ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲಾ ಹ್ಯಾರಿಸ್ ಆಯ್ಕೆ ಐತಿಹಾಸಿಕವೆಂದ ಭಾರತೀಯ ಸಂಬಂಧಿ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 13: ಅಮೆರಿಕದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡಿರುವುದು ಐತಿಹಾಸಿಕ ನಿರ್ಧಾರ ಇದರಲ್ಲಿ ಅಚ್ಚರಿಯೇನೂ ಇಲ್ಲ ಆದರೆ ಹೆಮ್ಮೆ ಪಡುವಂತಹ ವಿಚಾರ ಎಂದು ಕಮಲಾ ಹ್ಯಾರಿಸ್ ಸಂಬಂಧಿ ಹೇಳಿದ್ದಾರೆ.

ಗೋಪಾಲನ್ ಬಾಲಚಂದ್ರನ್ ಮಾತನಾಡಿ, ಒಂದೊಮ್ಮೆ ಕಮಲಾ ಹ್ಯಾರಿಸ್ ಆ ಹುದ್ದೆಗೇರಿದರೆ ಅಮೆರಿಕದಲ್ಲಿ ಭಾರತೀಯರಿಗೂ ಸಾಕಷ್ಟು ಅವಕಾಶಗಳು ಬರಲಿವೆ. ನಮ್ಮ ಕುಟುಂಬ ಹೆಮ್ಮೆ ಪಡುತ್ತಿದೆ.

ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!

ಆಕೆಯ ತಾಯಿ ಜೀವಂತವಾಗಿದ್ದರೆ ಆಕೆಯ ಸಾಧನೆಯನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದರು, ಆಕೆಯ ಹೆಸರು ನಾಮನಿರ್ದೇಶನವಾಗಿದ್ದು ಆಶ್ಚರ್ಯವನ್ನೇನೂ ಉಂಟು ಮಾಡಿಲ್ಲ ಎಂದರು.

ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಮಹಿಳೆ: ಯಾರು ಈ ಕಮಲಾ ಹ್ಯಾರಿಸ್?ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಮಹಿಳೆ: ಯಾರು ಈ ಕಮಲಾ ಹ್ಯಾರಿಸ್?

ಅಮೆರಿಕದ ಜನಸಂಖ್ಯೆಯಲ್ಲಿ ಭಾರತ ಮೂಲದವರ ಪ್ರಮಾಣ ಶೇ.1ಕ್ಕಿಂತಲೂ ಸ್ವಲ್ಪ ಹೆಚ್ಚು, ಹಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ರಾಜಕೀಯದಲ್ಲಿ ಈ ಸಮುದಾಯದ ಭಾಗವಹಿಸುವಿಕೆ ಪ್ರಬಲ್ಯ ಹೆಚ್ಚುತ್ತಲೇ ಇದೆ. ಸಕ್ರಿಯ ರಾಜಕೀಯದಲ್ಲಿ ಭಾಗಿಯಾಗುವಿಕೆ ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಚಾರದಲ್ಲಿ ಇದು ವ್ಯಕ್ತವಾಗುತ್ತಿದೆ.

ಹಲವು ಪ್ರಥಮಗಳಿಗೆ ಸಾಕ್ಷಿಯಾದ ಕಮಲಾ ಹ್ಯಾರಿಸ್

ಹಲವು ಪ್ರಥಮಗಳಿಗೆ ಸಾಕ್ಷಿಯಾದ ಕಮಲಾ ಹ್ಯಾರಿಸ್

ಸಾರ್ವಜನಿಕ ಜೀವನದಲ್ಲಿ, ಆಡಳಿತದಲ್ಲಿ ಪಳಗಿದವರು ಕಮಲಾ ಹ್ಯಾರಿಸ್. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜಿಲ್ಲಾ ಅಟಾರ್ನಿಯಾಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಭಾರತೀಯ ಮೂಲದ ಮಹಿಳೆ.

