರಚನಾತ್ಮಕ ವಿಷಯವನ್ನು ಹಂಚಿಕೊಳ್ಳಲು ನಿಮ್ಮ ಬಳಿ ಏನೂ ಇಲ್ಲದಿದ್ದರೆ, ದಯವಿಟ್ಟು ನಿಮ್ಮ ಬಾಯಿ ಮುಚ್ಚಿಕೊಳ್ಳಿ'' ಎನ್ನುವ ಮೂಲಕ ಡೊನಾಲ್ಡ್ ಟ್ರಂಪ್ ವಿರುದ್ಧದ ತಮ್ಮ ಅಸಮಾಧಾನವನ್ನು ಹೂಸ್ಟನ್ ನ ಪೊಲೀಸ್ ಚೀಫ್ ಆರ್ಟ್ ಅಸೆವೆಡೊ ಹೊರಹಾಕಿದ್ದಾರೆ.

   ಪ್ರಾಬಲ್ಯ ಮರೆಯುವ ಸ್ಥಿತಿ ಇಲ್ಲ.!

   ಪ್ರಾಬಲ್ಯ ಮರೆಯುವ ಸ್ಥಿತಿ ಇಲ್ಲ.!

   ''ಪ್ರಾಬಲ್ಯ ಮರೆಯುವ ಪರಿಸ್ಥಿತಿ ಈಗಿಲ್ಲ. ನಾವೀಗ ಜನರ ಮನಸ್ಸು, ಹೃದಯವನ್ನು ಗೆಲ್ಲಬೇಕಾಗಿದೆ. ದಯವಿಟ್ಟು ಯುವ ಜನರ ಪ್ರಾಣವನ್ನು ಪಣಕ್ಕೆ ಇಡಬೇಡಿ'' ಎಂದು ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಗೆ ಹೂಸ್ಟನ್ ನ ಪೊಲೀಸ್ ಚೀಫ್ ಆರ್ಟ್ ಅಸೆವೆಡೊ ಕೇಳಿಕೊಂಡಿದ್ದಾರೆ.

   ಮಂಡಿಯೂರಿದ್ದ ಪೊಲೀಸರು

   ಮಂಡಿಯೂರಿದ್ದ ಪೊಲೀಸರು

   ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ಪ್ರಾರಂಭವಾದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ, ಪ್ರತಿಭಟನಾಕಾರರ ಮುಂದೆ ಪೊಲೀಸರು ಮಂಡಿಯೂರಿದ್ದರು.

   ಪ್ರತಿಭಟನಾಕಾರರೊಂದಿಗೆ ಪೊಲೀಸರು ಕೂಡ ಒಗ್ಗಟ್ಟು ಪ್ರದರ್ಶಿಸಿ, ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿದ್ದರು.

   ಕ್ಯಾಲಿಫೋರ್ನಿಯಾದ ಗವರ್ನರ್ ಸೇರಿದಂತೆ ಹಲವು ಗವರ್ನರ್ ಗಳು ಕೂಡ ಡೊನಾಲ್ಡ್ ಟ್ರಂಪ್ ನೀಡಿದ 'ಪ್ರಾಬಲ್ಯ' ಮೆರೆಯುವ ಕರೆಯನ್ನು ತಿರಸ್ಕರಿಸಿದ್ದಾರೆ.

   ಮಿಲಿಟರಿ ನಿಯೋಜಿಸುವುದಾಗಿ ತಿಳಿಸಿದ್ದ ಟ್ರಂಪ್

   ಮಿಲಿಟರಿ ನಿಯೋಜಿಸುವುದಾಗಿ ತಿಳಿಸಿದ್ದ ಟ್ರಂಪ್

   ಹಿಂಸಾತ್ಮಕ ಪ್ರತಿಭಟನೆಯನ್ನು ನಿಲ್ಲಿಸಲು ಮಿಲಿಟರಿ ನಿಯೋಜಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ವೈಟ್ ಹೌಸ್ ನ ರೋಸ್ ಗಾರ್ಡನ್ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವಾಗ ''ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ನಾಚಿಕೆಗೇಡು'' ಎಂದಿದ್ದರು ಡೊನಾಲ್ಡ್ ಟ್ರಂಪ್.

   ಇದಕ್ಕೂ ಮುನ್ನ ವೈಟ್ ಹೌಸ್ ಮುಂದೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದಾಗ, ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನ ಅಂಡರ್ ಗ್ರೌಂಡ್ ಬಂಕರ್ ಗೆ ಕರೆದೊಯ್ದದ್ದರು. ಬಂಕರ್ ನಲ್ಲೇ ಸುಮಾರು ಒಂದು ಗಂಟೆ ಕಾಲ ಡೊನಾಲ್ಡ್ ಟ್ರಂಪ್ ಅಡಗಿ ಕುಳಿತಿದ್ದರು ಎನ್ನಲಾಗಿದೆ.

   ಜಾರ್ಜ್ ಫ್ಲಾಯ್ ಸಾವು ಸಂಭವಿಸಿದ್ದು ಹೇಗೆ.?

   ಜಾರ್ಜ್ ಫ್ಲಾಯ್ ಸಾವು ಸಂಭವಿಸಿದ್ದು ಹೇಗೆ.?

   ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

   ''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

   ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

   ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಬಲವಾಗಿ ಮಂಡಿಯೂರಿ ಕ್ರೌರ್ಯ ಮೆರೆದಿದ್ದ 'ಬಿಳಿ' ಪೊಲೀಸ್ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಹಾಕಿ ಬಂಧಿಸಲಾಗಿದೆ. ಹಾಗೇ, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

   English summary
   Keep your Mouth Shut: Houston Police Chief Responds to US President Donald Trump's 'Dominate' advise for all the Governors.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more