ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲೂ ಭಾರತೀಯರ ಹವಾ ಶುರು..! ಅಮೆರಿಕದ ಕಿಲಾಡಿ ಜೋಡಿ ಇವರು..!

|
Google Oneindia Kannada News

ಭಾರತ ಮೂಲದ ನಂಟು ಹೊಂದಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕ ಕಾಂಗ್ರೆಸ್‌ ಸ್ಪೀಕರ್ ನ್ಯಾನ್ಸಿ ಪೆಲೋಸಿ ಜೊತೆ ವೇದಿಕೆ ಹಂಚಿಕೊಳ್ಳುವ ಮೂಲಕ ಕಮಲಾ ಹ್ಯಾರಿಸ್ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾದರು.

ಜೋ ಬೈಡನ್‌ರ ಸರ್ಕಾರ ಅಮೆರಿಕದಲ್ಲಿ ಅಧಿಕಾರ ಹಿಡಿದು 100 ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜೋ ಬೈಡನ್ ಅಮೆರಿಕ ಕಾಂಗ್ರೆಸ್‌ ಉದ್ದೇಶಿಸಿ ಮೊದಲ ಭಾಷಣವನ್ನು ಮಾಡಿದರು.

ಈ ವೇಳೆ ಕಮಲಾ ಹ್ಯಾರಿಸ್ ಮತ್ತು ಸ್ಪೀಕರ್ ನ್ಯಾನ್ಸಿ ಪೆಲೋಸಿ ಒಟ್ಟಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಿಂದೆ ಕುಳಿತಿದ್ದರು. ಸಾಮಾನ್ಯವಾಗಿ ಅಧ್ಯಕ್ಷರು ಅಮೆರಿಕನ್ ಕಾಂಗ್ರೆಸ್‌ನ ಉದ್ದೇಶಿಸಿ ಮಾತನಾಡುವ ವೇಳೆ, ಸ್ಪೀಕರ್ ಮತ್ತು ಅಮೆರಿಕದ ಉಪಾಧ್ಯಕ್ಷರು ಹಿಂದೆ ಕೂರುವುದು ವಾಡಿಕೆ.

ಆದರೆ ಮೊಲದ ಬಾರಿಗೆ ಇಬ್ಬರು ಮಹಿಳೆಯರು ಈ ಸ್ಥಾನ ಅಲಂಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಅಲ್ಲದೆ ಕಮಲಾ ಹ್ಯಾರಿಸ್ ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿಶಿಷ್ಟವಾಗಿ ಶುಭಕೋರುವ ಮೂಲಕ ಗಮನ ಸೆಳೆದರು. ಇಡೀ ಜಗತ್ತಿನ ಗಮನ ನಿನ್ನೆ ಅಮೆರಿಕದ ಸಂಸತ್ ಸಭೆಯ ಮೇಲೆ ಕೇಂದ್ರಿಕೃತವಾಗಿತ್ತು.

ಬೈಡನ್ ಸ್ವಾಭಿಮಾನದ ಪಾಠ

ಬೈಡನ್ ಸ್ವಾಭಿಮಾನದ ಪಾಠ

100 ದಿನ ಪೂರೈಸಿದ ಸರ್ಕಾರದ ಬಗ್ಗೆ ಮಾತನಾಡಿದ ಅಧ್ಯಕ್ಷ ಬೈಡನ್, ಕೊರೊನಾ ವಿರುದ್ಧದ ಹೋರಾಟದ ಬಗ್ಗೆ ಅಮೆರಿಕನ್ನರಿಗೆ ಧೈರ್ಯ ತುಂಬಿದರು. ಈ ಸಂಕಷ್ಟದ ಸ್ಥಿತಿಯಿಂದ ನಾವು ಆದಷ್ಟು ಬೇಗ ಹೊರಬಂದು, ಮತ್ತೆ ಪವರ್‌ಫುಲ್ ಆಗಲಿದ್ದೇವೆ ಎಂದರು. ತಮ್ಮ ಆಡಳಿತ ಶುರುವಾದ ನಂತರ ಅಮೆರಿಕನ್ನರಿಗೆ ನೀಡಿರುವ ಆಶ್ವಾಸನೆ ಈಡೇರಿಸಿದ ಬಗ್ಗೆ ಬೈಡನ್ ವಿವರಣೆ ನೀಡಿದರು. ಹಾಗೇ ವ್ಯಾಕ್ಸಿನ್ ಮಹತ್ವದ ಬಗ್ಗೆ ಜನರಲ್ಲಿ ಜೋ ಬೈಡನ್ ಅರಿವು ಮೂಡಿಸಿದರು. ಒಟ್ಟಾರೆ ಬೈಡನ್‌ ಸರ್ಕಾರದ 100ನೇ ದಿನದ ಭಾಷಣ ವಿಶಿಷ್ಟವಾಗಿತ್ತು.