ಕಮಲಾ ಹ್ಯಾರಿಸ್ ನಾಮನಿರ್ದೇಶನ

ಕಮಲಾ ಹ್ಯಾರಿಸ್ ನಾಮನಿರ್ದೇಶನ

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ 78 ವರ್ಷದ ಜೊ ಬಿಡನ್ ನಿನ್ನೆ ತಮ್ಮ ಉಪಾಧ್ಯಕ್ಷ ಹುದ್ದೆಗೆ ಭಾರತೀಯ ಮೂಲದ ಸೆನೆಟರ್ ಕಮಲಾ ದೇವಿ ಹ್ಯಾರಿಸ್ ಎಂದು ಘೋಷಿಸಿದರು. ಈ ಮೂಲಕ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಮೊದಲ ಕಪ್ಪುವರ್ಣ ಮಹಿಳೆ ಕಮಲಾ ಹ್ಯಾರಿಸ್.ಅಮೆರಿಕ ಅಧ್ಯಕ್ಷೀಯ ಚುನಾವಣೆ ಬರುವ ನವೆಂಬರ್ ನಲ್ಲಿ ನಡೆಯಲಿದೆ. ಆಡಳಿತಾರೂಢ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ಹಣಾಹಣಿ,ಚುನಾವಣಾ ಪ್ರಚಾರದ ಕಾವು ದೇಶದಲ್ಲಿ ಕೊವಿಡ್-19 ಮಧ್ಯೆ ಏರುತ್ತಿದೆ.

ಬಹುಮತದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮಹಿಳೆ

ಬಹುಮತದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮಹಿಳೆ

ಪಕ್ಷದಿಂದ ಬಹುಮತದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೂರನೇ ಮಹಿಳೆ ಕ್ಯಾಲಿಫೋರ್ನಿಯಾ ರಾಜ್ಯದ ಸೆನೆಟರ್ ಕಮಲಾ ಹ್ಯಾರಿಸ್. ಈ ಹಿಂದೆ 2008ರಲ್ಲಿ ಅಲಸ್ಕ ಗವರ್ನರ್ ಸಾರಾ ಪಾಲಿನ್ ಮತ್ತು ನ್ಯೂಯಾರ್ಕ್ ರೆಪ್ರೆಸೆಂಟೇಟಿವ್ ಗೆರಲ್ಡಿನ್ ಫೆರ್ರರೊ 1984ರಲ್ಲಿ ಪಕ್ಷಗಳಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಅಧ್ಯಕ್ಷ ಹುದ್ದೆಗಾಗಿ ಪ್ರಚಾರ

ಅಧ್ಯಕ್ಷ ಹುದ್ದೆಗಾಗಿ ಪ್ರಚಾರ

ಈ ಹಿಂದೆ ಕಳೆದ ವರ್ಷ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟು ಕಮಲಾ ಹ್ಯಾರಿಸ್ ಪ್ರಚಾರವನ್ನು ಆರಂಭಿಸಿದ್ದರು. ನಂತರ ತಮ್ಮ ಪ್ರಚಾರವನ್ನು ಮುಂದುವರಿಸಲು ಹಣಕಾಸಿನ ಕೊರತೆಯಿದೆ ಎಂದು ಸ್ಪರ್ಧೆಯಿಂದ ಹಿಂದೆ ಸರಿದರು. ಅಮೆರಿಕ ಸೆನೆಟ್ ನಲ್ಲಿರುವ ಮೂವರು ಏಷ್ಯಾ ಅಮೆರಿಕನ್ ಮಹಿಳೆಯರಲ್ಲಿ ಕಮಲಾ ಹ್ಯಾರಿಸ್ ಒಬ್ಬರಾಗಿದ್ದಾರೆ ಮತ್ತು ಮೊದಲ ಭಾರತೀಯ ಮೂಲದ ಅಮೆರಿಕದ ಸೆನೆಟರ್ ಕೂಡ ಆಗಿದ್ದಾರೆ.

