ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀನ್ ಪಿಯೆರೆ: ವೈಟ್‌ಹೌಸ್ ಪ್ರೆಸ್ ಸೆಕ್ರೆಟರಿಯಾದ ಮೊದಲ ಕಪ್ಪು ಮಹಿಳೆ

|
Google Oneindia Kannada News

ವಾಷಿಂಗ್ಟನ್, ಮೇ 6: ಅಮೆರಿಕ ಅಧ್ಯಕ್ಷರ ಅಧಿಕೃತ ಗೃಹಕಚೇರಿಯಾಗಿರುವ ವೈಟ್‌ಹೌಸ್‌ನ ವಕ್ತಾರರಾಗಿ ಕರೈನ್ ಜೀನ್-ಪಿಯೆರೆ (Karine Jean-Pierre) ಅವರನ್ನ ಆಯ್ಕೆ ಮಾಡಲಾಗಿದೆ. ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಜೀನ್ ಪಿಯೆರೆ ಅವರನ್ನ ಈಗ ಮುಖ್ಯ ಪತ್ರಿಕಾ ಕಾರ್ಯದರ್ಶಿಯಾಗಿ (Principal Press Secretary) ಬಡ್ತಿ ಕೊಡಲಾಗಿದೆ. ಜೆನ್ ಸಾಕಿ ಅವರ ಸ್ಥಾನವನ್ನು ಪಿಯೆರೆ ತುಂಬಲಿದ್ಧಾರೆ. ಶ್ವೇತ ಭವನದ ವಕ್ತಾರ ಸ್ಥಾನ ಅಲಂಕರಿಸಿದ ಕಪ್ಪು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕರೈನ್ ಜೀನ್-ಪಿಯೆರೆ ಅವರದ್ದಾಗಿದೆ. ಹಾಗೆಯೇ, ಕರೈನ್ ಜೀನ್ ಪಿಯೆರೆ ಸಲಿಂಗಿಯೂ ಆಗಿದ್ದು ವೈಟ್ ಹೌಸ್ ವಕ್ತಾರೆಯಾದ ಮೊದಲ ಎಲ್‌ಜಿಬಿಟಿ ವ್ಯಕ್ತಿಯೂ ಎನಿಸಿದ್ದಾರೆ.

ಜೆನ್ ಸಾಕಿ ಇದೇ ತಿಂಗಳ 13ರಂದು ವಕ್ತಾರ ಸ್ಥಾನದಿಂದ ಕೆಳಗಿಳಿಯಲಿದ್ದು, ಆ ಬಳಿಕ ಕರೈನ್ ಜೀನ್-ಪಿಯೆರೆ ಆ ಸ್ಥಾನ ವಹಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಉಪ ಮಾಧ್ಯಮ ಕಾರ್ಯದರ್ಶಿಯಾಗಿದ್ದುಕೊಂಡು ಜೆನ್ ಸಾಕಿ ಅವರ ಕೆಲಸಗಳನ್ನು ಬದಿಯಲ್ಲಿದ್ದು ನೋಡಿಕೊಂಡು ಬಂದಿದ್ದ ಜೀನ್ ಪಿಯೆರೆಗೆ ತಾನೇ ಖುದ್ದಾಗಿ ಮಾಧ್ಯಮಗಳಿಗೆ ಬ್ರೀಫಿಂಗ್ ಮಾಡುವ ಅವಕಾಶ ಸಿಗುತ್ತಿದೆ.

ಟ್ವಿಟ್ಟರ್‌ನಲ್ಲಿ 130 ಕೋಟಿ ಸಂಬಳ ಪಡೆಯುವ ವಿಜಯಾ ಗದ್ದೆ; ಮಸ್ಕ್ ಪ್ರವೇಶದ ಬಳಿಕ ಗದ್ದೆ ಕೆಲಸ ಉಳಿಯುತ್ತಾ? ಟ್ವಿಟ್ಟರ್‌ನಲ್ಲಿ 130 ಕೋಟಿ ಸಂಬಳ ಪಡೆಯುವ ವಿಜಯಾ ಗದ್ದೆ; ಮಸ್ಕ್ ಪ್ರವೇಶದ ಬಳಿಕ ಗದ್ದೆ ಕೆಲಸ ಉಳಿಯುತ್ತಾ?

