• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಎಸ್ ಎಲೆಕ್ಷನ್: ಹಿನ್ನಡೆ ಅನುಭವಿಸಿದ ಗಾಯಕ ಕಾನ್ಯೆ ವೆಸ್ಟ್

|

ವಾಷಿಂಗ್ಟನ್, ಜುಲೈ 21: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿ, ಕಣಕ್ಕಿಳಿದಿರುವ ಜನಪ್ರಿಯ ಗಾಯಕ ಕಾನ್ಯ್ ವೆಸ್ಟ್ ಆರಂಭಿಕ ಆಘಾತ ಎದುರಾಗಿದೆ. ದಕ್ಷಿಣ ಕರೋಲಿನಾದಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬೇಕಾದ ಕಡ್ಡಾಯ 10,000 ಸಹಿಗಳನ್ನು ಪಡೆದುಕೊಳ್ಳುವುದರಲ್ಲಿ ಕಾನ್ಯೆ ವಿಫಲರಾಗಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ದಕ್ಷಿಣ ಕರೊಲಿನಾ ರಾಜ್ಯದ ಚುನಾವಣಾ ಅಧಿಕಾರಿ ಕ್ರಿಸ್ ವ್ಹಿಟ್ ಮಿಟ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕಾನ್ಯೆ ವೆಸ್ಟ್ ಆಗಲಿ ಅವರ ಪ್ರತಿನಿಧಿಗಳಾಗಲಿ ಸೋಮವಾರದ ನಿಗದಿತ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿಲ್ಲ ಎಂದಿದ್ದಾರೆ. ಈ ಕುರಿತಂತೆ ಪ್ರತ್ಯೇಕ ಮನವಿ, ವಿಳಂಬವಾದ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಹೇಳಿದರು.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ವಿರುದ್ಧ ಕಣಕ್ಕೆ ಕೋಟ್ಯಧಿಪತಿ?

ಕಾನ್ಯೆ ವೆಸ್ಟ್ ಭಾನುವಾರದಿಂದ ತಮ್ಮ ಚುನವಣಾ ಪ್ರಚಾರ ಸಮಾವೇಶ ಆರಂಭಿಸಿದ್ದಾರೆ. ಮೊದಲ ಭಾಷಣದಲ್ಲೆ ಭಾವುಕ ಅಂಶಗಳನ್ನು ತುಂಬಿ ಕಣ್ಣೀರಿಟ್ಟಿದ್ದಾರೆ. ದಕ್ಷಿಣ ಕರೊಲಿನಾದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮತದಾರರ ಬಳಿ ಪಿಟೀಷನ್ ಸಹಿ ಮಾಡುವಂತೆ ಜಾಹೀರಾತು ಹೊರಡಿಸಿದ್ದರು. ಈ ರಾಜ್ಯದಲ್ಲಿರುವ ಅಧಿಕೃತ ರಾಜಕೀಯ ಪಕ್ಷಗಳಿಂದ ನಾಮಾಂಕಿತಗೊಂಡರೆ ಮಾತ್ರ ಕಾನ್ಯೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವಕಾಶವಿತ್ತು.

ಟೆಕ್ಸಾಸ್ ನಲ್ಲೂ ಇದೇ ರೀತಿ ಅವಕಾಶ ತಪ್ಪಿಸಿಕೊಂಡ ಕಾನ್ಯೆಗೆ ಒಕ್ಲಾಹೋಮಾದಲ್ಲಿ ಬ್ಯಾಲೆಟ್ ಸಿಕ್ಕಿದೆ. ಈ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ ಕಾನ್ಯೆ ತಾವು ಕೂಡಾ ಅಭ್ಯರ್ಥಿ ಎಂದು ಜುಲೈ 4ರಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ರೂಪದರ್ಶಿ, ನಟಿ, ನಿರ್ಮಾಪಕಿ ಕಿಮ್ ಕರ್ದಶಿಯನ್ ಪತಿ ಕಾನ್ಯೆ ವೆಸ್ಟ್.

English summary
American Rapper Kanye West has failed to submit any of the 10,000 signatures needed to appear in the presidential ballot from South Carolina, Sputnik reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X