ಅಮೆರಿಕದ ಗಟ್ಟಿಗಿತ್ತಿ ಪೆಲೋಸಿ

ಅಮೆರಿಕದ ಗಟ್ಟಿಗಿತ್ತಿ ಪೆಲೋಸಿ

ಪ್ರತಿ ಹಂತದಲ್ಲೂ ಟ್ರಂಪ್ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಗಟ್ಟಿಗಿತ್ತಿ ಪೆಲೋಸಿ. ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರು. ಒಂದಲ್ಲ ಎರಡೆರಡು ಬಾರಿ ಟ್ರಂಪ್‌ರ ವಿರುದ್ಧ ವಾಗ್ದಂಡನೆ ಯುದ್ಧದಲ್ಲಿ ಗೆದ್ದಿದ್ದರು. ಆದರೆ ಸೆನೆಟ್‌ನಲ್ಲಿ ಬಹುಮತ ಸಿಗದೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೋತಿದ್ದರು ಹಿಂಜರಿಯಲಿಲ್ಲ. ಪೆಲೋಸಿ ಹವಾ ಹೇಗಿದೆ ಎಂದರೆ, ಖುದ್ದು ರಿಪಬ್ಲಿಕನ್ ಸದಸ್ಯರು ಪೆಲೋಸಿ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ. ಕೆಲವು ಟ್ರಂಪ್ ಬೆಂಬಲಿಗರು ಕೂಡ ಪೆಲೋಸಿ ಮಾತಿನಿಂದ ಬದಲಾಗಿರುವ ಉದಾಹರಣೆ ಕೂಡಿ ಇದೆ.

ಸೋತರೂ ಗೆದ್ದಿದ್ದ ಪೆಲೋಸಿ..!

ಸೋತರೂ ಗೆದ್ದಿದ್ದ ಪೆಲೋಸಿ..!

ಕೆಳಮನೆಯಲ್ಲಿ ವಾಗ್ದಂಡನೆ ಗೆದ್ದರೂ, ಸೆನೆಟ್‌ನಲ್ಲಿ ಟ್ರಂಪ್‌ಗೆ ಗೆಲುವು ಸಿಕ್ಕಿತ್ತು. ಆದರೆ ಸೋತರೂ ಗೆದ್ದಿದ್ದು ನ್ಯಾನ್ಸಿ ಪೆಲೋಸಿ. ಹೀಗಾಗಿ ಟ್ರಂಪ್ ಹಾಗೂ ಪೆಲೋಸಿ ನಡುವೆ ದೊಡ್ಡ ಜಗಳವೇ ನಡೆಯುತ್ತಿತ್ತು. ಇದು ಸಹಜವಾಗಿ ಟ್ರಂಪ್ ಬೆಂಬಲಿಗರನ್ನ ಕೆರಳಿಸಿತ್ತು. ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಪೆಲೋಸಿ ಕಚೇರಿಯನ್ನೇ ಟ್ರಂಪ್ ಬೆಂಬಲಿಗ ಪಡೆ ಟಾರ್ಗೆಟ್ ಮಾಡಿತ್ತು. ಪೆಲೋಸಿ ಕಚೇರಿ ಕೊಠಡಿಗೆ ನುಗ್ಗಿದ ಕಿರಾತಕನೊಬ್ಬ ಸಿಗರೇಟ್ ಸೇದಿದ್ದೂ ಅಲ್ಲದೆ, ದಾಖಲೆಗಳನ್ನು ಚೆಲ್ಲಾಡಿ ಬಂದಿದ್ದಾನೆ. ಬಳಿಕ ಕಚೇರಿಗೆ ಇನ್ನಷ್ಟು ಜನ ನುಗ್ಗಿ, ಕಚೇರಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದರು.

ಕಮಲಾ ಸಾಧನೆ ಅವಿಸ್ಮರಣೀಯ

ಕಮಲಾ ಸಾಧನೆ ಅವಿಸ್ಮರಣೀಯ

ಅಮೆರಿಕ ಎಂದರೆ ಕೈಗೆಟುಕದ ಕುಸುಮ ಎಂಬ ಕಾಲವೊಂದಿತ್ತು. ಆದರೆ ಈಗ ಮಾತು ಬದಲಾಗಿದೆ. ಅದನ್ನು ಸಾಧಿಸಿದ್ದು ಕಮಲಾ ಹ್ಯಾರಿಸ್. ಭಾರತದ ತಮಿಳುನಾಡು ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಇದೀಗ ಅಮೆರಿಕದ ಉಪಾಧ್ಯಕ್ಷೆ. ಈ ಮೂಲಕ ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯರಿಗೆ ಇಂತಹದ್ದೊಂದು ದೊಡ್ಡ ಅವಕಾಶ ಸಿಕ್ಕಂತಾಗಿದೆ. ಬೈಡನ್ ಗೆಲುವಲ್ಲಿ ಕಮಲಾ ಹ್ಯಾರಿಸ್ ಆಯ್ಕೆ ಪರಿಣಾಮ ದೊಡ್ಡದಿದೆ. ಹೇಗೆಂದರೆ ಕಮಲಾ ಹ್ಯಾರಿಸ್ ತಾಯಿ ಭಾರತ ಮೂಲದವರು ಹಾಗೂ ಅವರ ತಂದೆ ಜಮೈಕನ್ ಆಗಿದ್ದು, ಇದೇ ಕಾರಣಕ್ಕೆ ಒಂದು ಕಡೆ ಭಾರತೀಯರ ಮತ ಹಾಗೂ ಮತ್ತೊಂದ್ಕಡೆ ಆಫ್ರಿಕನ್-ಅಮೆರಿಕನ್ಸ್ ಮತಗಳನ್ನು ಬೈಡನ್ ಕೊಳ್ಳೆ ಹೊಡೆದರು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಲಾಗುತ್ತದೆ.

English summary
Kamala & Nancy Pelosi has created history after sitting together in US the Congress session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X