• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ ಸಂಜಾತೆ

|

ವಾಷಿಂಗ್ಟನ್, ಜನವರಿ 21:ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ಅಮೆರಿಕದ ಎರಡೂ ಶತಮಾನಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸೆನೆಟರ್ ಒಬ್ಬರು ಉಪಾಧ್ಯಕ್ಷೆಯಾಗಿದ್ದಾರೆ.ಅದಲ್ಲದೆ ಈಕೆ ಕಪ್ಪು ವರ್ಣೀಯಳು ಆಗಿದ್ದು, ದಕ್ಷಿಣ ಏಷ್ಯಾದ ಭಾಗದಲ್ಲಿ ಈ ಹುದ್ದೆಗೇರಿದ ಮೊದಲ ಅಮೆರಿಕ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ಬೈಡನ್ ಬರೆದ ದಾಖಲೆ ಏನು?

ಸ್ಥಳೀಯ ಹೈಕೋರ್ಟ್‌ನಲ್ಲಿ ವಕೀಲೆಯಾಗಿರುವ ಕಮಲಾ ಹ್ಯಾರಿಸ್ ಈ ಹುದ್ದೆಗೆ ನಾಮ ನಿರ್ದೇಶನಗೊಂಡಾಗಲೂ ಸ್ಪರ್ಧೆಯಿಂದ ಹಿಂದೆ ಸರಿಯಲು ಮುಂದಾಗಿದ್ದರು, ಆದರೆ ಅಮೆರಿಕದ ಹಾಲಿ ಅಧ್ಯಕ್ಷ ಹಾಗೂ ಡೊನಾಲ್ಡ್ ಟ್ರಂಪ್ ವಿರುದ್ಧ ಗೆದ್ದಿರುವ ಜೋ ಬೈಡನ್ ಸ್ಪರ್ಧೆಯಲ್ಲಿ ಮುಂದುರೆಯುವಂತೆ ಕಮಲಾ ಹ್ಯಾರಿಸ್ ಮನವೊಲಿಸಲು ನೆರವಾದರು.

ಕಮಲಾ ಹ್ಯಾರಿಸ್ ಕೇವಲ ಉಪಾಧ್ಯಕ್ಷೆಯಾಗಿ ಕಂಡರೂ ಜೋ ಬೈಡನ್ ಅವರ ಗೆಲುವಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ.ಹೀಗಾಗಿ ಜೋ ಬೈಡನ್ ನಂತರ ಕಮಲಾ ಹ್ಯಾರಿಸ್ ಮುಂದೆ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ಟ್ರಂಪ್ ಕಾಲಾವಧಿಯಲ್ಲಿ ಸವರ್ಣೀಯರು ಹಾಗೂ ಕಪ್ಪು ವರ್ಣೀಯರ ನಡುವೆ ಜನಾಂಗೀಯ ನಿಂದನೆ ಒಂದು ಹಂತದಲ್ಲಿ ತಾರಕಕ್ಕೇರಿತ್ತು. ದೇಶಾದ್ಯಂತ ಕಪ್ಪು ವರ್ಣೀಯರು ಟ್ರಂಪ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು, ಈ ಹಂತದಲ್ಲಿ ಕಪ್ಪು ವರ್ಣೀಯರಾದ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆಯಾಗಿ ನಾಮನಿರ್ದೇಶಿಸಿದ ಡೆಮಾಕ್ರೆಟಿಕ್ ಪಕ್ಷ ಟ್ರಂಪ್ ವಿರುದ್ಧ ಚುನಾವಣಾ ಅಸ್ತ್ರವನ್ನಾಗಿ ಬಳಿಸಿಕೊಂಡಿತ್ತು. ಇದು ಜೋ ಬೈಡನ್ ಗೆಲುವಿಗೂ ಪ್ರಮುಖ ಕಾರಣವಾಯಿತು.

Biden Inauguration live updates: ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಪ್ರಮಾಣವಚನ ಸ್ವೀಕಾರ

ತಮಿಳುನಾಡಿನ ಪ್ರದೇಶವೊಂದರಲ್ಲಿ ಕಮಲಾ ತಾಯು ಶ್ಯಾಮಲಾ ವಾಸವಾಗಿದ್ದರು, ಬಳಿಕ ಅಮೆರಿಕಕ್ಕೆ ತೆರಳಿ ಅಲ್ಲಿಯೇ ಜೀವನ ನಡೆಸಿದ ಕಮಲಾ ಹ್ಯಾರಿಸ್ ವಕೀಲೆಯಾಗಿಯೂ ಹೆಸರು ಮಾಡಿದ್ದಾರೆ. ಈಗ ಜೋ ಬೈಡನ್ ಹಾಗೂ ಹ್ಯಾರಿಸ್ ಜೋಡಿಯು ಭಾರತದೊಂದಿಗೆ ಹೇಗೆ ಸಂಬಂಧ ಹೊಂದಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

English summary
Kamala Harris has been sworn in as vice-president, becoming the first woman in American history – as well as the first woman of African American and south Asian descent – to hold the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X