ಕಮಲಾ ಹ್ಯಾರಿಸ್ ಪರಿಚಯ

ಕಮಲಾ ಹ್ಯಾರಿಸ್ ಪರಿಚಯ

ಭಾರತೀಯ ಮೂಲದ ಮಹಿಳೆ. ಇವರ ತಂದೆ ಡೊನಾಲ್ಡ್ ಹ್ಯಾರಿಸ್ ಆಫ್ರಿಕಾದ ಜಮೈಕಾದವರು, ತಾಯಿ ಶ್ಯಾಮಲಾ ಗೋಪಾಲನ್ ಕ್ಯಾನ್ಸರ್ ಸಂಶೋಧಕಿ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ್ತಿ, ಭಾರತದ ಚೆನ್ನೈ ಮೂಲದವರು. ಆದರೆ ಕಮಲಾ ಹ್ಯಾರಿಸ್ ತಮ್ಮನ್ನು ತಾವು ಅಮೆರಿಕನ್ ಎಂದು ಗುರುತಿಸಿಕೊಳ್ಳುತ್ತಾರೆ.

ಕಮಲಾ ಹ್ಯಾರಿಸ್ ಪೋಷಕರು ವಿಚ್ಚೇದನ ಪಡೆದಿದ್ದರು. ನಂತರ ತಾಯಿಯ ಆಶ್ರಯದಲ್ಲಿಯೇ ಬೆಳೆದರು. ಆಕೆಯ ತಾಯಿ ಕಪ್ಪು ವರ್ಣದ ಸಂಪ್ರದಾಯ ಅಳವಡಿಸಿಕೊಂಡು ಅದರಂತೆ ತನ್ನಿಬ್ಬರು ಪುತ್ರಿಯರಾದ ಕಮಲಾ ಮತ್ತು ಮಾಯಾರನ್ನು ಬೆಳೆಸಿದ್ದರು.

ಕಮಲಾ ಹ್ಯಾರಿಸ್ ಗೆ ಭಾರತದ ಸಂಪ್ರದಾಯದ ಪರಿಚಯವಿದೆ. ಅದರಡಿಯಲ್ಲಿಯೇ ತಾಯಿ ಬೆಳೆಸಿದ್ದರು. ಆದರೆ ಅವರು ಈಗ ಸಾಗಿಸುತ್ತಿರುವುದು ಆಫ್ರಿಕಾ ಅಮೆರಿಕನ್ ಜೀವನಶೈಲಿ. ತನ್ನ ತಾಯಿ ಜೊತೆ ಭಾರತಕ್ಕೆ ಬಂದು ಹೋಗುತ್ತಿದ್ದರು. ಕಮಲಾ ಹ್ಯಾರಿಸ್ ಹುಟ್ಟಿದ್ದು ಓಕ್ ಲ್ಯಾಂಡ್ ನಲ್ಲಿ, ಬೆಳೆದದ್ದು ಬರ್ಕೆಲೆಯಲ್ಲಿ. ಕೆನಡಾದಲ್ಲಿ ಹೈಸ್ಕೂಲ್ ಜೀವನ ಕಳೆದರು. ಆಗ ಆಕೆಯ ತಾಯಿ ಎಂಸಿಗಿಲ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು.ನಂತರ ಅಮೆರಿಕದಲ್ಲಿ ಕಾಲೇಜು ಶಿಕ್ಷಣ, ಹಾರ್ವರ್ಡ್ ವಿ.ವಿಯಲ್ಲಿ ಕಮಲಾ ಅಧ್ಯಯನ ಮಾಡಿದರು.ಕ್ಯಾಲಿಫೋರ್ನಿಯಾ, ಹೇಸ್ಟಿಂಗ್ಸ್ ವಿವಿಗಳಲ್ಲಿ ಕಾನೂನು ಪದವಿ ಗಳಿಸಿ ಅಲಮೆಡಾ ಕೌಂಡಿ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ವೃತ್ತಿ ಆರಂಭಿಸಿದರು.

English summary
US Senator Kamala Harris'' nomination as the vice presidential candidate is a "historic moment" but it is not a surprise at all, her proud uncle said here on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X