ಶ್ವೇತ ಭವನದ ಪ್ರೆಸ್ ಸೆಕ್ರೆಟರಿ ಸ್ಥಾನದ ಕೆಲದ ಸುಲಭದ್ದಲ್ಲ. ಅಮೆರಿಕ ಅಧ್ಯಕ್ಷರು ಮತ್ತು ಆಡಳಿತದ ಸಂದೇಶಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವುದು ಇವರ ಕೆಲಸ. ಅಮೆರಿಕ ಅಧ್ಯಕ್ಷರ ಅಧಿಕೃತ ವಕ್ತಾರರಾಗಿ ಇವರು ಮಾಧ್ಯಮಗಳಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ರವಾನಿಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ.

Karine Jean-Pierre, the first black and LGBT to become White House Press Secretary

44 ವರ್ಷದ ಜೀನ್ ಪಿಯೆರೆ ಅವರು ಉಪ ವಕ್ತಾರೆಯಾಗಿ ಕೆಲಸ ಮಾಡಿರುವುದರಿಂದ ವಕ್ತಾರ ಸ್ಥಾನದ ಒತ್ತಡ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆನ್ನಲಾಗಿದೆ. ಈ ಹಿಂದೆ ಅವರು ಅನೇಕ ಸಂದರ್ಭಗಳಲ್ಲಿ ಮಾಧ್ಯಮಗೋಷ್ಠಿಗಳನ್ನ ನಡೆಸಿದ ಅನುಭವ ಹೊಂದಿದ್ದಾರೆ.

ಅಮೆರಿಕದಲ್ಲಿ ವರ್ಕ್ ಪರ್ಮಿಟ್ ಅವಧಿ ಒಂದೂವರೆ ವರ್ಷ ವಿಸ್ತರಣೆಅಮೆರಿಕದಲ್ಲಿ ವರ್ಕ್ ಪರ್ಮಿಟ್ ಅವಧಿ ಒಂದೂವರೆ ವರ್ಷ ವಿಸ್ತರಣೆ

ಭಾವುಕಳಾದ ಜೀನ್ ಪಿಯೆರೆ:
ವ್ಹೈಟ್ ಹೌಸ್‌ನ ಮಾಧ್ಯಮ ಕಾರ್ಯದರ್ಶಿಯಾಗಿ ಬಡ್ಡಿ ಪಡೆದ ಬಗ್ಗೆ ಜೀನ್ ಪಿಯೆರೆ ಭಾವುಕರಾಗಿದ್ದಾರೆ. "ನಾನು ಈ ಸ್ಥಾನಕ್ಕೆ ಏರಿದ್ದು ಅದೆಷ್ಟೋ ಜನರಿಗೆ ಮತ್ತು ಹಲವು ಸಮುದಾಯಗಳಿಗೆ ಎಷ್ಟು ಮಹತ್ವದ್ದಾಗಿದೆ ಎಂಬುದು ನನಗೆ ಗೊತ್ತು. ಅವರ ನಿರೀಕ್ಷೆಯನ್ನ ಹೊತ್ತುಕೊಂಡಿದ್ದೇನೆ. ನನ್ನ ವೃತ್ತಿಜೀವನದ ಉದ್ದಕ್ಕೂ ಇದೇ ಜವಾಬ್ದಾರಿ ಹೊತ್ತುಕೊಂಡು ಸಾಗಿದ್ದೇನೆ" ಎಂದು ಜೀನ್ ಪಿಯೆರೆ ಹೇಳಿದ್ದಾರೆ.

Karine Jean-Pierre, the first black and LGBT to become White House Press Secretary

"ನಮ್ಮಂಥ ವ್ಯಕ್ತಿಯೊಬ್ಬರು ಅಧ್ಯಕ್ಷರ ವೇದಿಕೆ ಬಳಿ ನಿಂತು ಮಾತನಾಡುವುದನ್ನು ಕಾಣುವ ಕಪ್ಪು ಸಮುದಾಯದ ಪುಟ್ಟ ಮಕ್ಕಳಿಗೆ ಅದೆಷ್ಟು ಖುಷಿಯಾಗಬಹುದು, ಬಲ್ಲೆ.... ನಿಮ್ಮ ಇಚ್ಛೆಯ ಪ್ರಕಾರ ಮುಂದಡಿ ಇಡುತ್ತಾ ಹೋಗಿ. ನೀವು ನಂಬುವುದನ್ನು ಆಚರಿಸಿ. ಅದೇ ನಂಬಿಕೆಯಲ್ಲೇ ಮುಂದುವರಿಯಿರಿ" ಎಂದು ಜೀನ್ ಪಿಯೆರೆ ತಿಳಿಹೇಳಿದ್ಧಾರೆ.

(ಒನ್ಇಂಡಿಯಾ ಸುದ್ದಿ)

English summary
US President Joe Biden on Thursday selected Karine Jean-Pierre, the principal deputy press secretary, to replace Jen Psaki as the top White House spokeswoman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X