ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 30: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟಿವಿ ನೇರಪ್ರಸಾರದಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಪಡೆಯುವ ಮೂಲಕ ಆಫ್ರಿಕನ್-ಅಮೆರಿಕ ಜನರಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಂಬಿಕೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಜನವರಿ 20 ರಂದು ಅಧಿಕಾರ ಸ್ವೀಕರಿಸಲಿರುವ ಕಮಲಾ ಹ್ಯಾರಿಸ್ , ಅಮೆರಿಕದ ಮೊದಲ ಇಂಡೋ-ಅಮೆರಿಕನ್ ಉಪಾಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಮೊದಲ ಮಹಿಳಾ ಉಪಾಧ್ಯಕ್ಷೆಯೂ ಕೂಡ ಇವರಾಗಿದ್ದಾರೆ.

ರೂಪಾಂತರಿತ ವೈರಸ್‌ ವಿರುದ್ಧ ಯಾವ ಲಸಿಕೆಗಳೂ ಪರಿಣಾಮಕಾರಿಯಲ್ಲ ಎನ್ನಲು ಆಧಾರವಿಲ್ಲ: ಸರ್ಕಾರರೂಪಾಂತರಿತ ವೈರಸ್‌ ವಿರುದ್ಧ ಯಾವ ಲಸಿಕೆಗಳೂ ಪರಿಣಾಮಕಾರಿಯಲ್ಲ ಎನ್ನಲು ಆಧಾರವಿಲ್ಲ: ಸರ್ಕಾರ

ಆಫ್ರಿಕನ್-ಅಮೆರಿಕನ್ ಜನಸಂಖ್ಯೆ ಹೆಚ್ಚಾಗಿರುವ ವಾಷಿಂಗ್ಟನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ತೊಟ್ಟಿದ್ದ ಕಮಲಾ ಹ್ಯಾರಿಸ್ ತಮ್ಮ ಮೊದಲ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.

Kamala Harris Vaccinated On Camera, Urges Public To Trust Process

ನಿಮ್ಮ ಸಮುದಾಯದಲ್ಲಿಯೇ ನೀವು ಲಸಿಕೆ ತೆಗೆದುಕೊಳ್ಳಬಹುದು ಎಂದು ಜನರಿಗೆ ಹೇಳಲು ಬಯಸುತ್ತೇನೆ, ಅಲ್ಲಿ ನಿಮಗೆ ತಿಳಿದಿರುವ ಜನರಿಂದಲೇ ನೀವು ಲಸಿಕೆಯನ್ನು ಸ್ವೀಕರಿಸುತ್ತೀರಿ ಎಂದು ಹೇಳಿದ್ದಾರೆ.

ದೇಶಾದ್ಯಂತ ಆಫ್ರಿಕನ್-ಅಮೆರಿಕನ್ ಸಮುದಾಯವು ಕೊರೊನಾ ಸೋಂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ಹಾಗೂ ಅನಾರೋಗ್ಯವನ್ನು ಕಂಡಿದೆ. ಇದು ಆದಷ್ಟು ಬೇಗ ಲಸಿಕೆ ನಿರೀಕ್ಷೆಯಲ್ಲಿದ್ದ ಸಮುದಾಯ ಎಂದು ಸಮೀಕ್ಷೆ ಕೂಡ ಹೇಳಿತ್ತು.

ಆಫ್ರಿಕನ್-ಅಮೆರಿಕನ್ ಜನಸಂಖ್ಯೆ ಹೆಚ್ಚಿರುವ ವಾಷಿಂಗ್ಟನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ಮೊದಲ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದಾರೆ. ಈ ರೂಪಾಂತರಿ ಕೊರೊನಾ ಸೋಂಕು ಇತರೆ ಸೋಂಕುಗಳಿಗಿಂತ ಹೆಚ್ಚು ಅನಾರೋಗ್ಯವನ್ನು ಸೃಷ್ಟಿಸುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡ ಹೊಸಮಾದರಿಯ ವೈರಸ್ ವೇಗವಾಗಿ ಹರಡಬಹುದು ಎಂಬ ವಿಜ್ಞಾನಿಗಳ ಹೇಳಿಕೆ ಬೆನ್ನಲ್ಲೇ ಇತರೆ ದೇಶಗಳು ಬ್ರಿಟನ್‌ನಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿವೆ. ಈ ಮಧ್ಯೆ, ಭಾರತವು ಸೇರಿದಂತೆ ಹಲವು ದೇಶಗಳಲ್ಲಿ ಹೊಸ ಮಾದರಿಯ ಸೋಂಕು ಪತ್ತೆಯಾಗಿದದೆ.

ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್ ಬೇರೆ ಮಾದರಿಯ ಕೊರೊನಾ ಸೋಂಕಿಗಿಂತ ಹೆಚ್ಚು ಅನಾರೋಗ್ಯವನ್ನು ಸೃಷ್ಟಿಸುವುದಿಲ್ಲ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಇಲಾಖೆ ಮಾಡಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

ತೃಪ್ತಿಕರ ವ್ಯತ್ಯಾಸಗಳು ಕಂಡುಬಂದಿಲ್ಲ. ಇತರೆ ಕೊರೊನಾ ಸೋಂಕುಗಳೊಂದಿಗೆ ಹೋಲಿಸಿದರೆ ಹೊಸ ರೂಪಾಂತರಿತ ವೈರಸ್‌ನಲ್ಲಿ ಯಾವುದೇ ದೊಡ್ಡ ವ್ಯತ್ಯಾಸಗಳಿಲ್ಲ ಎಂದು ಹೇಳಲಾಗಿದೆ.

English summary
US Vice President-elect Kamala Harris received her Covid vaccine live on television Tuesday and urged public trust in the process, while her choice of hospital highlighted the plight of the hard-hit African-American community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X